ಪಾಟ್ನಾ: ಶಾಲೆಯಲ್ಲಿ (School) ನಡೆಯುತ್ತಿದ್ದ ದುರ್ಗಾ ಪೂಜೆ ವೇಳೆ, ದೇವಿಗೆ ಅರ್ಪಿಸಲು ಇಟ್ಟಿದ್ದ ಸೇಬು (Apple) ಹಣ್ಣನ್ನು ತಿಂದಿದ್ದಕ್ಕಾಗಿ ವಿದ್ಯಾರ್ಥಿಗೆ (Student) ಹೊಡೆದು ಕೊಲೆ ಮಾಡಿದ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ.
ವಿವೇಕ್ (6) ಮೃತ ವಿದ್ಯಾರ್ಥಿ. ಗಯಾದ ವಜೀರ್‌ಗಂಜ್ ಬ್ಲಾಕ್‍ನ ಬಾಕಿ ಬಿಘಾ ಗ್ರಾಮದಲ್ಲಿ ಲಿಟಲ್ ಲೀಡರ್ಸ್ ಪಬ್ಲಿಕ್ ಸ್ಕೂಲ್‍ನ ಆವರಣದಲ್ಲಿ ದುರ್ಗಾಪೂಜೆಯನ್ನು ಆಯೋಜಿಸಲಾಗಿತ್ತು. ಮೇಜಿನ ಮೇಲೆ ಕೆಲವು ಹಣ್ಣುಗಳು (ಪ್ರಸಾದ) ಇತ್ತು. ಇದನ್ನು ನೋಡಿದ ಅಲ್ಲಿನ ವಿದ್ಯಾರ್ಥಿ ವಿವೇಕ್ ಅಲ್ಲಿದ್ದ ಸೇಬನ್ನು ತೆಗೆದುಕೊಂಡು ಸೇವಿಸಿದ್ದ. ಇದನ್ನು ನೋಡಿದ ಶಾಲೆಯ ಮಾಲೀಕರು ಕೋಪದಿಂದ ವಿವೇಕ್‍ನನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಅದಾದ ಬಳಿಕ ಆತನನ್ನು ಆವರಣದ ಹೊರಗೆ ಎಸೆದಿದ್ದಾರೆ.
Advertisement
Advertisement
ಈ ವೇಳೆ ಆಟೋ ಚಾಲಕರೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವಿವೇಕನನ್ನು ಕಂಡು ಬಾಲಕನ ಮನೆಗೆ ಕರೆದಿಕೊಂಡು ಬಂದಿದ್ದಾನೆ. ವಿವೇಕ್‍ನ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ರಾಜ್ಯಸಭೆ ವಿಪಕ್ಷ ನಾಯಕ ಸ್ಥಾನಕ್ಕೆ ಖರ್ಗೆ ರಾಜೀನಾಮೆ
Advertisement
Advertisement
ಘಟನೆಗೆ ಸಂಬಂಧಿಸಿ ವಿವೇಕ್ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ಕೈಗೊಂಡ ಪೊಲೀಸರು ಶಾಲೆಯ ಮಾಲೀಕರಾದ ವಿಕಾಸ್ ಸಿಂಗ್ ಮತ್ತು ಆತನ ಪತ್ನಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ನವರಾತ್ರಿ ಹಬ್ಬದ ಬಳಿಕ ಆಪರೇಷನ್ ಬುಲ್ಡೋಜರ್ ಚಾಪ್ಟರ್-2 ಆರಂಭ