Recent News

ಮುಂಬೈಗೆ ಹೋಗೋಕೆ ಯಾಕೆ ಪ್ರಯತ್ನ ಪಟ್ರಿ?- ರೋಷನ್ ಬೇಗ್‍ಗೆ ಎಸ್‍ಐಟಿ ಡ್ರಿಲ್

– ಸತತ 8 ಗಂಟೆಯಿಂದ ವಿಚಾರಣೆ

ಬೆಂಗಳೂರು: ಎಸ್‍ಐಟಿ(ವಿಶೇಷ ತನಿಖಾ ದಳ) ಖೆಡ್ಡಾದಲ್ಲಿರುವ ಮಾಜಿ ಸಚಿವ, ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರಿಗೆ ಸತತ 8 ಗಂಟೆಯಿಂದ ತೀವ್ರ ವಿಚಾರಣೆ ನಡೆಯುತ್ತಿದೆ.

ಎಸ್‍ಐಟಿ ಕೇಳುತ್ತಿರುವ ಪ್ರಶ್ನೆಗಳಿಗಿಗೆ ನನಗೆ ಗೊತ್ತಿಲ್ಲ ಎಂದು ಬೇಗ್ ಹೇಳುತ್ತಿದ್ದಾರೆ. ನಿಮಗೆ ಐಎಂಎ ಮಾಲೀಕ ಮನ್ಸೂರ್ ಖಾನ್ ಗೊತ್ತಾ, ಮನ್ಸೂರ್ ಖಾನ್ ಜೊತೆ ಹಣಕಾಸು ವ್ಯವಹಾರ ಹೊಂದಿದ್ರಾ, ಮನ್ಸೂರ್ ಖಾನ್ ಮಾಡಿದ ಆರೋಪದ ಬಗ್ಗೆ ಏನ್ ಹೇಳ್ತೀರಾ ಎಂಬ ಪ್ರಶ್ನೆಗಳು ಎಸ್‍ಐಟಿ ಬೇಗ್ ಮುಂದಿಟ್ಟಿದೆ. ಆದರೆ ಇದಕ್ಕೆ ಉತ್ತರಿಸಿರುವ ಬೇಗ್ ನನಗೆ ಗೊತ್ತಿಲ್ಲ ಎಂದಿದ್ದಾರೆ.

ಮಧ್ಯರಾತ್ರಿ ನೀವು ಹೊರಟಿದ್ದಾದ್ರೂ ಎಲ್ಲಿಗೆ, ದೇಶ ಬಿಡುವ ಪ್ಲಾನ್‍ನಲ್ಲಿದ್ರಾ, ವಿಶೇಷ ವಿಮಾನವನ್ನು ಬುಕ್ ಮಾಡಿದ್ದು ಯಾರು, ನೀವೇ ಮಾಡಿದ್ರಾ ಅಥವಾ ಬೇರೆಯವರು ಮಾಡಿದ್ರಾ ಹೀಗೆ ಸರಣಿ ಪ್ರಶ್ನೆಗಳನ್ನು ಹಾಕಿ ಎಸ್‍ಐಟಿ ಅಧಿಕಾರಿಗಳಿಂದ ರೋಷನ್ ಬೇಗ್ ವಿಚಾರಣೆ ನಡೆಯುತ್ತಿದೆ.

ಕೋಟ್ಯಂತರ ರೂಪಾಯಿ ಹಣ ಜಮಾವಣೆಯಾಗಿದೆ ಇದಕ್ಕೆ ನಿಮ್ಮ ಉತ್ತರವೇನು ಎಂದು ಎಸ್‍ಐಟಿ ಕೇಳಿದಾಗ, ನನ್ನ ಪತ್ರಿಕೆಗೆ ಸಂಬಂಧ ಪಟ್ಟಂತೆ ಹಣ ವ್ಯವಹಾರ ಆಗಿರಬಹುದು ಎಂದು ಹೇಳಿದ್ದಾರೆ. ನಿಮ್ಮ ಮಗನ ಮದುವೆಗೆ ಚಾರ್ಟೆಡ್ ಫ್ಲೈಟ್ ಮನ್ಸೂರ್ ಬುಕ್ ಮಾಡಿದ್ರಾ ಎಂಬ ಎಸ್‍ಐಟಿ ಪ್ರಶ್ನೆಗೆ ಉತ್ತರಿಸಿದ ಬೇಗ್, ನನಗೆ ಸರಿಯಾಗಿ ನೆನಪಿಲ್ಲ ಸಾಕಷ್ಟು ವರ್ಷಗಳಾಗಿವೆ ಎಂದಿದ್ದಾರೆ. ಮನ್ಸೂರ್ ಫ್ಲೈಟ್ ಬುಕ್ ಮಾಡಿರೋದಕ್ಕೆ ದಾಖಲೆಗಳಿವೆ ಎಂದು ಎಸ್‍ಐಟಿ ಕೇಳಿದ್ದಕ್ಕೆ ಸ್ನೇಹದಿಂದ ಫ್ಲೈಟ್ ಬುಕ್ ಮಾಡಿರಬಹುದು ಎಂದು ಉತ್ತರಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಒಟ್ಟಿನಲ್ಲಿ ಸರ್ಕಾರ ಬೀಳುತ್ತೆ ಎಂದು ಡೀಲ್ ಬ್ರೇಕ್ ಮಾಡಲು ನೋಡಿದ್ರಾ ಬೇಗ್ ಎಂಬ ಅನುಮಾನವೊಂದು ಮೂಡುತ್ತಿದೆ. ಯಾಕಂದರೆ ಸರ್ಕಾರ ಮತ್ತು ರೋಷನ್ ಬೇಗ್ ಅವರು ರಿಯಾಯಿತಿ ರೀತಿಯಲ್ಲಿ ವ್ಯವಹಾರ ನಡೆಸಿದ್ದರು. ಆದರೆ ಬೇಗ್, ಸರ್ಕಾರದ ಪರ ಮತ ಹಾಕಿದ್ದರೆ ಐಎಂಎ ತನಿಖೆಯಲ್ಲಿ ರಿಯಾಯಿತಿ ಸಿಗುತ್ತಿತ್ತು.

ಮುಂಜಾಗ್ರತಾ ಕ್ರಮವಾಗಿ ಬೇಗ್ ಅವರ ಪ್ರತಿಯೊಂದು ನಡೆಯ ಮೇಲೂ ಸಿಎಂ ಕಣ್ಣಿಟ್ಟಿದ್ದರು. ರೋಷನ್ ಬೇಗ್ ಮುಂಬೈಗೆ ಹೋಗ್ತಿರೋ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಕಲೆ ಹಾಕಿತ್ತು. ನಿನ್ನೆ ಎಚ್‍ಎಎಲ್ ಮೂಲಕ ಹೊರಡಬೇಕಿದ್ದ ಮಾಜಿ ಸಚಿವ ರೋಷನ್ ಬೇಗ್, ಪೊಲೀಸರು ಸುತ್ತುವರಿಯುತ್ತಾರೆ ಎಂದು ಕೆಂಪೇಗೌಡ ಏರ್ ಪೋರ್ಟ್ ಹೋಗಿದ್ದರು. ಆದರೆ ಮಾಹಿತಿ ಲೀಕ್ ಆಗಿ ಎಸ್ ಐ ಟಿ ಅಧಿಕಾರಿಗಳ ಬಲೆಗೆ ರೋಷನ್ ಬೇಗ್ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *