– 79 ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ ನೆಲದ ಮೇಲೆ ಮಲಗಿದ್ದಾಗ ಘಟನೆ
ಮುಂಬೈ: ಮಹಾರಾಷ್ಟ್ರದ (Maharashtra) ಬುಡಕಟ್ಟು ಸಮುದಾಯದ ಜನರೇ ಹೆಚ್ಚಿರುವ ಗಡ್ಚಿರೋಲಿ ಜಿಲ್ಲೆಯ ಧನೋಕಾ ತಾಲೂಕಿನ ಆಶ್ರಮ ಶಾಲೆಯಲ್ಲಿ ಸೋಮವಾರ (ಇಂದು) ದುರ್ಘಟನೆಯೊಂದು ನಡೆದಿದೆ.
ಸರ್ಕಾರಿ ಸ್ವಾಮ್ಯದ ಆಶ್ರಮ ಶಾಲೆಯ 6 ಬಾಲಕಿಯರು (Tribal Girls) ಹಾವು ಕಡಿತದಿಂದ (ಶಂಕೆ) ಆಸ್ಪತ್ರೆಗೆ ದಾಖಲಾಗಿದ್ದು, ಪ್ರದೇಶದಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಹಾವು ಕಡಿತಕ್ಕೆ ಮುಕ್ತಿ ನೀಡಲು ಸರ್ಕಾರ ಬದ್ಧ – ಚಿಕಿತ್ಸಾ ವ್ಯವಸ್ಥೆ ಸಮರ್ಪಕ ಜಾರಿಗೆ ರಾಜ್ಯಗಳಿಗೆ ಸೂಚನೆ!
ಘಟನೆಯಲ್ಲಿ ಮೂವರು ಬಾಲಕಿಯರು ಮೃತಪಟ್ಟಿದ್ದು, ಇತರ ಮೂವರು ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಓರ್ವ ವಿದ್ಯಾರ್ಥಿನಿ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ 14 ವಿದ್ಯಾರ್ಥಿನಿಯರ ಆರೋಗ್ಯದ (Health ಮೇಲೆ ನಿಗಾ ವಹಿಸಲಾಗಿದೆ.

ಗಡ್ಚಿರೋಲಿ ಜಿಲ್ಲೆಯ ಧನೋಕಾ ತಾಲೂಕಿನ ಆಶ್ರಮ ಶಾಲೆಯ ಹಾಸ್ಟೆಲ್‌ನಲ್ಲಿ ಸುಮಾರು 79 ವಿದ್ಯಾರ್ಥಿನಿಯರು ನೆಲದ ಮೇಲೆ ಮಲಗಿದ್ದರು. ಈ ವೇಳೆ ಬೆಳಗ್ಗಿನ ಜಾವ 2 ಗಂಟೆ ಹೊತ್ತಿನಲ್ಲಿ ಘಟನೆ ನಡೆದಿದೆ. ಗಡ್ಚಿರೋಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಈ ಘಟನೆಯನ್ನ ದೃಢಪಡಿಸಿದ್ದು, ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಏತನ್ಮಧ್ಯೆ, ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ʻಮೂವರು ಬಾಲಕಿಯರು ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ವಿವರಗಳನ್ನ ಕೇಳಿದ್ದೇನೆ. ಸಂಪೂರ್ಣ ಮಾಹಿತಿ ಪಡೆದು ಬಳಿಕ ಪ್ರತಿಕ್ರಿಯಿಸುತ್ತೇನೆಂದು ತಿಳಿಸಿದ್ದಾರೆ. ಇದನ್ನೂ ಓದಿ: ನನಗೆ ಮೂರು ಬಾರಿ ಕಚ್ಚಿತು : ಹಾವು ಕಡಿತದ ಬಗ್ಗೆ ವಿವರಿಸಿದ ಸಲ್ಲು

