ಬಿಗ್ ಬಾಸ್ ಓಟಿಟಿ ಸಾಕಷ್ಟು ವಿಚಾರಗಳಿಂದ ಸದ್ದು ಮಾಡುತ್ತಿದೆ. ಇನ್ನು ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಕೂಡ ಶುರುವಿನಿಂದಲೇ ಸಾಕಷ್ಟು ನೆಗೆಟಿವ್ ವಿಷ್ಯವಾಗಿಯೇ ಹೈಲೆಟ್ ಆದವರು. ಸೋನು ಅವರ ಬಿಗ್ ಬಾಸ್ ಎಂಟ್ರಿಗೆ ಸಾಕಷ್ಟು ಆಕ್ಷೇಪದ ನಡುವೆಯೂ ಮೊದಲ ವಾರ ಸೇಫ್ ಆಗಿದ್ದಾರೆ. ಈಗ ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಸೋನು ಅವರ ಕಾಲೆಳೆದಿದ್ದಾರೆ.
View this post on Instagram
Advertisement
ಕಿರುತೆರೆಯ ದೊಡ್ಮನೆಗೆ ಕಾಲಿಟ್ಟ ಮೊದಲ ದಿನವೇ ಸೋನು ಗೌಡ ಅವರು ಬಾತ್ ರೂಮ್ ಹುಡುಕುವಲ್ಲಿ ವಿಫಲರಾಗಿದ್ದರು. ಈ ಬಗ್ಗೆ ಮೊದಲ ವಾರದ ಪಂಚಾಯಿತಿಯಲ್ಲಿ ಸುದೀಪ್ ನೆನಪಿಸಿದ್ದಾರೆ. ಸೋನು ಗೌಡ ಅವರೇ ನೀವು ಬಾತ್ ರೂಮ್‌ಗೆ ಹೋಗಬೇಕು ಎಂದು ಒದ್ದಾಡ್ತಾ ಇದ್ರಿ. ಆದರೆ ಬಾತ್ ರೂಮ್ ಎಲ್ಲಿದೆ ಅಂತ ಹುಡುಕಲಿಲ್ಲವಲ್ಲ ನೀವು ಎಂದು ಸುದೀಪ್ ಪ್ರಶ್ನಿಸಿದರು. ಈ ಮನೆಯಲ್ಲಿ ಬಾತ್ ರೂಮ್ ಇಲ್ಲವೇನೋ ಅಂದುಕೊಂಡೆ ಎಂದು ಉತ್ತರಿಸಿ ಸೋನು ನಕ್ಕಿದ್ದಾರೆ.
Advertisement
Advertisement
ಗಂಟಲು ನೋವಿಗೆ ಸೋನು ಅವರು ಒಂದು ಔಷಧಿ ಹೇಳಿದ್ದರು. ಆ ವಿಚಾರವನ್ನು ಕೂಡ ಸುದೀಪ್ ಮಾತನಾಡಿದ್ದರು. ನೀವು ಹೊರಗಡೆ ಸಿಕ್ಕಾಪಟ್ಟೆ ನ್ಯೂಸ್‌ನಲ್ಲಿ ಇದ್ದೀರಿ ಎಂದು ಅವರು ಹೇಳಿದರು. ಯಾವ ರೀತಿ ಸರ್ ಎಂದು ಕುತೂಹಲದಿಂದ ಸೋನು ಕೇಳಿದರು. ಟ್ರೋಲ್ ಅಂತೂ ಅಲ್ಲ ಎಂದು ಕೇಳಿದಾಗ ಸೋನು ಮುಖದಲ್ಲಿ ನಗು ಅರಳಿತು. ಗಂಟಲು ನೋವಿಗೆ ಹೊಸ ಔಷಧಿ ಕಂಡು ಹಿಡಿದಿದ್ದೀರಿ. ಈ ಔಷಧಿ ಕೇಳಿ ವೈದ್ಯಕೀಯ ಜಗತ್ತೇ ಶೇಕ್ ಆಗಿದೆ ಎಂದು ಸುದೀಪ್ ಕಾಲೆಳೆದರು. ನಮ್ಮ ಮನೆಯಲ್ಲಿ ಗಂಟಲು ನೋವು ಬಂದರೆ ನಾಟಿ ಕೋಳಿ ಮೊಟ್ಟೆಗೆ ತುಂಬ ಉಪ್ಪು, ಖಾರ ಹಾಕಿ ಅದನ್ನು ಫ್ರೈ ಮಾಡಿ ಕೊಡ್ತಾರೆ ಎಂದು ಸೋನು ಹೇಳಿದ್ದು ಕೇಳಿ ಎಲ್ಲರೂ ನಕ್ಕಿದ್ದಾರೆ. ಇದನ್ನೂ ಓದಿ:ನಿಜ ಜೀವನದಲ್ಲೂ ವಿಶೇಷ ಚೇತನ ತಮ್ಮನನ್ನು ಅಮ್ಮನಂತೆ ಸಲಹುತ್ತಿರುವ `ಪಾರು’
Advertisement
ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಸೋನು ಶ್ರೀನಿವಾಸ ಗೌಡ ಸೇಫ್ ಆಗಿದ್ದಾರೆ. ಇನ್ನು ಮನೆಯಿಂದ ಮಾಡೆಲ್ ಕಿರಣ್ ಯೋಗೇಶ್ವರ್ ಹೊರ ನಡೆದಿದ್ದಾರೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ರಂಗು ಕೂಡ ಜೋರಾಗಿದೆ. ಮುಂದಿನ ವಾರ ಮನೆಯಿಂದ ಯಾವ ಸ್ಪರ್ಧಿಗೆ ಗೇಟ್ ಪಾಸ್ ಸಿಗುತ್ತೆ ಅಂತಾ ಕಾದುನೋಡಬೇಕಿದೆ.