ಸಿದ್ದು ವಿರುದ್ಧ ಶ್ರೀರಾಮುಲು ವಾಗ್ದಾಳಿ- ಕೆಲವೇ ನಿಮಿಷದಲ್ಲಿ ಟ್ವೀಟ್ ಡಿಲೀಟ್

1 Min Read

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಸರಣಿ ಟ್ವೀಟ್ ಮೂಲಕ ಸಚಿವ ಶ್ರೀರಾಮುಲು ಕಿಡಿಕಾರಿದ್ದರು. ಆದರೆ, ಟ್ವೀಟ್ ಮಾಡಿದ 17 ನಿಮಿಷಕ್ಕೆ ಇದನ್ನು ಡಿಲೀಟ್ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.

ಮೂರು ವಾರಗಳ ಹಿಂದೆ ಬಳ್ಳಾರಿಯ ಕುರುಬರ ಸಮಾವೇಶ ಉದ್ದೇಶಿಸಿ ಮಾತನಾಡಿದ್ದ ಸಚಿವ ಶ್ರೀರಾಮುಲು, ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದೆಲ್ಲಾ ಮಾತನಾಡಿದ್ದರು. ಇವತ್ತು ಅದೇ ಶ್ರೀರಾಮುಲು ಟ್ವಿಟ್ಟರ್‌ನಲ್ಲಿ ಸಿದ್ದರಾಮಯ್ಯ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಇನ್ನೊಬ್ಬರನ್ನು ಮುಗಿಸಿಯೇ ಮೇಲಕ್ಕೆ ಬಂದ ಮಹಾಪುರುಷ ನೀವಲ್ಲವೇ? – ಸಿದ್ದು ವಿರುದ್ಧ ಶ್ರೀರಾಮುಲು ಕಿಡಿ

ಸಿದ್ದರಾಮಯ್ಯರದ್ದು ಆಚಾರವಿಲ್ಲದ ನಾಲಗೆ, ನೀಚ ಬುದ್ಧಿ. ಇನ್ನೊಬ್ಬರನ್ನು ಮುಗಿಸಿಯೇ ಮೇಲೆ ಬಂದವರು. ಸುಳ್ಳೆ ಸಿದ್ದರಾಮಯ್ಯ ಮನೆ ದೇವರು. ಅವರು ಸಿದ್ದರಾಮಯ್ಯ ಅಲ್ಲ. ಸುಳ್ಳಿನ ರಾಮಯ್ಯ. 400-500 ಕೋಟಿ ಲೂಟಿ ಹೊಡೆದ ಸಿದ್ದರಾಮಯ್ಯಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಅಂತಾ ಸರಣಿ ಟ್ವೀಟ್ ಮೂಲಕ ರಾಮುಲು ಕಿಡಿಕಾರಿದ್ದರು.

ಆದರೆ, ಟ್ವೀಟ್ ಮಾಡಿದ 17 ನಿಮಿಷಕ್ಕೆ ಇದನ್ನು ರಾಮುಲು ಡಿಲೀಟ್ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ, ಸಿದ್ದರಾಮಯ್ಯ ಮೇಲಿನ ಎಸ್‍ಆರ್ ಪಾಟೀಲ್ ಮುನಿಸು ಮಾಯವಾದಂತೆ ಕಾಣುತ್ತಿದೆ. ಇಂದು ಸಿದ್ದರಾಮಯ್ಯ ಮನೆಗೆ ತೆರಳಿ ಚರ್ಚೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ನಂಗೆ ಯಾರ ಮೇಲೆ ಅಸಮಾಧಾನ ಇಲ್ಲ ಎಂದರು. ಇದನ್ನೂ ಓದಿ: ಪತನದ ಹಾದಿಯಲ್ಲಿ ಜಾರ್ಖಂಡ್ ಸರ್ಕಾರ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *