– ಮತದಾರರು ಅಲ್ಲದವರಿಗೆ ಗ್ಯಾರಂಟಿ ಇಲ್ಲ ಎಂದ ಸಿಎಂ
ಬೆಂಗಳೂರು: ಚುನಾವಣಾ ಆಯೋಗದಿಂದ ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಲ್ಲಿ ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಭಾಗಿಯಾದರು.
ಸದಾಶಿವನಗರ ತಮ್ಮ ನಿವಾಸದಲ್ಲಿ ಪತ್ನಿ ಜೊತೆ ಸಿಎಂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ರಾಮನಗರ ಡಿಸಿ, ಕನಕಪುರ ತಹಸೀಲ್ದಾರ್, ಬಿಎಲ್‌ಓ ಪ್ರಕ್ರಿಯೆ ನಡೆಸಿದರು. ಇದನ್ನೂ ಓದಿ: ಚುನಾವಣಾ ಆಯೋಗ SIR ಕುರಿತು ನಮ್ಮ ಪ್ರಶ್ನೆಗೆ ಉತ್ತರ ನೀಡಿಲ್ಲ: ಪ್ರಿಯಾಂಕ್ ಖರ್ಗೆ ಕಿಡಿ
ಡಿಸಿಯಿಂದ ಎಸ್‌ಐಆರ್ ಬಗ್ಗೆ ಸಿಎಂ ಮಾಹಿತಿ ಪಡೆದುಕೊಂಡರು. ತಮ್ಮ ಮೊಬೈಲ್‌ನಿಂದಲೇ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಪರಿಶೀಲನೆ ನಡೆಸಿದರು. ವೋಟರ್ ಲಿಸ್ಟ್ ನೋಡಿ, ‘ನನ್ನದು ಮತ್ತು ನನ್ನ ಹೆಂಡತಿಯದ್ದು ಲಿಸ್ಟ್‌ನಲ್ಲಿದೆ. ಹೇಗೆ ಲಾಗಿನ್ ಮಾಡಬೇಕು ಹೇಳಿ, ಡೌನ್‌ಲೋಡ್ ಮಾಡಿ ಎಂದು’ ಸಿಎಂ ಕೇಳಿದರು. ನನ್ನ ಫೋನ್‌ನಲ್ಲೇ ಹೇಳಿ, ಹೇಗೆ ಮಾಡೋದು ಎಂದು ವಿಚಾರಿಸಿದರು. ಅಧಿಕಾರಿಗಳು ಮುಖ್ಯಮಂತ್ರಿಗಳ ಫೋನ್‌ನಿಂದಲೇ ಆ್ಯಪ್ ಡೌನ್‌ಲೋಡ್ ಮಾಡಿದರು. ಈ ವೇಳೆ ಸಿಎಂ, ‘ಫೋನ್‌ನಲ್ಲಿ ಆ್ಯಪ್ ಯೂಸ್ ಮಾಡೋದು ಸ್ವಲ್ಪ ಜನರಿಗೆ ಗೊತ್ತಾಗಬೇಕು ರೀ. ಸ್ವಲ್ಪ ಕನ್ಫ್ಯೂಸ್ ಆಗುತ್ತದೆ’ ಎಂದರು.
ಪ್ರಜಾಪ್ರಭುತ್ವದ ಅಡಿಪಾಯ ನಿಮ್ಮ ಮತ: ಜವಾಬ್ದಾರಿ ಮರೆಯದಿರಿ!
ರಾಜ್ಯಾದ್ಯಂತ ಇಂದಿನಿಂದ ಜುಲೈ 29 ರವರೆಗೆ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯ (SIR) ಅಂಗವಾಗಿ ಮನೆ-ಮನೆ ಸಮೀಕ್ಷೆ (Enumeration) ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸದಾಶಿವನಗರದ ನನ್ನ ನಿವಾಸದಲ್ಲಿ ನನ್ನ ಕುಟುಂಬ ಸದಸ್ಯರೊಂದಿಗೆ ಬಿಎಲ್‌ಓಗಳಿಗೆ… pic.twitter.com/rzRUQHL1B7
— DK Shivakumar (@DKShivakumar) June 30, 2026
ಫಾರ್ಮ್ 8 ಪಡೆದು ನಿಮ್ಮ ಬದಲಾವಣೆ ಮಾಡಬಹುದು. ನಿಮ್ಮ ವಯಸ್ಸು, ಫೋನ್ ನಂಬರ್, ಫೋಟೋ ಬದಲಾವಣೆ ಮಾಡಬಹುದು. ಫಾರ್ಮ್ ಭರ್ತಿ ಮಾಡೋದು ಎಷ್ಟು ಕಷ್ಟ ಇದೆ ಅಂತ ಗೊತ್ತಾಗಲಿ. ಮೀಡಿಯಾದಲ್ಲಿ ಎಲ್ಲಾ ಹೋಗಲಿ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ಕೊನೆಗೆ ತಾವೇ ಕೈಯಲ್ಲಿ ಅರ್ಜಿ ಭರ್ತಿ ಮಾಡಿದರು.
ನಂತರ ಮಾತನಾಡಿದ ಸಿಎಂ, ಇವತ್ತಿನಿಂದ ಎಸ್‌ಐಆರ್ ಪ್ರಾರಂಭ ಆಗಿದೆ. ನನ್ನ ಮನೆಯಿಂದಲೇ ಬೆಂಗಳೂರು ದಕ್ಷಿಣ ಜಿಲ್ಲೆ ಅಧಿಕಾರಿಗಳು ಪ್ರಕ್ರಿಯೆ ಪ್ರಾರಂಭ ಮಾಡಿದ್ದಾರೆ. ನಾನು ಅರ್ಜಿ ತುಂಬಿ ಕೊಟ್ಟಿದ್ದೀನಿ. ಆ್ಯಪ್ ಬಳಕೆಯಲ್ಲಿ ನಾನು ಅನ್‌ಎಜುಕೇಟೆಡ್. ನನಗೂ ಗೊತ್ತಿರಲಿಲ್ಲ, ಕೇಳಿಕೊಂಡೆ. ಆ್ಯಪ್‌ನಲ್ಲೇ ಮಾಡೋದು ಬೇರೆ, ಆದರೆ ಅರ್ಜಿ ತುಂಬಿ ಕೊಡಿ ಎಂದು ತಿಳಿಸಿದರು. ಇದನ್ನೂ ಓದಿ: ಇಂದಿನಿಂದ ರಾಜ್ಯದಲ್ಲಿ SIR – ಮತದಾರರು ಯಾವ ದಾಖಲೆ ಇಟ್ಟುಕೊಳ್ಳಬೇಕು?
ಮತದಾರರು ಅಲ್ಲದವರಿಗೆ ಗ್ಯಾರಂಟಿ ಇಲ್ಲ. ಬಿಹಾರ, ಪಶ್ಚಿಮ ಬಂಗಾಳದಲ್ಲಿ ನಿಲ್ಲಿಸುತ್ತಿದ್ದಾರೆ. ವೋಟರ್ ಲಿಸ್ಟ್ನಲ್ಲಿ ಇಲ್ಲ ಅಂದವರಿಗೆ ನಮ್ಮಲ್ಲೂ ಗ್ಯಾರಂಟಿ ನಿಲ್ಲಿಸುತ್ತೇವೆ. ಬೇರೆ ರಾಜ್ಯದವರಿಗೆ ನಾವ್ಯಾಕೆ ಗ್ಯಾರಂಟಿ ಕೊಡಬೇಕು ಎಂದು ಪ್ರಶ್ನಿಸಿದರು.
ಮನೆಯಲ್ಲಿ ಇರಲಿಲ್ಲ ಅಂದ್ರೆ ಹಿರಿಯರು ಭರ್ತಿ ಮಾಡಿಕೊಳ್ಳಬಹುದು. ನಿಮಗೆ ಫೋಟೋ ಚೇಂಜ್ ಮಾಡಿಕೊಳ್ಳಬಹುದು. 7 ದಿನದಲ್ಲೇ ಎಲ್ಲರಿಗೂ ಫಾರ್ಮ್ ಕೊಡ್ತಾರೆ. ಮತದಾನದ ಹಕ್ಕು ಉಳಿಸಿಕೊಳ್ಳಬೇಕು. ದಯವಿಟ್ಟು ಫೋನ್ ನಂಬರ್ ಕೊಡಬೇಕು. ಆಧಾರ್ ಕಾರ್ಡ್ ಕೂಡ ಮಾಹಿತಿಗಾಗಿ ಕೊಡಬೇಕು ಎಂದರು.
