– ವಿಚಾರಣೆ ವೇಳೆ ಸಿಬಿಐ ತರಾಟೆಗೆ ತೆಗೆದುಕೊಂಡ ಕೋರ್ಟ್
ನವದೆಹಲಿ: ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಕೊಲೆ (Soujanya Murder Case) ಪ್ರಕರಣದ ಮರು ತನಿಖೆ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಆದೇಶ ಕಾಯ್ದಿರಿಸಿದೆ.
ಸೌಜನ್ಯ ತಾಯಿ ಕುಸುಮವತಿಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾ. ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ನಡೆಸಲಾಯಿತು. ವಿಚಾರಣೆ ವೇಳೆ ಸಿಬಿಐ ಅನ್ನು ತರಾಟೆಗೆ ತೆಗೆದುಕೊಂಡಿತು. ತನಿಖಾಧಿಕಾರಿ ಘಟನಾ ಸ್ಥಳಕ್ಕೆ ಯಾಕೆ ಹೋಗಿಲ್ಲ ಎಂದು ಕೋರ್ಟ್ ಪ್ರಶ್ನಿಸಿತು. ಇದನ್ನೂ ಓದಿ: ಸೌಜನ್ಯ ಪ್ರಕರಣ ಬಳಸಿ ಸಾರ್ವಜನಿಕ ಭಾವನೆ ಕೆರಳಿಸಲು ಯತ್ನ – ಮಹೇಶ್ ಶೆಟ್ಟಿ ತಿಮರೋಡಿಗೆ ಸುಪ್ರೀಂ ತರಾಟೆ
ಹದಿನಾಲ್ಕು ವರ್ಷ ಆಯಿತು. ಸರಿಯಾದ ತನಿಖೆಯಾಗಿಲ್ಲ. ಸಾಕ್ಷ್ಯಗಳಿಗೆ ಭದ್ರತೆ ಮಂದುವರಿಸಿ. ಆದೇಶ ಮಾಡಿದ ಬಳಿಕ ಮಧ್ಯಂತರ ವರದಿ ಕೇಳುತ್ತೇವೆ. ಎಸ್‌ಐಟಿ ರಚನೆಯ ಬಗ್ಗೆ ನಾವು ನಿರ್ಧರಿಸುತ್ತೇವೆ ಸುಪ್ರೀಂ ಕೋರ್ಟ್ ಹೇಳಿತು.
ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಲು ಸೌಜನ್ಯ ತಾಯಿ ಮನವಿ ಸಲ್ಲಿಸಿದ್ದಾರೆ. ಎಸ್‌ಐಟಿ ತನಿಖೆಗೆ ಸಹಕರಿಸಲು ಸಿದ್ಧ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಮರು ತನಿಖೆಗೆ ಒಪ್ಪಿಕೊಂಡಿರುವ ಸುಪ್ರೀಂ ಕೋರ್ಟ್, ಯಾವ ರೀತಿಯ ತನಿಖೆ ಎನ್ನುವ ಬಗ್ಗೆ ಆದೇಶ ಕಾಯ್ದಿರಿಸಿದೆ. ರಾಜ್ಯ ಸರ್ಕಾರ ಎಸ್‌ಐಟಿ ರಚನೆಗೆ ಸಿದ್ಧ ಎಂದಿದೆ. ಅಂತಿಮವಾಗಿ ಯಾವ ತನಿಖೆ ಎನ್ನುವ ಬಗ್ಗೆ ಕೋರ್ಟ್ ನಿರ್ಧಾರಿಸಿದೆ. ಅಂತಿಮ ಆದೇಶದಲ್ಲಿ ತನಿಖೆ ಬಗ್ಗೆ ವಿಸ್ತೃತ ನಿರ್ದೇಶನ ನೀಡಿದೆ. ಇದನ್ನೂ ಓದಿ: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ – ರಾಜ್ಯ ಸರ್ಕಾರ, ಸಿಬಿಐಗೆ ಸುಪ್ರೀಂ ನೋಟಿಸ್
ಸಿಬಿಐಗೆ ಸುಪ್ರೀಂ ಕೋರ್ಟ್ ತರಾಟೆ
ಹದಿನಾಲ್ಕು ವರ್ಷದಿಂದ ಯಾವುದೇ ಉತ್ತಮ ತನಿಖೆಯಾಗಿಲ್ಲ. ಸಿಐಡಿ ವರದಿಯನ್ನು ಭಾಷಾಂತರಗೊಳಿಸಲಾಗಿದೆ. ತನಿಖಾಕಾರಿ ಘಟನಾ ಸ್ಥಳಕ್ಕೆ ಹೋಗಿಲ್ಲ. ಕೆಳ ಹಂತದ ನ್ಯಾಯಲಯದಲ್ಲಿ ಇನ್ನು ಕೆಲವು ಆರೋಪಿಗಳ ವಿರುದ್ಧ ತನಿಖೆ ಮಾಡಬೇಕು ಎಂದು ಸಿಬಿಐ ಹೇಳಿತ್ತು. ಈಗ ಸಿಬ್ಬಂದಿ ಕೊರತೆ, ಹಣಕಾಸು ಕೊರತೆ ಎಂದು ನೆಪ ಹೇಳಲಾಗುತ್ತಿದೆ. ಈ ರೀತಿಯ ವಾದ ಸಮಂಜಸವಾಗಿಲ್ಲ ಎಂದು ಸಿಬಿಐ ತರಾಟೆಗೆ ತೆಗೆದುಕೊಂಡಿದೆ.
