ಮಂಡ್ಯ: ಬರೀ ಟೀಕೆ-ಅಸೂಯೆ ಪಡುವುದನ್ನು ಬಿಟ್ಟು ರೈತರು ಹಾಗೂ ನಾಡಿನ ಅಭಿವೃದ್ಧಿಯ ಬಗ್ಗೆ ಸಲಹೆಗಳನ್ನು ನೀಡಿ ಎಂದು ಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಬಿಜೆಪಿ (BJP) ಮತ್ತು ಜೆಡಿಎಸ್ (JDS) ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಮಂಡ್ಯದಲ್ಲಿ (Mandya) ಆಯೋಜಿಸಲಾಗಿದ್ದ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದ ಸಾಧನೆಗಳು, ರೈತರ ಪರ ಕಾಳಜಿ ಮತ್ತು ಮುಂಬರುವ ರಾಜಕೀಯ ಬೆಳವಣಿಗೆಗಳ ಕುರಿತು ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಗಡಿಪಾರು ಆದೇಶ ಎತ್ತಿಹಿಡಿದ ಗೃಹ ಇಲಾಖೆ – ರದ್ದು ಕೋರಿ ತಿಮರೋಡಿ ಸಲ್ಲಿಸಿದ್ದ ಅರ್ಜಿ ವಜಾ
ನಾನು ಯಾರನ್ನು ಟೀಕೆ ಮಾಡಲು ಇಲ್ಲಿ ಬಂದಿಲ್ಲ. ಟೀಕೆ ಮತ್ತು ಅಸೂಯೆ ಮಾಡುವುದರಿಂದ ಏನೂ ಆಗುವುದಿಲ್ಲ. ಅಸೂಯೆಗೆ ಯಾವುದೇ ಮದ್ದಿಲ್ಲ. ನಾವು ಟೀಕೆಗಳಿಗೆ ಎದೆಗುಂದುವುದಿಲ್ಲ. ಬಲಿಷ್ಠ ವಿರೋಧ ಪಕ್ಷವಿರಬೇಕು ಎನ್ನುವುದು ನನ್ನ ಆಸೆ, ಆದರೆ ಬರೀ ಟೀಕೆ ಮಾಡದೆ ಅಭಿವೃದ್ಧಿ ಬಗ್ಗೆ ಸಲಹೆ ನೀಡಿ ಎಂದು ಸವಾಲು ಹಾಕಿದ್ದಾರೆ.
ಹಾಲಿನ ದರವನ್ನು (Milk Rate) ಏರಿಕೆ ಮಾಡಿ, ರೈತರಿಗೆ ಪ್ರತಿ ಲೀಟರ್ಗೆ ಹೆಚ್ಚುವರಿಯಾಗಿ 7 ರೂ. ನೀಡಲಾಗುತ್ತಿದೆ. ಆದರೆ, ಇದನ್ನೂ ಸಹ ಬಿಜೆಪಿ ನಾಯಕರು ವಿರೋಧಿಸುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ರೈತರ ಏಳಿಗೆಯನ್ನು ಸಹಿಸಲು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಮಡಿಕೇರಿ | ಆಟೋದಲ್ಲೇ ಡ್ರಗ್ಸ್ ಇಟ್ಟುಕೊಂಡು ಮಾರಾಟಕ್ಕೆ ಸ್ಕೆಚ್ – 4.04 ಲಕ್ಷ ಮೌಲ್ಯದ MDMA ವಶ; ಇಬ್ಬರ ಬಂಧನ
ಕಬ್ಬು ಬೆಳೆಗಾರರ (Sugarcane Farmers) ಸಮಸ್ಯೆ ಬಗೆಹರಿಸಲು ಬೆಳಗಾವಿಯಲ್ಲಿ ಎರಡು ದಿನ ಕುಳಿತು ಚರ್ಚಿಸಿದ್ದೇವೆ. ಕೇಂದ್ರ ಸರ್ಕಾರ ಸಕ್ಕರೆ ಬೆಲೆಯನ್ನು 50 ರೂ.ಗೆ ಏರಿಸಲಿ, ಇದರಿಂದ ರೈತರಿಗೆ ಹೆಚ್ಚಿನ ಸಹಾಯವಾಗುತ್ತದೆ. ಕಬ್ಬು ಬೆಳೆಗಾರರಿಗೆ ರಕ್ಷಣೆ ನೀಡಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಕಾವೇರಿ ತಾಯಿಗೆ ಪ್ರಾರ್ಥನೆ ಮಾಡಿದ್ದು, ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ. ಮೇಕೆದಾಟು ಯೋಜನೆ ಆರಂಭವಾದರೆ ಹಾಸನ, ಮಂಡ್ಯ, ಮೈಸೂರು ಹಾಗೂ ತಮಿಳುನಾಡಿಗೂ ಅನುಕೂಲವಾಗಲಿದೆ. ನಮ್ಮ ಹೋರಾಟಕ್ಕೆ ತಕ್ಕಂತೆ ಸುಪ್ರೀಂಕೋರ್ಟ್ನಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದೆ ಎಂದು ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಜೊತೆಗೆ ವಿವಿಧ ಕಲ್ಯಾಣ ಯೋಜನೆಗಳ ಮೂಲಕ ಜನರಿಗೆ 1 ಲಕ್ಷ ಕೋಟಿಗೂ ಅಧಿಕ ಹಣವನ್ನು ನೀಡುತ್ತಿದ್ದೇವೆ. ನಾನು ಡಿಸಿಎಂ ಆದ ಮೇಲೆ ನೂರಾರು ಕೋಟಿ ರೂ. ಅನುದಾನವನ್ನು ಪ್ರತಿಯೊಂದು ಕ್ಷೇತ್ರಕ್ಕೂ ನೀಡಿದ್ದೇನೆ. ಆದರೆ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ-ಜೆಡಿಎಸ್ ಯಾವ ಅಭಿವೃದ್ಧಿಯನ್ನೂ ಮಾಡಲಿಲ್ಲ ಎಂದು ಹರಿಹಾಯ್ದಿದ್ದಾರೆ.ಇದನ್ನೂ ಓದಿ: ಸರ್ದಾರ್ ಪಟೇಲ್ರ ಮತಗಳನ್ನು ಕದ್ದು ನೆಹರು ಪ್ರಧಾನಿಯಾದ್ರು – ಬಿಜೆಪಿ ಸಂಸದ ಸಂಬಿತ್ ಪಾತ್ರಾ ಗಂಭೀರ ಆರೋಪ
ನಾನು ಕೃಷಿ ಕುಟುಂಬದಿಂದ ಬಂದವನು, ರೈತರ ಸಂಕಷ್ಟ ಏನೆಂದು ನನಗೆ ಚೆನ್ನಾಗಿ ಗೊತ್ತು. 2028-29ರ ಸಂಕಷ್ಟದ ಕಾಲದಲ್ಲಿ ನೀವು ನನ್ನ ಕೈ ಹಿಡಿಯಬೇಕು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.ಇದನ್ನೂ ಓದಿ: ಮಂಡ್ಯ ARAI ಭೂಮಿ ಹಂಚಿಕೆ ವಿವಾದ | ಭೂಮಿ ಮಂಜೂರಾತಿ ಪತ್ರ ಎಲ್ಲಿ? – ಹೆಚ್ಡಿಕೆ ಕಚೇರಿಯಿಂದ ಮುಖ್ಯ ಕಾರ್ಯದರ್ಶಿಗೆ ಪತ್ರ
