ಟೆಹ್ರಾನ್/ವಾಷಿಂಗ್ಟನ್: ಇಸ್ರೇಲ್ – ಲೆಬನಾನ್ ನಡುವೆ ಕದನ ವಿರಾಮ (Israel Lebanon Ceasefire) ಘೋಷಣೆಯಾದ ಬೆನ್ನಲ್ಲೇ ಇರಾನ್ ಸಿಹಿಸುದ್ದಿ ಕೊಟ್ಟಿದೆ. ವಿಶ್ವದ ಎಲ್ಲಾ ರಾಷ್ಟ್ರಗಳ ವಾಣಿಜ್ಯ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯನ್ನ (Strait of Hormuz) ಮುಕ್ತಗೊಳಿಸಿದೆ.
ಇಸ್ರೇಲ್-ಲೆಬನಾನ್ ಸಂಘರ್ಷಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 10 ದಿನಗಳ ಕದನವಿರಾಮ ಘೋಷಿಸಿದ್ದರು. ಈ ಬೆನ್ನಲ್ಲೇ ಪ್ರಮುಖ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನ ಇರಾನ್ ಎಲ್ಲಾ ವಾಣಿಜ್ಯ ಹಡಗುಗಳ (Commercial Vessels) ಸಾಗಣೆಗೆ ಮುಕ್ತಗೊಳಿಸಿದೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ (Abbas Araghchi) ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಲೋಕಸಭೆಯಲ್ಲಿ ʻನಾರಿಶಕ್ತಿ ಬಿಲ್ʼ ತಿರಸ್ಕಾರ – ಗೆದ್ದ ವಿಪಕ್ಷಗಳ ಹಠ; NDA ಸರ್ಕಾರಕ್ಕೆ ಮುಖಭಂಗ
ಲೆಬನಾನ್‌ನಲ್ಲಿ ಕದನ ವಿರಾಮಕ್ಕೆ ಅನುಗುಣವಾಗಿ, ಇರಾನ್‌ನ ಇಸ್ಲಾಮಿಕ್ ಪ್ರತಿನಿಧಿಯ ಬಂದರುಗಳು ಮತ್ತು ಕಡಲ ಸಂಸ್ಥೆ ಈಗಾಗಲೇ ಘೋಷಿಸಿದಂತೆ, ಉಳಿದ ಕದನ ವಿರಾಮದ ಅವಧಿಗೆ, ಹಾರ್ಮುಜ್ ಜಲಸಂಧಿಯ ಮೂಲಕ ಎಲ್ಲಾ ವಾಣಿಜ್ಯ ಹಡಗುಗಳ ಮಾರ್ಗವನ್ನು ಸಂಪೂರ್ಣವಾಗಿ ಮುಕ್ತವೆಂದು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಈ ಬೆಳವಣಿಗೆ ಕುರಿತು ತಕ್ಷಣದ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಇರಾನ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ನನಗೂ, ಮೋದಿಯವರಿಗೂ ʻಹೆಂಡ್ತಿʼ ಚಿಂತೆ ಇಲ್ಲ!, ಆದ್ರಿಂದ ನಮ್ಗೆ ಆ ಮಾಹಿತಿ ಸಿಗಲ್ಲ: ರಾಗಾ ಹಾಸ್ಯ

ಹಾರ್ಮುಜ್ ಜಲಸಂಧಿ ಸಂಪೂರ್ಣ ಮುಕ್ತವಾಗಿದೆ, ಪೂರ್ಣ ಮಾರ್ಗಕ್ಕೆ ಸಿದ್ಧವಾಗಿದೆ ಎಂದು ಇರಾನ್ ಘೋಷಿಸಿದೆ. ಧನ್ಯವಾದಗಳು ಎಂದು ತಮ್ಮ ಸೋಷಿಯಲ್ ಮೀಡಿಯಾ ವೇದಿಕೆ ಟ್ರುತ್ ಸೋಷಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.
ಯುರೇನಿಯಂ ಹೇಳಿಕೆ ತಿರಸ್ಕರಿಸಿದ ಇರಾನ್
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆ ಇಸ್ರೇಲ್-ಲೆಬನಾನ್ ಯುದ್ಧಕ್ಕೆ ಮಾತುಕತೆ ಬಳಿಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 10 ದಿನಗಳ ಕದನವಿರಾಮ ಘೋಷಿಸಿದ್ದಾರೆ. ಇತ್ತ, ಇರಾನ್‌ನೊಂದಿಗಿನ ಮಾತುಕತೆ ಕುರಿತು ಟೆಹ್ರಾನ್ ಯುರೇನಿಯಂ ಪುಷ್ಟೀಕರಣವನ್ನ ಅಮೆರಿಕಕ್ಕೆ ಹಸ್ತಾಂತರಿಸಲು ಸಿದ್ದವಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಈ ಹೇಳಿಕೆಯನ್ನು ಇರಾನ್ ತಿರಸ್ಕರಿಸಿದೆ. ಇತ್ತ ಇಸ್ರೇಲ್‌ನೊಂದಿಗಿನ ಲೆಬನಾನ್ ಸರ್ಕಾರದ ಮಾತುಕತೆಗಳಿಗೆ ಹೆಜ್ಬೊಲ್ಲಾ ವಿರೋಧ ವ್ಯಕ್ತಪಡಿಸಿದ್ದು, ಕದನವಿರಾಮದ ಮಧ್ಯೆಯೂ ದಾಳಿಯ ಆತಂಕ ಹೆಚ್ಚಿಸಿದೆ. ಇದನ್ನೂ ಓದಿ: ಸೂಕ್ಷ್ಮ ನಿರ್ಧಾರ ತೆಗೆದುಕೊಳ್ಳಿ, ತಿದ್ದುಪಡಿಗಳನ್ನು ಬೆಂಬಲಿಸಿ: ಮಹಿಳಾ ಮೀಸಲಾತಿ ಕಾನೂನು ಬೆಂಬಲಕ್ಕೆ ಮೋದಿ ಮನವಿ

