Recent News

ಸುಮಲತಾ ಅಭಿನಂದನಾ ಫ್ಲೆಕ್ಸ್​ನಲ್ಲಿ ಮಾಜಿ ಸಿಎಂ ಜೊತೆ ಕೈ ನಾಯಕರ ಫೋಟೋ

ಮಂಡ್ಯ: ಲೋಕಸಭಾ ಕ್ಷೇತ್ರಕ್ಕೆ ನೂತನವಾಗಿ ಸಂಸದೆಯಾಗಿ ಆಯ್ಕೆಯಾದ ಸುಮಲತಾ ಅಂಬರೀಶ್‍ಗೆ ಅಭಿನಂದನೆ ಸಲ್ಲಿಸುವ ಫ್ಲೆಕ್ಸ್​ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರ ಫೋಟೋಗಳು ರಾರಾಜಿಸುತ್ತಿದೆ.

ಮಂಡ್ಯ ನಗರದ ವಿವಿಧೆಡೆ ಅಳವಡಿಸಿರುವ ನೂತನ ಸಂಸದೆ ಸುಮಲತಾ ಅವರಿಗೆ ಶುಭಾಶಯ ಕೋರಿ ಫ್ಲೆಕ್ಸ್ ಅಳವಡಿಸಲಾಗಿದೆ. ಹೀಗೆ ಅಳವಡಿಸಿರುವ ಫ್ಲೆಕ್ಸ್​ನಲ್ಲಿ ಸುಮಲತಾ, ಅಂಬರೀಶ್ ಮತ್ತು ಅಭಿಷೇಕ್ ಫೋಟೋವನ್ನು ಹಾಕಿಸಲಾಗಿದೆ. ಜೊತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್, ಮಾಜಿ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಸೇರಿ ಅನೇಕ ಕಾಂಗ್ರೆಸ್ಸಿಗರ ಫೋಟೋಗಳು ರಾರಾಜಿಸುತ್ತಿವೆ.

ಈ ಫ್ಲೆಕ್ಸ್​ನಲ್ಲಿ “ಮಂಡ್ಯ ಜಿಲ್ಲೆಯ ಸ್ವಾಭಿಮಾನವನ್ನು ಇಂಡಿಯಾದಲ್ಲಿ ತೋರಿಸಿದ ಸ್ವಾಭಿಮಾನಿ ಮಂಡ್ಯದ ಮತಬಾಂಧವರಿಗೆ ಧನ್ಯವಾದಗಳು” ಎಂದು ಬರೆದಿದೆ. ಮಂಡ್ಯ ಜನರಲ್ಲಿ ಈ ವಿಚಾರ ಕುತೂಹಲ ಮೂಡಿಸಿದ್ದು, ಕಾಂಗ್ರೆಸ್ ನಾಯಕರ ಫೋಟೋಗಳು ರಾರಾಜಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ.

Leave a Reply

Your email address will not be published. Required fields are marked *