– ಜಲಸಂಧಿ ದಾಟಲು ಯತ್ನಿಸಿದ್ರೆ ದಾಳಿ ಎಚ್ಚರಿಕೆ
ಟೆಹ್ರಾನ್: ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮತ್ತೆ ಮುಚ್ಚಲಾಗಿದೆ. ಅದನ್ನು ಸಮೀಪಿಸುವ ಯಾವುದೇ ಹಡಗನ್ನು ಟಾರ್ಗೆಟ್ ಮಾಡಿ ಹೊಡೆಯಲಾಗುವುದು ಎಂದು ಇರಾನ್ (Iran) ಎಚ್ಚರಿಕೆ ನೀಡಿದೆ. ಭಾರತ ತೆರಳುತ್ತಿದ್ದ 14 ಹಡಗುಗಳನ್ನು ಇರಾನ್ ತಡೆದಿದೆ.
ಶನಿವಾರ ಇರಾನ್ ಜಲಸಂಧಿ ಅಥವಾ ಅದರ ಸಮೀಪದಲ್ಲಿರುವ ಹಡಗುಗಳು, ಒಂದು ಟ್ಯಾಂಕರ್ ಮೇಲೆ ಗುರಿಯಿಡಲಾಗಿದೆ ಎಂಬ ವರದಿಗಳು ಹೊರಬಿದ್ದವು. ಅದರ ಬೆನ್ನಲ್ಲೇ ಹಾರ್ಮುಜ್ ಜಲಸಂಧಿ ಮುಚ್ಚಲಾಗಿದೆ. ಇದನ್ನೂ ಓದಿ: ಭಾರತದ ಎರಡು ತೈಲ ಟ್ಯಾಂಕರ್ ಮೇಲೆ ಇರಾನ್ ಗುಂಡಿನ ದಾಳಿ
ಪ್ರಮುಖ ಜಾಗತಿಕ ಹಡಗು ಮಾರ್ಗವನ್ನು ತಾತ್ಕಾಲಿಕವಾಗಿ ಪುನಃ ತೆರೆಯಲಾಗಿದೆ ಎಂದು ಇರಾನ್‌ನ ವಿದೇಶಾಂಗ ಸಚಿವರು ಘೋಷಿಸಿದ್ದರು. ಜಲಸಂಧಿ ತೆರೆದು ಒಂದು ದಿನ ಕಳೆಯುವಷ್ಟರಲ್ಲಿ ಮತ್ತೆ ಬಂದ್ ಮಾಡಲಾಗಿದೆ. ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ (IRGC) ತನ್ನ ನಿರ್ಧಾರಕ್ಕೆ ಅಮೆರಿಕದ ನಿರಂತರ ದಿಗ್ಬಂಧನವೇ ಕಾರಣ ಎಂದು ಆರೋಪಿಸಿದೆ.
ಇರಾನ್ ಸುಮಾರು ಎರಡು ತಿಂಗಳಿನಿಂದ ಪರಿಣಾಮಕಾರಿಯಾಗಿ ನಿರ್ಬಂಧಿಸಿರುವ ಜಲಮಾರ್ಗದ ವಿಚಾರವಾಗಿ ಅಮೆರಿಕಗೆ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಪರ್ಷಿಯನ್ ಕೊಲ್ಲಿ ಅಥವಾ ಒಮನ್ ಸಮುದ್ರದಲ್ಲಿನ ತನ್ನ ಲಂಗರು ಹಾಕುವಿಕೆಯಿಂದ ಯಾವುದೇ ಹಡಗು ಚಲಿಸಬಾರದು ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆಯು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಅಮೆರಿಕ ನೌಕಾ ದಿಗ್ಬಂಧನ ತೆಗೆಯದಿದ್ರೆ, ಹಾರ್ಮುಜ್ ಜಲಸಂಧಿಯನ್ನ ಮತ್ತೆ ಮುಚ್ಚುತ್ತೇವೆ: ಇರಾನ್ ವಾರ್ನಿಂಗ್
ಶುಕ್ರವಾರ ರಾತ್ರಿಯಿಂದ ತನ್ನ ನಿರ್ವಹಣೆಯಲ್ಲಿರುವ ಜಲಸಂಧಿಯ ಮೂಲಕ ಹಲವಾರು ಹಡಗುಗಳು ಹಾದು ಹೋಗಿವೆ. ಆದರೆ, ಅಮೆರಿಕ ಇರಾನಿನ ಬಂದರುಗಳ ಮೇಲಿನ ದಿಗ್ಬಂಧನವನ್ನು ತೆಗೆಯುವವರೆಗೆ ಜಲಸಂಧಿಯನ್ನು ಮತ್ತೆ ಬಂದ್ ಮಾಡಲಾಗಿದೆ ಎಂದು ಐಆರ್‌ಜಿಸಿ ತಿಳಿಸಿದೆ.

