ತುಮಕೂರು: ದೇವಸ್ಥಾನದ ಬಳಿ ತೆರಳುತ್ತಿದ್ದ ಬಾಲಕನ (Boy) ಮೇಲೆ ಆರೇಳು ಬೀದಿ ನಾಯಿಗಳು (Stray Dogs) ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ತುಮಕೂರು (Tumakuru) ಜಿಲ್ಲೆಯ ಚಿಕ್ಕನಾಯಕನಹಳ್ಳಿ (Chikkanayakanahalli) ತಾಲೂಕಿನ ಜೋಗಿಹಳ್ಳಿಯಲ್ಲಿ ನಡೆದಿದೆ.
ಐದು ವರ್ಷದ ಬಾಲಕ ಊರಿನ ಆಂಜನೇಯ ದೇವಸ್ಥಾನದ ಬಳಿ ತೆರಳುತಿದ್ದ ವೇಳೆ ಏಕಾಏಕಿ ಬೀದಿ ನಾಯಿಗಳು ದಾಳಿ ನಡೆಸಿ ಕುತ್ತಿಗೆಗೆ ಬಾಯಿ ಹಾಕಿವೆ. ಕೂಡಲೇ ಸ್ಥಳದಲ್ಲಿ ವಾಕಿಂಗ್ ಮಾಡತ್ತಿದ್ದವರು ಬಾಲಕನ ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿ ಪವಿತ್ರಾಗೌಡಗೆ ರಾಜಾತಿಥ್ಯ ಆರೋಪ – ಸಂಧ್ಯಾ ನಾಗರಾಜ್ ವಿರುದ್ಧ ದೂರು
ಬೀದಿನಾಯಿಗಳ ದಾಳಿಯಿಂದಾಗಿ ಬಾಲಕನ ಕುತ್ತಿಗೆ, ಕೈ ಹಾಗೂ ಬೆನ್ನಿನ ಭಾಗಕ್ಕೆ ಗಾಯಗಳಾಗಿವೆ. ಸದ್ಯ ಗಾಯಾಳು ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಹೋಟೆಲ್ ಆಂಟಿ ಜೊತೆ ಅಂಕಲ್ ಲವ್ವಿಡವ್ವಿ – ಓಡಿ ಹೋಗಿ ಮದುವೆ
