BollywoodCinemaLatestLeading NewsMain PostNational

ನನಗೆ ಮೂರು ಬಾರಿ ಕಚ್ಚಿತು : ಹಾವು ಕಡಿತದ ಬಗ್ಗೆ ವಿವರಿಸಿದ ಸಲ್ಲು

Advertisements

ಮುಂಬೈ: ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಪನ್ವೇಲ್ ಬಳಿಯ ತಮ್ಮ ಫಾರ್ಮ್‍ಹೌಸ್‍ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಹಾವು ಕಚ್ಚಿದ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.

ಶನಿವಾರ ರಾತ್ರಿ ಫಾರ್ಮ್‍ಹೌಸ್‍ನಲ್ಲಿ ಸಲ್ಲುಗೆ ಹಾವು ಕಚ್ಚಿತ್ತು. ನಂತರ ಅವರು ನವಿ ಮುಂಬೈನ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಪಡೆದಿದ್ದರು. ಭಾನುವಾರ ಬೆಳಗ್ಗೆ ಅವರು ಡಿಸ್ಚಾರ್ಜ್ ಆಗಿದ್ದರು. ಇದನ್ನೂ ಓದಿ: 56ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ಸುಲ್ತಾನ್ – ಫಾರ್ಮ್ ಹೌಸ್‍ನಲ್ಲಿ ಪಾರ್ಟಿ

 

View this post on Instagram

 

A post shared by Viral Bhayani (@viralbhayani)

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ಸಲ್ಮಾನ್ ಫಾರ್ಮ್‍ಹೌಸ್‍ಗೆ ಹಿಂತಿರುಗಿ ರಾತ್ರಿ ತಮ್ಮ 56 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸಲ್ಲು ಯಾವಾಗಲೂ ತನ್ನ ಹುಟ್ಟುಹಬ್ಬವನ್ನು ಮುಂಬೈನ ಹೊರವಲಯದಲ್ಲಿರುವ ತಮ್ಮ ಫಾರ್ಮ್‍ಹೌಸ್‍ನಲ್ಲಿ ಕುಟುಂಬ ಮತ್ತು ಆಪ್ತರೊಂದಿಗೆ ಆಚರಿಸಿಕೊಳ್ಳುತ್ತಾರೆ.

ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ನಂತರ ಫಾರ್ಮ್‍ಹೌಸ್ ನಿಂದ ಹೊರಗೆ ಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶನಿವಾರ ನನ್ನ ಫಾರ್ಮ್‍ಹೌಸ್‍ಗೆ ಹಾವೊಂದು ಪ್ರವೇಶಿಸಿತು. ಅದನ್ನು ನಾನು ಕೋಲಿನಿಂದ ಹೊರಗೆ ಹಾಕಲು ಪ್ರಯತ್ನಿಸಿದೆ. ಆದರೂ ಅದು ನನ್ನ ಕೈ ಬಳಿ ಬಂದಿತ್ತು. ಈ ವೇಳೆ ನನಗೆ ಮೂರು ಬಾರಿ ಕಚ್ಚಿತು. ಅದು ಒಂದು ರೀತಿಯ ವಿಷಪೂರಿತ ಹಾವು ಆಗಿತ್ತು. ಈ ಪರಿಣಾಮ ನಾನು 6 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಆದರೆ ಈಗ ನಾನು ಚೆನ್ನಾಗಿದ್ದೇನೆ ಎಂದು ತಿಳಿಸಿದರು.

ಮಾಧ್ಯಮಗಳ ಮುಂದೆ ನಗುತ್ತಾ ಬಂದ ಸಲ್ಲು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ವೇಳೆ ಸಲ್ಲು ಅಭಿಮಾನಿಗಳು, ಹ್ಯಾಪಿ ಬರ್ತ್ ಡೇ ಬಾಯ್, ಇವತ್ತು ನಮ್ಮ ಬಾಯ್ ಹುಟ್ಟುಹಬ್ಬ ಎಂದು ಹಾಡನ್ನು ಆಡಿ ವಿಶ್ ಮಾಡಿದ್ದಾರೆ. ಇದನ್ನು ನೋಡಿ ಸಲ್ಲು ಫುಲ್ ಖುಷ್ ಆಗಿದ್ದು, ಎಲ್ಲರಿಗೂ ಧನ್ಯವಾದವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ತನ್ನ ಬರ್ತ್‌ಡೇ ಪಾರ್ಟಿ ಸಿದ್ಧತೆಗೆ ಫಾರ್ಮ್‌ಹೌಸ್‌ಗೆ ಹೋಗಿದ್ದ ಸಲ್ಲುಗೆ ಹಾವು ಕಡಿತ!

56ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸಲ್ಮಾನ್ ಖಾನ್ ಕಪ್ಪು ಬಣ್ಣದ ಟಿ-ಶರ್ಟ್, ಕಪ್ಪು ಜಾಕೆಟ್ ಮತ್ತು ಕಂದು ಬಣ್ಣದ ಪ್ಯಾಂಟ್ ಧರಿಸಿದ್ದರು.

Leave a Reply

Your email address will not be published.

Back to top button