– ಆಂಟಿ ಗಂಡ, ಅಂಕಲ್‌ನ ಹೆಂಡತಿ ಪೊಲೀಸ್ ಠಾಣೆಗೆ ದೂರು
ಮಂಡ್ಯ: ಹೋಟೆಲ್ ಆಂಟಿ (Aunty) ಜೊತೆ ಅಂಕಲ್ (Uncle) ಎಸ್ಕೇಪ್ ಆಗಿ ಮದುವೆಯಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆ ನಾಗಮಂಗಲ (Nagamangala) ತಾಲೂಕಿನ ಶಿಕಾರಿಪುರ ಗ್ರಾಮದಲ್ಲಿ ನಡೆದಿದೆ.
ಪವಿತ್ರ, ಯೇಸುದಾಸ್ ಓಡಿ ಹೋಗಿ ಮದುವೆಯಾದ ಆಂಟಿ, ಅಂಕಲ್. ಪವಿತ್ರಗೆ ಹಲವು ವರ್ಷದ ಹಿಂದೆಯೇ ವಿಜಯ್ ಕುಮಾರ್ ಎಂಬಾತನ ಜೊತೆ ಮದುವೆಯಾಗಿತ್ತು. ಪವಿತ್ರ, ವಿಜಯ್‌ಗೆ ಎರಡು ಮಕ್ಕಳು ಸಹ ಇದ್ದಾರೆ. ಅತ್ತ ಯೇಸುದಾಸ್‌ಗೂ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಹೋಟೆಲ್ ನಡೆಸುತ್ತಿದ್ದ ಪವಿತ್ರ ಜೊತೆ ಊಟಕ್ಕೆಂದು ಬರುತ್ತಿದ್ದ ಯೇಸುದಾಸ್ ಲವ್‌ನಲ್ಲಿ ಬಿದ್ದಿದ್ದಾನೆ. ಲವ್ವಿ-ಡವ್ವಿ ಆಡಿಕೊಂಡೇ ವಾರದ ಹಿಂದೆ ಆಂಟಿ-ಅಂಕಲ್ ಎಸ್ಕೇಪ್ ಆಗಿದ್ದಾರೆ. ಇದೀಗ ತಾವು ಮದುವೆ ಆಗಿರುವುದಾಗಿ ಪೋಟೋ ರಿಲೀಸ್ ಮಾಡಿದ್ದಾರೆ. ಇದನ್ನೂ ಓದಿ: 28,350 ಕೋಟಿ ಪರಿಹಾರ, ಇರಾನ್ ಮೇಲಿನ ನಿರ್ಬಂಧ ತೆರವು – 14 ಅಂಶಗಳ ಶಾಂತಿ ಒಪ್ಪಂದಕ್ಕೆ ಅಮೆರಿಕ-ಇರಾನ್ ಸಹಿ
ಪವಿತ್ರ ತನ್ನ ಗಂಡನಿಗೆ ಮತ್ತೊಂದು ಮದುವೆಯಾದ ಪೋಟೋ ಕಳುಹಿಸಿದ್ದಾಳೆ. ಅತ್ತ ಯೇಸುದಾಸ್ ಕೂಡ ತನ್ನ ಹೆಂಡತಿಗೆ ಪವಿತ್ರ ಜೊತೆ ಮದುವೆಯಾದ ಪೋಟೋ ಶೇರ್ ಮಾಡಿದ್ದಾನೆ. ಇದೀಗ ಪವಿತ್ರ ಗಂಡ ವಿಜಯ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಕ್ಕಳಿಗಾಗಿ ಹೆಂಡತಿಯನ್ನ ವಾಪಸ್ ಕರೆಸುವಂತೆ ದೂರು ನೀಡಲಾಗಿದೆ. ಅತ್ತ ಯೇಸುದಾಸ್‌ಗಾಗಿ ಆತನ ಪತ್ನಿಯೂ ದೂರು ನೀಡಿದ್ದಾರೆ. ಘಟನೆ ಸಂಬಂಧ ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತಕ್ಕೆ ಪೋಕ್ಸೋ ಕೇಸ್ – ವಚನಾನಂದ ಸ್ವಾಮೀಜಿ ಭವಿಷ್ಯ ಇಂದು ನಿರ್ಧಾರ
