– ಹೊರಗಡೆ ಹೋಗಿ ವ್ಯವಹಾರ ಮಾಡಬಾರದು ಅಂತೇಲ್ಲಿದೆ?, ಇದೆಲ್ಲ ರಾಜಕಾರಣ: ಸಿಎಂ ಕಿಡಿ
ಬೆಂಗಳೂರು: ಸತೀಶ್ ಜಾರಕಿಹೊಳಿ (Satish Jarkiholi) ಅವರು ಏನು ತಪ್ಪು ಮಾಡಿಲ್ಲ, ಕಾನೂನು ಚೌಕಟ್ಟಿನಲ್ಲಿ ವ್ಯವಹಾರ ಮಾಡಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಜಾರಕಿಹೊಳಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಅವರು ನನ್ನ ಸಹೋದ್ಯೋಗಿ. ಅವರು ಏನು ತಪ್ಪು ಮಾಡಿಲ್ಲ, ಕಾನೂನು ಚೌಕಟ್ಟಿನಲ್ಲಿ ವ್ಯವಹಾರ ಮಾಡಿದ್ದಾರೆ. ಹೊರಗಡೆ ಹೋಗಬಾರದು, ವ್ಯವಹಾರ ಮಾಡಬಾರದು ಅಂತ ಎಲ್ಲಿದೆ? ಇದೆಲ್ಲ ರಾಜಕಾರಣ. ಇನ್ನೂ ಮೂರ್ನಾಲ್ಕು ಜನರ ಮೇಲೆ ದಾಳಿ ಮಾಡಬಹುದು. ಇಡೀ ಕಾಂಗ್ರೆಸ್ (Congress) ಪಾರ್ಟಿನ ಟ್ರ್ಯಾಪ್ ಮಾಡೋದಕ್ಕೆ ತಯಾರಿ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಮ್ಮದು 2 ಸಾವಿರ ಕೋಟಿ ವಹಿವಾಟು, 2 ಕೋಟಿ ದೊಡ್ಡ ವಿಚಾರವೇ ಅಲ್ಲ: ಸತೀಶ್ ಜಾರಕಿಹೊಳಿ
ಬಿಜೆಪಿಯವರ (BJP) ಮೇಲೆಲ್ಲೂ ಕೂಡ ದಾಳಿ ಮಾಡುತ್ತಿಲ್ಲ. ಸಮುದಾಯ ಮಾತ್ರ ಅಲ್ಲ. ಇಡೀ ಪಕ್ಷವನ್ನೇ ಟಾರ್ಗೆಟ್ ಮಾಡಲಾಗಿದೆ. ವಂದೇ ಮಾತರಂ ಗೀತೆ ಮೊಟಕು ಮಾಡಿರೋ ವಿಚಾರವಾಗಿ, ವಂದೇ ಮಾತರಂ (Vande Mataram) ಬಗ್ಗೆ ನಮ್ಮ ಪಕ್ಷದ ಸ್ಟ್ಯಾಂಡ್ ಸ್ಪಷ್ಟವಾಗಿದೆ. ಅವರು ರಾಜಕೀಯ ಮಾಡ್ತಿದ್ದಾರೆ ಅಷ್ಟೇ ಎಂದಿದ್ದಾರೆ.
ಅರಣ್ಯ ಇಲಾಖೆಯ ಹುತಾತ್ಮರಿಗೆ ಪುಷ್ಪ ನಮನ
ಬೆಂಗಳೂರಿನ ಅರಣ್ಯ ಭವನದಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ವತಿಯಿಂದ ಆಯೋಜಿಸಿದ್ದ ‘ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ – 2026’ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಾಡಿನ ವನ್ಯಜೀವಿ ಹಾಗೂ ಪ್ರಕೃತಿ ಸಂಪತ್ತನ್ನು ಸಂರಕ್ಷಿಸುವ ಕರ್ತವ್ಯದಲ್ಲಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಅರಣ್ಯ ಇಲಾಖೆಯ… pic.twitter.com/4XJOLFkanL
— DK Shivakumar (@DKShivakumar) September 11, 2026
ಇದೇ ವೇಳೆ ಮಾತನಾಡಿ, ಅರಣ್ಯ ಹುತಾತ್ಮರಿಗೆ ಇಂದು ಗೌರವ ಸಲ್ಲಿಸಿದ್ದೇವೆ. ಅರಣ್ಯ ಸಿಬ್ಬಂದಿ ಜೊತೆ ಪೊಲೀಸ್ ಅವರು ಕೂಡ ಭತ್ಯೆ ಕೇಳ್ತಿದ್ದಾರೆ. ಇದರ ಬಗ್ಗೆ ನಾನು ಚರ್ಚೆ ಮಾಡುತ್ತೇನೆ ಎಂದಿದ್ದಾರೆ.
ಇನ್ನೂ ಕಾನೂನು ಬಾಹಿರ ಬಂದೂಕು ಶರಣಾಗತಿಗೆ ಸೂಚನೆ ವಿಚಾರವಾಗಿ ಮಾತನಾಡಿ, ಕಾನೂನು ಬಾಹಿರವಾಗಿ ಯಾರಾದರೂ ಬಂದೂಕನ್ನು ಇಟ್ಟುಕೊಂಡಿದ್ದರೆ ಕೂಡಲೇ ಅದನ್ನ ಸರ್ಕಾರ ಒಪ್ಪಿಸಬೇಕು. ಸರೆಂಡರ್ ಮಾಡಲು ನವೆಂಬರ್ 1ನೇ ತಾರೀಖಿನವರೆಗೂ ಅವಕಾಶ ಕೊಡ್ತೀವಿ. ಪೊಲೀಸ್ರು, ಅಧಿಕಾರಿಗಳು ಜನರ ಮನವೊಲಿಸಬೇಕು. ಅದರ ಜೊತೆ ಒಂದು ಕ್ಷಮೆಯಾಚನೆ ಬರೆದು ಕೊಟ್ರೆ ಸಾಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: PublicTV Explainer: 1 ಕೆಜಿ ಭತ್ತ ಬೆಳೆಯೋಕೆ 2,000 ಲೀಟರ್ ನೀರು ಬೇಕಾ? – ನೀರಿನ ಮಿತವ್ಯಯಕ್ಕೆ IIT ಮದ್ರಾಸ್‌ನಿಂದ ಹೊಸ ಟೆಕ್ನಾಲಜಿ!
ಒಂದರ ನಂತರ ಸರೆಂಡರ್ ಮಾಡದಿದ್ದರೆ ಕ್ರಮ ಆಗುತ್ತದೆ. ರಕ್ಷಣೆಗಾಗಿ ಬಂದೂಕು ಬೇಕಿದ್ದರೆ ಅರ್ಜಿ ಹಾಕಲಿ. ಹೆಚ್ಚಿನ ಅರಣ್ಯ ಇಲಾಖೆ ಸಿಬ್ಬಂದಿಗಳು ಪರವಾನಗಿ ಇಲ್ಲದೇ ಇರುವ ಬಂದೂಕುಗಳಿಂದಲೇ ಜೀವ ಕಳೆದುಕೊಂಡಿದ್ದಾರೆ. ನೀವು ನಿಮ್ಮ ಹಾಗೂ ನಿಮ್ಮ ಪ್ರಾಣಿಗಳ ರಕ್ಷಣೆಗಾಗಿ ಬಂದೂಕು ಇಟ್ಟುಕೊಳ್ಳುವುದಾದರೆ ಪರವಾನಗಿ ಪಡೆಯಿರಿ. ಈ ಹಿಂದೆ ರಾಮಮೂರ್ತಿ ಎನ್ನುವ ಹಿರಿಯ ಅಧಿಕಾರಿ ಅನೇಕರು ಅಕ್ರಮ ನಾಡ ಬಂದೂಕುಗಳನ್ನು ಹೊಂದಿರುವ ಬಗ್ಗೆ ಹೇಳಿದ್ದರು. ಆಗ ನಾನು ನನ್ನ ಕ್ಷೇತ್ರದಲ್ಲಿ 300ಕ್ಕೂ ಹೆಚ್ಚು ಬಂದೂಕುಗಳನ್ನು ಜನರಿಂದ ಸರ್ಕಾರಕ್ಕೆ ಒಪ್ಪಿಸಿದ್ದೆ. ಇನ್ನೂ ಹೆಚ್ಚಿನ ನಾಡ ಬಂದೂಕುಗಳು ಇರುವ ಬಗ್ಗೆ ಸರ್ಕಾರಕ್ಕೆ ಮಾಹಿತಿಯಿದೆ ಎಂದರು.
ಕಸ್ತೂರಿರಂಗನ್ ವರದಿ ವಿಚಾರವಾಗಿ, ಮಂಗಳೂರು ಜಿಲ್ಲೆಗೆ ಭೇಟಿ ಕೊಟ್ಟ ಬಳಿಕ 3-4 ಜಿಲ್ಲೆಗಳಿಗೆ ಭೇಟಿಯನ್ನು ಕೊಡುತ್ತೇನೆ. ಅಲ್ಲಿ ಕಸ್ತೂರಿರಂಗನ್ ಸಂಬಂಧಪಟ್ಟ ಹಾಗೇ ರೈತರನ್ನು ಭೇಟಿ ಮಾಡುತ್ತೇನೆ. ನಾವು ರೈತರ ಸಮಸ್ಯೆ, ಬರದ ಸಮಸ್ಯೆ ಹಾಗೂ ಕಸ್ತೂರಿ ರಂಗನ್ ಸಮಸ್ಯೆ ಕುರಿತು ವಿಶೇಷ ಅಧಿವೇಶನ ಕರೆದಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಎರಡು ದಿನ ದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆ – ವಿದೇಶಿ ಗಣ್ಯರ ಜೊತೆಗೆ ಮೋದಿ ದ್ವಿಪಕ್ಷೀಯ ಮಾತುಕತೆ

