– ಸೆಲ್ಫಿ ವಿಡಿಯೋ ಮಾಡಿ ಸಾವಿಗೆ ಶರಣು
ಮೈಸೂರು: ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿಧ್ಯಾರ್ಥಿನಿಯೊಬ್ಬಳು ಜೀವನದಲ್ಲಿ ಏನೂ ಸಾಧಿಸೋಕೆ ಆಗಿಲ್ಲ. ಅಲ್ಲದೆ ಬದುಕಿದ್ದಾಗ ನನ್ನ ಯಾರೂ ಲೈಕ್ ಮಾಡಿಲ್ಲ ಎಂದು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಜಿಲ್ಲೆಯ ಬನ್ನಿಮಂಟಪದ ಕಾವೇರಿನಗರದ ನಿವಾಸಿ ಯಾಸ್ಮಿನ್ ತಾಜ್(18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೈಸೂರಿನ ಜೆ.ಎಸ್.ಎಸ್ ಕಾಲೇಜಿನ ಕಾಮರ್ಸ್ ವಿದ್ಯಾರ್ಥಿನಿಯಾಗಿದ್ದ ಈಕೆ ತನಗೆ ಓದು ತಲೆಗೆ ಹತ್ತುತ್ತಿಲ್ಲ ಎಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಈ ಖಿನ್ನತೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ಮಾತ್ರೆ ಸೇವಿಸಿಸುವುದನ್ನು ವಿಡಿಯೋ ಮಾಡಿ, ಇದನ್ನು ಶೇರ್ ಮಾಡುವಂತೆ ಮನವಿ ಕೂಡ ಮಾಡಿದ್ದಾಳೆ.
ಜೆ.ಎಸ್.ಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯಾಸ್ಮಿನ್ ತಾಜ್ ಓದುವುದರಲ್ಲಿ ಹಿಂದಿದ್ದಳು. ಆದ್ದರಿಂದ ಜೀವನದಲ್ಲಿ ತುಂಬಾ ನೊಂದಿದ್ದಳು. ನನಗೆ ಓದುವುದಕ್ಕೆ ಆಸೆ. ಆದ್ರೆ ನನ್ನ ತಲೆಗೆ ಓದು ಹತ್ತಲಿಲ್ಲ, ನಾನೊಬ್ಬಳು ಡಲ್ ಸ್ಟೂಡೆಂಟ್. ಮುಂದೆ ಸಿಂಗರ್ ಅಥವಾ ಲಾಯರ್ ಆಗುವ ಆಸೆ ಇತ್ತು. ದೇವರು ನನ್ನ ಆಸೆಯನ್ನು ಪೂರೈಸಲಿಲ್ಲ. ಜೊತೆಗೆ ನನಗೆ ಆರೋಗ್ಯದ ಸಮಸ್ಯೆ ಕೂಡ ಇದೆ. ಆದ್ದರಿಂದ ಕಾಲೇಜಿಗೆ ಸರಿಯಾಗಿ ಹೋಗಿಲ್ಲ. ಅದಕ್ಕೆ ಪ್ರಿಪರೇಟರಿ ಪರೀಕ್ಷೆಗೆ ಹಾಲ್ ಟಿಕೆಟ್ ಸಿಗಲಿಲ್ಲ. ಜೀವನಲ್ಲಿ ನಾನು ಏನೂ ಸಾಧಿಸಲಿಲ್ಲ ಎಂದು ತನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿಟ್ಟು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಅಷ್ಟೇ ಅಲ್ಲದೆ ವಿಡಿಯೋದಲ್ಲಿ, ಬದುಕಿದ್ದಾಗ ನನ್ನನ್ನ ಯಾರೂ ಲೈಕ್ ಮಾಡಿಲ್ಲ, ಸಾಯುವ ವಿಡಿಯೋನಾದ್ರೂ ಲೈಕ್ ಮಾಡಿ ಶೇರ್ ಮಾಡಿ. ಈ ಮೂಲಕ ಯಾಸ್ಮಿನ್ ಆತ್ಮಹತ್ಯೆ ಮಾಡಿಕೊಂಡಳು ಅಂತ ಪ್ರಪಂಚಕ್ಕೆ ತಿಳಿಸಿ ಎಂದು ತೆಲುಗು ಭಾಷೆಯಲ್ಲಿ ಮನವಿ ಮಾಡಿದ್ದಾಳೆ. ಸದ್ಯ ಈ ಘಟನೆ ಕುರಿತು ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv