DistrictsKarnatakaKodaguLatestMain Post

ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಮತ್ತೆ ಅರಳಿದ ಬಿಜೆಪಿ

ಮಡಿಕೇರಿ: ತೀವ್ರ ಕುತೂಹಲ ಮೂಡಿಸಿದ್ದ ಎಂಎಲ್‍ಸಿ ಚುನಾವಣೆಯು ಕೊಡಗು ಕ್ಷೇತ್ರದಲ್ಲಿ ಬಿಜೆಪಿಯ ಸುಜಾ ಕುಶಾಲಪ್ಪ ಗೆಲುವು ಸಾಧಿಸುವ ಮೂಲಕ ಕೊಡಗಿನಲ್ಲಿ ಮತ್ತೆ ಕಮಲ ಅರಳಿಸಿದ್ದಾರೆ.

ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಗಟ್ಟಿಯಾಗಿದ್ದರೂ ಚುನಾವಣೆ ಆರಂಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಇದರಿಂದ ಜಿಲ್ಲೆಯಲ್ಲಿ ಬಿಜೆಪಿಗೆ ಒಂದಷ್ಟು ಟಫ್ ಫೈಟ್ ಎದುರಾಗಿತ್ತು. ಅಂತು 705 ಮತಗಳನ್ನು ಪಡೆದು ಕಾಂಗ್ರೆಸ್ ಎದುರು 102 ಮತಗಳ ಅಂತರದಿಂದ ಗೆಲುವು ಪಡೆದಿದೆ.

ಸುಜಾ ಕುಶಾಲಪ್ಪ ಗೆಲುವು ಪಡೆಯುತ್ತಿದ್ದಂತೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸಂಭ್ರಮ ಆಚರಿಸಿದರು. ಸುಜಾ ಕುಶಾಲಪ್ಪ ಅವರಿಗೆ ಹಾರ, ತುರಾಯಿಗಳನ್ನು ಹಾಕಿ ಬಿಜೆಪಿಗೆ ಜೈಕಾರ ಕೂಗಿ ಸಂಭ್ರಮಿಸಿದರು. ಅಲ್ಲದೆ ಮಡಿಕೇರಿಯ ಪ್ರಮುಖ ಬೀದಿಗಳಲ್ಲಿ ತೆರದ ವಾಹನದಲ್ಲಿ ಸುಜಾ ಕುಶಾಲಪ್ಪ ಅವರನ್ನು ಮೆರವಣಿಗೆ ಮಾಡಿದರು. ಇದನ್ನೂ ಓದಿ: ಕಳೆದ ಬಾರಿ ಸೋತ ಕಡೆ ಈ ಬಾರಿ ನಾವು ಗೆದ್ದಿದ್ದೇವೆ: ಡಿಕೆಶಿ

ಈ ಸಂದರ್ಭದಲ್ಲಿ ಮಾತನಾಡಿದ ಸುಜಾ ಕುಶಾಲಪ್ಪ, ಕಾಂಗ್ರೆಸ್ ಗೆ ಜಿಲ್ಲೆಯಲ್ಲಿ ಚುನಾವಣೆಗೆ ನಿಲ್ಲಿಸಲು ಅಭ್ಯರ್ಥಿಯೂ ಇಲ್ಲದೆ, ಹೊರ ಜಿಲ್ಲೆಯಿಂದ ಅಭ್ಯರ್ಥಿಯನ್ನು ತಂದು ನಿಲ್ಲಿಸಿದರು. ಹಣದ ಮೂಲಕ ಚುನಾವಣೆ ಎದುರಿಸಿದರು. ಆದರೆ ಇಲ್ಲಿನ ಮತದಾರರು ಹಣದಿಂದ ನಡೆಯುವ ಚುನಾವಣೆಯನ್ನು ನಾವು ಬೆಂಬಲಿಸಲ್ಲ ಎನ್ನೋದನ್ನು ತೋರಿಸಿದ್ದಾರೆ. ಈ ಮೂಲಕ ಹೊರಗಿನಿಂದ ಬರುವವರಿಗೆ ಸರಿಯಾದ ಉತ್ತರ ನೀಡಿದ್ದಾರೆ ಎಂದರು.

ಕಳೆದ ಹಲವು ವರ್ಷಗಳಿಂದ ನಮ್ಮ ಪಕ್ಷದ ಇಬ್ಬರು ಶಾಸಕರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಸಹೋದರ ಸುನಿಲ್ ಸುಬ್ರಹ್ಮಣಿ ಅವರು ಗೆದ್ದು ಸಾಕಷ್ಟು ಕೆಲಸ ಮಾಡಿದರು. ಇದೆಲ್ಲವೂ ನಾನು ಗೆಲ್ಲುವು ಸಾಧಿಸಲು ಸಹಾಯವಾಯಿತು. ನಾನು ಕೂಡ ಪ್ರತೀ ಗ್ರಾಮ ಪಂಚಾಯಿತಿ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಬಿಜೆಪಿಗೆ ಗೆಲುವು – ಕೋರ್ಟ್‌ ಮೊರೆ ಹೋಗಲು ಮುಂದಾದ ಕಾಂಗ್ರೆಸ್‌

Leave a Reply

Your email address will not be published.

Back to top button