ಹಾವೇರಿ: ಜಿಲ್ಲೆಯಲ್ಲಿ ಬಿರುಗಾಳಿ ಮಳೆಗೆ (Thunderstorm) ಜನ ತತ್ತರಿಸಿ ಹೋಗಿದ್ದಾರೆ. ಬಿರುಗಾಳಿ ಮಳೆಗೆ ರೇಷ್ಮೆ ಬೆಳೆಗಾರರು (Silk Crop) ಕಂಗಾಲಾಗಿದ್ದಾರೆ. ಭಾರೀ ಬಿರುಗಾಳಿ ಮಳೆಗೆ ರೇಷ್ಮೆ ಮನೆಯ ಮೇಲ್ಛಾವಣಿ ಸಂಪೂರ್ಣ ಹಾರಿ ಹೋದ ಘಟನೆ ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
4 ಎಕರೆಯಲ್ಲಿ ಬೆಳೆದಿದ್ದ ರೇಷ್ಮೆ ಹುಳುಗಳು ಸಾಕಾಣಿಕೆ ಮಾಡುತ್ತಿದ್ದ ಶೇಖಪ್ಪ ಕಳ್ಳಿಹಾಳ ಎಂಬವರಿಗೆ ಸೇರಿದ ರೇಷ್ಮೆ ಮನೆ ಸಂಪೂರ್ಣ ಹಾನಿಯಾಗಿದೆ. 10 ಲಕ್ಷಕ್ಕೂ ಅಧಿಕ ಮೌಲ್ಯದ ರೇಷ್ಮೆ ಹುಳುಗಳು ಮತ್ತು ರೇಷ್ಮೆ ಮನೆ ಸಂಪೂರ್ಣ ನಾಶವಾಗಿದೆ. ಇದನ್ನೂ ಓದಿ: ದಾವಣಗೆರೆ | 10 ನಿಮಿಷದ ಮಳೆಗೆ ಸಾವಿರಾರು ಎಕರೆ ಭತ್ತ, 4 ಎಕರೆ ಟೊಮೆಟೊ ನಾಶ
ರೇಷ್ಮೆ ಸಾಕಾಣಿಕೆ ಮಾಡುತ್ತಿದ್ದ ಅನ್ನದಾತರು ಕಂಗಾಲಾಗಿದ್ದಾರೆ. ತಡರಾತ್ರಿ ತಾಡಪಲ್ ಹಾಕಿ ರೇಷ್ಮೆ ಹುಳುಗಳನ್ನ ರಕ್ಷಣೆ ಮಾಡಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಒಬ್ಬ ಮಂತ್ರಿ ಮೆಟ್ರೋ ಹತ್ತೋದು, ಮತ್ತೊಬ್ಬ ಬೈಕ್ ಹತ್ತೋದು ಬಿಜೆಪಿಯವರದ್ದು ಒಂದು ದಿನದ ನಾಟಕ ಅಷ್ಟೇ; ಪ್ರಿಯಾಂಕ್ ಖರ್ಗೆ

