LatestLeading NewsMain PostNational

ಪತನದ ಹಾದಿಯಲ್ಲಿ ಜಾರ್ಖಂಡ್ ಸರ್ಕಾರ

ರಾಂಚಿ: ಜಾರ್ಖಂಡ್ ಸರ್ಕಾರವು ಪತನದ ಹಾದಿಯಲ್ಲಿದ್ದು, ಯುಪಿಎ ಮೈತ್ರಿಕೂಟವು ಸರ್ಕಾರವನ್ನು ಉಳಿಸಿಕೊಳ್ಳಲು ಸಕಲ ಪ್ರಯತ್ನವನ್ನು ನಡೆಸುತ್ತಿದೆ.

ಜಾರ್ಖಂಡ್‍ನಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದೆ. ಯುಪಿಎ ಮೈತ್ರಿಕೂಟ ತನ್ನ ಶಾಸಕರನ್ನು ಆಪರೇಷನ್ ಕಮಲದಿಂದ ತಪ್ಪಿಸಲು ನಾನಾ ಕಸರತ್ತು ನಡೆಸುತ್ತಿದೆ. ಶಾಸಕರ ಖರೀದಿಗೆ ಬಿಜೆಪಿ ಮುಂದಾಗಿದೆ ಎಂಬ ಆರೋಪಗಳ ಬೆನ್ನಲ್ಲೇ ಯುಪಿಎ ಮೈತ್ರಿಕೂಟದ ಶಾಸಕರನ್ನು ಕಾಂಗ್ರೆಸ್ ಆಡಳಿತವರುವ ಛತ್ತೀಸ್‍ಘಡಕ್ಕೆ ಕರೆದೊಯ್ಯಲಾಗಿದೆ.

ಸಿಎಂ ಹೇಮಂತ್ ಸೋರೆನ್ ನಿವಾಸದಿಂದ ಎರಡು ಬಸ್‍ಗಳಲ್ಲಿ ಶಾಸಕರು ರಾಂಚಿ ಏರ್‌ಪೋರ್ಟ್ ತಲುಪಿ, ಅಲ್ಲಿಂದ ರಾಯಪುರಕ್ಕೆ ಪಯಣ ಬೆಳೆಸಿದ್ದಾರೆ. ಅಲ್ಲಿನ ರೆಸಾರ್ಟ್‍ನಲ್ಲಿ ಎಲ್ಲರನ್ನು ಇರಿಸಲಾಗಿದೆ. ಗಣಿ ಲೀಸ್‍ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಶಾಸಕತ್ವದ ನಿರ್ಧಾರವನ್ನು ಘೋಷಿಸಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ. ಈ ಮೂಲಕ ರಾಜ್ಯಪಾಲರು ಕುದುರೆ ವ್ಯಾಪಾರವನ್ನು ಪ್ರೋತ್ಸಾಹಿಸ್ತಿದ್ದಾರೆ ಎಂದು ಕಾಂಗ್ರೆಸ್ ಮತ್ತು ಜೆಎಂಎಂ ಮುಖಂಡರು ಆರೋಪಿಸಿದರು. ಇದನ್ನೂ ಓದಿ: ಸ್ವಾತಂತ್ರ್ಯ ಬಂದ ಮೇಲೂ ಗಣೇಶೋತ್ಸವಕ್ಕೆ ಪರದಾಡುತ್ತಿದ್ದೇವೆ: ಮುತಾಲಿಕ್‌

81 ಸದಸ್ಯ ಬಲದ ವಿಧಾನಸಭೆಯಲ್ಲಿ ಆಡಳಿತಾರೂಢ ಮೈತ್ರಿಕೂಟವು 49 ಶಾಸಕರನ್ನು ಹೊಂದಿದೆ. ಅತಿದೊಡ್ಡ ಪಕ್ಷವಾದ ಜೆಎಂಎಂಲ್ಲಿ 30 ಶಾಸಕರಿದ್ದು, ಕಾಂಗ್ರೆಸ್ 18 ಶಾಸಕರನ್ನು ಮತ್ತು ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಒಬ್ಬ ಶಾಸಕ ಮೈತ್ರಿ ಸರ್ಕಾರದಲ್ಲಿದ್ದಾರೆ.

Congress

ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಂಭವಿಸಿದಂತೆ, ಬಿಕ್ಕಟ್ಟಿನ ಲಾಭವನ್ನು ಬಿಜೆಪಿ ಪಡೆದುಕೊಳ್ಳಬಹುದು.  ಚುನಾಯಿತ ಸರ್ಕಾರವನ್ನು ಉರುಳಿದಿ ಆಡಳಿತಾರೂಢ ಸಮ್ಮಿಶ್ರ ಶಾಸಕರನ್ನು ತಮ್ಮತ್ತ ಸೆಳೆದುಕೊಳ್ಳಬಹುದು ಎಂಬ ಭಯದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಹೊಸ ಶಿಕ್ಷಣ ನೀತಿ ಮುಂದಿನ ಪೀಳಿಗೆ ಭವಿಷ್ಯವನ್ನು ಉಜ್ವಲಗೊಳಿಸಲಿದೆ: ರಾಜ್ಯಪಾಲರು

Live Tv

Leave a Reply

Your email address will not be published.

Back to top button