– ನಾನು 20 ವರ್ಷದಲ್ಲಿ ಮಾಡಲಾಗದ್ದನ್ನ ನನ್ನ ಸಹೋದರಿ 5 ನಿಮಿಷದಲ್ಲಿ ಮಾಡಿದಳು
ನವದೆಹಲಿ: ನನಗೂ ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೂ ಮನೆಯಲ್ಲಿ ಹೆಂಡತಿ ಚಿಂತೆ ಇಲ್ಲ, ಹಾಗಾಗಿ ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ನಾವಿಬ್ಬರೂ ನಿರಾತಂಕವಾಗಿ ಮಾತನಾಡಬಹುದು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandi) ಹಾಸ್ಯ ಚಟಾಕಿ ಹಾರಿಸಿದ್ರು.
#WATCH | “Prime Minister and myself don’t have that wife issue…,” says LoP, Lok Sabha, Rahul Gandhi on a light-hearted note during the special session of Parliament on women’s reservation and delimitation. pic.twitter.com/ZVdPvRalFz
— ANI (@ANI) April 17, 2026
ಲೋಕಸಭೆಯ ವಿಶೇಷ ಸಂಸತ್ ಅಧಿವೇಶನದಲ್ಲಿ ನಡೆದ ಮಹಿಳಾ ಮೀಸಲಾತಿ ಮಸೂದೆ (Women Reservation Bill) ಕುರಿತ ಚರ್ಚೆ ವೇಳೆ ಅವರು ಮಾತನಾಡಿದರು. ಇದನ್ನೂ ಓದಿ: ಮಹಿಳಾ ಸಬಲೀಕರಣ ಅಲ್ಲ, ಭಾರತದ ಚುನಾವಣಾ ನಕ್ಷೆ ಬದಲಿಸುವ ಬಿಲ್: ರಾಹುಲ್ ಗಾಂಧಿ ಆರೋಪ
ಮಹಿಳೆಯರು ಕೇಂದ್ರ ಶಕ್ತಿ, ನಮ್ಮ ರಾಷ್ಟ್ರೀಯ ಪರಿಕಲ್ಪನೆಯಲ್ಲಿ, ರಾಷ್ಟ್ರದ ದೃಷ್ಟಿಕೋನದಲ್ಲಿ ಒಂದು ಪ್ರೇರಕ ಶಕ್ತಿ. ಈ ಸದನದಲ್ಲಿರುವ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮಹಿಳೆಯರಿಂದ ಪ್ರಭಾವಿತರಾಗಿದ್ದಾರೆ. ತಾಯಿ, ಸಹೋದರಿ ಅಥವಾ ಹೆಂಡತಿ ಅಂತಹ ಸಂಬಂಧಗಳ ರೂಪದಲ್ಲಿ ಪ್ರಭಾವ ಹೊಂದಿದ್ದಾರೆ. ಆದ್ರೆ ನನಗೆ ಮತ್ತು ಮೋದಿ ಅವರಿಗೆ ಪತ್ನಿ ಸಮಸ್ಯೆ ಇಲ್ಲ. ನಮಗೆ ತಾಯಂದಿರು, ಸೋದರಿಯರು ಇದ್ದಾರೆ ಎಂದು ಹೇಳಿದ್ರು, ಇದು ವಿಪಕ್ಷ ನಾಯಕರನ್ನ ನಗೆಗಡಲಲ್ಲಿ ತೇಲುವಂತೆ ಮಾಡಿತು.

ಮುಂದುವರಿದು… ನನಗೆ ಕಳೆದ 20 ವರ್ಷದ ರಾಜಕೀಯ ಜೀವನದಲ್ಲಿ ಮಾಡಲಾಗದ್ದನ್ನ ನನ್ನ ಸಹೋದರಿ 5 ನಿಮಿಷದಲ್ಲಿ ಸಾಧಿಸಿದ್ದನ್ನ ನಾನು ನೋಡಿದೆ. ಅದು ಅಮಿತ್ ಶಾ ಅವರ ಮುಖದಲ್ಲಿ ನಗು ತರಿಸಲು ಆಕೆಗೆ ಸಾಧ್ಯವಾಗಿದ್ದು ಎಂದು ಮತ್ತೊಂದು ಹಾಸ್ಯ ಚಟಾಕಿ ಹಾರಿಸಿದ್ರು. ಇದನ್ನೂ ಓದಿ: ಸೂಕ್ಷ್ಮ ನಿರ್ಧಾರ ತೆಗೆದುಕೊಳ್ಳಿ, ತಿದ್ದುಪಡಿಗಳನ್ನು ಬೆಂಬಲಿಸಿ: ಮಹಿಳಾ ಮೀಸಲಾತಿ ಕಾನೂನು ಬೆಂಬಲಕ್ಕೆ ಮೋದಿ ಮನವಿ
ನಿನ್ನೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಚರ್ಚೆಯಲ್ಲಿ ವಯನಾಡು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ (Priyanka Gandhi Vadra) ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಉದ್ದೇಶಿಸಿ, ಇಂದು ಚಾಣಕ್ಯ (Chanakya) ಬದುಕಿದ್ದರೆ ನಿಮ್ಮ ರಾಜಕೀಯ ಚತುರತೆಯನ್ನು ನೋಡಿ ಆತನಿಗೆ ಆಘಾತವಾಗುತ್ತಿತ್ತು ಎಂದು ಟಾಂಗ್ ಕೊಟ್ಟಿದ್ದರು.
ಮಹಿಳಾ ಮೀಸಲಾತಿ ಬೆಂಬಲಿಸಿ ಮಾತನಾಡಿದ ಅವರು, ತಮ್ಮ ಪಕ್ಷವು ಮಹಿಳಾ ಪ್ರಾತಿನಿಧ್ಯವನ್ನು ವಿರೋಧಿಸುತ್ತಿಲ್ಲ. ಆದರೆ ಮಸೂದೆಯ ಸಮಯ ಮತ್ತು ರಚನೆಯ ಹಿಂದಿನ ರಾಜಕೀಯ ಉದ್ದೇಶವನ್ನು ಪ್ರಶ್ನಿಸುತ್ತಿದೆ. ಆಡಳಿತಾರೂಢ ಎನ್‌ಡಿಎ ಸರ್ಕಾರ ಮಹಿಳೆಯರ ಸಬಲೀಕರಣ ಮಡುವುದಕ್ಕಿಂತ ಹೆಚ್ಚಾಗಿ ಚುನಾವಣಾ ತಂತ್ರವಾಗಿ ಬಳಸುತ್ತಿದೆ ಎಂದು ದೂರಿದ್ದರು. ಇದನ್ನೂ ಓದಿ: ʻಚಾಣಕ್ಯʼನನ್ನು ಉಲ್ಲೇಖಿಸಿ ಅಮಿತ್ ಶಾಗೆ ನಗುನಗುತ್ತಲೇ ತಿವಿದ ಪ್ರಿಯಾಂಕಾ- ಗೊಳ್ಳೆಂದು ನಕ್ಕ ಗೃಹಮಂತ್ರಿ
ಮೋದಿ ಮಾತನ್ನು ಪ್ರಿಯಾಂಕಾ ಗಾಂಧಿ ಉಲ್ಲೇಖಿಸಿಸುತ್ತಿದ್ದಂತೆ ಅಮಿತ್ ಶಾ ಸೇರಿದಂತೆ ಆಡಳಿತರೂಢ ಬಿಜೆಪಿ ಸಂಸದರು ನಗೆಯಾಡಲು ಆರಂಭಿಸಿದರು. ಅಮಿತ್ ಶಾ ನಗುತ್ತಿರುವುದನ್ನು ನೋಡಿ, ಆಡಳಿತ ಪಕ್ಷವು ಸಂಪೂರ್ಣವಾಗಿ ಸಿದ್ಧವಾಗಿರುವಂತೆ ತೋರುತ್ತಿದೆ. ಒಂದು ವೇಳೆ ಚಾಣಕ್ಯ ಇಂದು ಜೀವಂತವಾಗಿದ್ದರೆ, ಚುನಾವಣೆಗಳನ್ನು ಗೆಲ್ಲಲು ನೀವು ಮಾಡುತ್ತಿರುವ ರಾಜಕೀಯ ಕುತಂತ್ರವನ್ನು ನೋಡಿ ಆತನೇ ಶಾಕ್‌ಗೆ ಒಳಗಾಗುತ್ತಿದ್ದ ಎಂದು ನಗುನಗುತ್ತಲೇ ತಿವಿದರು. ಪ್ರಿಯಾಂಕಾ ಅವರ ಈ ಹೇಳಿಕೆಯಿಂದ ಸದನ ನಗೆಗಡಲಲ್ಲಿ ತೇಲಿತು.

