ನಿರ್ದೇಶಕ ಕಬೀರ್ ಖಾನ್ (Kabir Khan) ಅವರ ಮುಂಬರುವ ಸಿನಿಮಾದ ಶೂಟಿಂಗ್ ವೇಳೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ (Kartik Aaryan) ಅವರ ಮೊಣಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸದ್ಯ ನಟ ಕಾರ್ತಿಕ್ ಅವರನ್ನು ಮುಂಬೈನ (Mumbai) ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿದೆ ಎನ್ನಲಾಗಿದೆ. ಇದನ್ನೂ ಓದಿ: ಸಂಕ್ರಾಂತಿ ಹಬ್ಬಕ್ಕೆ ಭಾರೀ ಉಡುಗೊರೆ ಕೊಟ್ಟ ನಟ ಸಾಯಿ ದುರ್ಗಾ ತೇಜ್
ಸಿನಿಮಾದ ಸಾಹಸ ದೃಶ್ಯವೊಂದರ ಚಿತ್ರೀಕರಣದ ಸಮಯದಲ್ಲಿ ಕಾರ್ತಿಕ್ ಆರ್ಯನ್ ಅವರ ಮೊಣಕಾಲಿಗೆ ಗಾಯವಾಗಿದ್ದು, ಕೊನೆಯ ಎರಡು ದಿನಗಳ ಚಿತ್ರೀಕರಣದ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ.
ಕಬೀರ್ ಖಾನ್ ಅವರ ಈ ಸಿನಿಮಾದಲ್ಲಿ ಕಾರ್ತಿಕ್ ಕಿಕ್ ಬಾಕ್ಸಿಂಗ್ ತರಬೇತುದಾರನ ಪಾತ್ರದಲ್ಲಿ ನಟಿಸಿದ್ದು, ಈ ಮೂಲಕ ಡೋಪಮೈನ್ ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಪಕರಾಗಿ ಪಾದಾರ್ಪಣೆ ಮಾಡಿದ್ದಾರೆ. ಸದ್ಯ ಕಾರ್ತಿಕ್ ಗಾಯಗೊಂಡ ಹಿನ್ನೆಲೆ ಸಿನಿಮಾ ಶೂಟಿಂಗ್‌ನ ಮುಂಬರುವ ವೇಳಾಪಟ್ಟಿ ಸ್ವಲ್ಪ ವಿಳಂಬವಾಗಲಿದೆ.ಇದನ್ನೂ ಓದಿ: ಡಬ್ಬಿಂಗ್ ಮುಗಿಸಿದ ‘ಹುಬ್ಬಳ್ಳಿ ಹಂಟರ್ಸ್’; ಬೆಲ್ ಬಾಟಮ್ ಟೀಮ್ ಖುಷಿ

