– ಕೋರ್ಟ್ ಕೊಟ್ಟಿರೋ ಸಮನ್ಸ್‌ಗೆ ಗೌರವ ಕೊಟ್ಟು ಕೋರ್ಟ್‌ಗೆ ಹಾಜರಾಗ್ತೀನಿ ಎಂದ ಗೃಹ ಸಚಿವ
ಬೆಂಗಳೂರು: ಚುನಾವಣೆ ಆಯೋಗ SIR ಕುರಿತು ನಾವು ಎತ್ತಿರೋ ಪ್ರಶ್ನೆ ಉತ್ತರ ಕೊಟ್ಟಿಲ್ಲ ಅಂತ ಚುನಾವಣೆ ಆಯೋಗದ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕಿಡಿಕಾರಿದ್ದಾರೆ.
ಇಂದಿನಿಂದ SIR ಪ್ರಾರಂಭ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ಆಯೋಗಕ್ಕೆ (Election Commission) ಕ್ಯಾಬಿನೆಟ್‌ನಲ್ಲಿ ಚರ್ಚೆ ಆದ ವಿಷಯ ತಿಳಿಸಿದ್ದೇನೆ. ಸೌಜನ್ಯಕ್ಕಾದರೂ ನಮ್ಮ ಪ್ರಶ್ನೆಗೆ ಆಯೋಗ ಉತ್ತರ ನೀಡಿಲ್ಲ. ನಾವು ಲೀಗಲ್ ಆಗಿರೋ ಪ್ರಶ್ನೆಗಳನ್ನೇ ಕೇಳಿದ್ದೇವೆ. SIRಗೆ ನಮ್ಮ ವಿರೋಧ ಇಲ್ಲ. ಆದರೆ, ಪಾರದರ್ಶಕತೆ ಇರಲಿ. ಅರ್ಹರ ಮತ ರದ್ದು ಆಗಬಾರದು. ಕೇಂದ್ರ ಚುನಾವಣೆ ಆಯೋಗಕ್ಕೂ ಸಿಇಓಗೆ ಪತ್ರ ಕೊಟ್ಟಿದ್ವಿ. ಉತ್ತರ ಬಂದಿಲ್ಲ. ಮುಂದೆ ಇದನ್ನ ಕಾನೂನಾತ್ಮಕವಾಗಿ ಹೇಗೆ ತಗೋಬೋದು ನೋಡ್ತೀವಿ ಎಂದರು. ಇದನ್ನೂ ಓದಿ: ಇಂದಿನಿಂದ ರಾಜ್ಯದಲ್ಲಿ SIR – ಮತದಾರರು ಯಾವ ದಾಖಲೆ ಇಟ್ಟುಕೊಳ್ಳಬೇಕು?
ಯಾವುದೇ ಮತದಾರ ಮತ ರದ್ದು ಆಗಬಾರದು. ಇದು ನಮ್ಮ ಉದ್ದೇಶ. ಆತಂಕ ನಮಗೆ ಇಲ್ಲ. ಸಾಮಾನ್ಯ ಪ್ರಜ್ಞೆಯಿಂದ ಬಿಜೆಪಿ ಅವರು ಮಾತಾಡಲಿ. ಉಡಾಫೆ ಉತ್ತರ ಕೊಡೋದು ಬೇಡ. ಅರ್ಹರಿಗೆ ಮತ ರದ್ದು ಆಗಬಾರದು. ಪಶ್ಚಿಮ ಬಂಗಾಳದಲ್ಲಿ, ಕೇರಳದಲ್ಲಿ ಗೊಂದಲ ಆಯ್ತು. ನಾವು ಕೇಳಿದ 12 ಪ್ರಶ್ನೆಗೆ ಅವರು ಉತ್ತರ ಕೊಟ್ಟಿಲ್ಲ. ಅನುಮಾನ ಬಂದಾಗ ನಾವು ಚುನಾವಣೆ ಆಯೋಗಕ್ಕೆ ಕೇಳಬೇಕಾ? ಬಿಜೆಪಿಗೆ ಕಚೇರಿಗೆ ಕೇಳಬೇಕಾ ಅಂತ ಕಿಡಿಕಾರಿದರು.

ಇಸಿ ಬಗ್ಗೆ ಕೇಳಿದ್ರೂ, RSS ಬಗ್ಗೆ ಕೇಳಿದ್ರೆ ಬಿಜೆಪಿ ಅವರು ಮಾತಾಡ್ತಾರೆ. ಅವರ ಪಕ್ಷದ ಬಗ್ಗೆ ಕೇಳಿದ್ರೆ ಮಾತಾಡಲ್ಲ. ಅಡ್ಡ ಮತದಾನ ಬಗ್ಗೆ, ಸದಾನಂದ ಗೌಡ ಆಡಿಯೋ ಬಗ್ಗೆ ಮಾತಾಡಿದ್ರೆ ಉತ್ತರ ಕೊಡೊಲ್ಲ. ಸದಾನಂದಗೌಡರೇ ನೀವು ದೂರು ಕೊಟ್ಟರೆ ಪರಿಶೀಲನೆ ಮಾಡಿ ಯಾರ ಧ್ವನಿ ಅಂತ ಹೇಳ್ತೀನಿ. ನಾನೇ ಈಗ ಗೃಹ ಸಚಿವ ಅಂತ ಲೇವಡಿ ಮಾಡಿದರು.
ಮತಗಳು ರದ್ದು ಆಗೋ ಆತಂಕ ಇದೆಯಾ ಎಂಬ ಪ್ರಶ್ನೆಗೆ, ವ್ಯವಸ್ಥಿತವಾಗಿ ಚುನಾವಣಾ ಆಯೋಗ ಇದನ್ನ ಮಾಡ್ತಿದೆ. ಕೇಂದ್ರ ಸರ್ಕಾರ ಚುನಾವಣೆ ಆಯೋಗವನ್ನ ಕೈಗೊಂಬೆ ಮಾಡಿಕೊಂಡಿದೆ. ಚೀಫ್ ಎಲೆಕ್ಷನ್ ನೇಮಕ ಮಾಡುವ ಪ್ಯಾನಲ್‌ನಲ್ಲಿ ಸಿಜೆ ತೆಗೆದ್ರು. ಕೇಂದ್ರದ ಮಂತ್ರಿಯನ್ನ ಸೇರಿಸಿದ್ರು. 80 ಎಂಪಿಗಳನ್ನ ಅಮಾನತು ಮಾಡಿ ಚುನಾವಣಾ ಆಯೋಗಕ್ಕೆ ಪ್ರಶ್ನೆ ಮಾಡದಂತೆ ಅಧಿಕಾರ ಕೊಟ್ಟರು. ಅದಾದ ಮೇಲೆ SIR ಮಾಡ್ತಾ ಇದ್ದಾರೆ. ಬೆಂಗಾಲ್, ಬಿಹಾರ್, ಸೇರಿ ಹಲವರು ಕಡೆ SIR ತಂದರು. ಅನೇಕ ಕಡೆ ಮತ ತೆಗೆದರು. ಮತ ರದ್ದು ಆಗಿರೋರು ಟ್ರುಬ್ಯುನಲ್ ಮುಂದೆ ಹೋಗಿ ಅಂತ ಟ್ರಿಬ್ಯುನಲ್ ಮಾಡಿದ್ರು. ಟ್ರಿಬ್ಯುನಲ್ ಅಧ್ಯಕ್ಷರು ರಾಜೀನಾಮೆ ಕೊಟ್ಟರು. ಇದು ನಿಮ್ಮ ಹಕ್ಕು ಕಸಿಯಲು ಮಾಡ್ತಾ ಇದ್ದಾರೆ ಅಂತ ಆರೋಪ ಮಾಡಿದರು. ಇದನ್ನೂ ಓದಿ: ಪ್ರತಿಯೊಬ್ಬರೂ ಎನ್ಯುಮರೇಶನ್ ಅರ್ಜಿ ತುಂಬಿ, ಮತದಾನದ ಹಕ್ಕು ಉಳಿಸಿಕೊಳ್ಳಿ: ಸಿಎಂ ಡಿ.ಕೆ.ಶಿವಕುಮಾರ್ ಕರೆ
ಯಾರಿಗೆ ಬೇಕು ಅವರ ಮತ ಕಟ್ ಮಾಡೋಕೆ ಮಾಡ್ತಾ ಇದ್ದಾರೆ. ಅಸ್ಸಾಂನಲ್ಲಿ ಡಿಲಿಮಿಟೇಷನ್ ಮಾಡ್ತಾರೆ. ದೇಶದಲ್ಲಿ ಡಿಲಿಮಿಟೇಷನ್ ಮಾಡಲು 2/3 ಮೆಜಾರಿಟಿಗಾಗಿ ಎಸ್ಪಿ, ಡಿಎಂಕೆ ಸೇರಿ ಹಲವರು ಪಕ್ಷಗಳಿಗೆ ಹೊಡೆಯುತ್ತಿದ್ದಾರೆ. ಮೆಜಾರಿಟಿ ಬಂದರೆ ಡಿಲಿಮಿಟೇಷನ್ ಕಾಯ್ದೆ ತರೋದು ಇವರ ಹುನ್ನಾರ ಎಂದು ಆರೋಪಿಸಿದರು.
RSS ಬಗ್ಗೆ ಮಾತಾಡಿದ್ದಕ್ಕೆ ಕೋರ್ಟ್ ಕೊಟ್ಟಿರೋ ಸಮನ್ಸ್‌ಗೆ ಹಾಜರಾಗ್ತೀನಿ. ಇದು ನಾನು ಹೇಳಿದ್ದು ಅಲ್ಲ. ಕೇರಳ ವಿಚಾರದಲ್ಲಿ ಪ್ರತಿಪಾದನೆ ಮಾಡಿದ್ದಕ್ಕೆ ಸಮನ್ಸ್ ಬಂದಿದೆ. ಅ ಮಾತುಗಳನ್ನ ನಾನೇನು ಸೃಷ್ಟಿ ಮಾಡಿಲ್ಲ. ಅಲ್ಲಿನ ಜನರ ಮಾಹಿತಿ ಪುನರುಚ್ಚಾರ ಮಾಡಿದ್ದೇನೆ. ಪತ್ರಿಕೆ ಮಾಹಿತಿ ಹೇಳಿದ್ದೇನೆ ಎಂದು ತಿಳಿಸಿದರು.
ಕೇರಳಾ ಮೂಲದ RSS ವ್ಯಕ್ತಿ ಅತ್ಯಾಚಾರ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಮಾತಾಡಿದ್ರು ಅದನ್ನ ಮಾತಾಡಿದ್ದೇನೆ. ಯಾವಾಗಲೂ ಬಿಜೆಪಿಗೆ ಉತ್ತರ ಕೊಡಲು ಆಗಲ್ಲ. ಇಂತಹ ಕೆಲಸ ಮಾಡ್ತಾರೆ. ಇದಕ್ಕಾಗಿ ಆಳು ಮಕ್ಕಳನ್ನ ಇಟ್ಟಿದ್ದಾರೆ. ಇದೇನು ನಮಗೆ ಹೊಸದು ಅಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ನಾವು ಸಂವಿಧಾನ, ಕಾನೂನು ಪಾಲನೆ ಮಾಡ್ತೀನಿ. ಕೋರ್ಟ್ ಆದೇಶ ಪಾಲನೆ ಮಾಡ್ತೀನಿ. RSSಗೂ ಸಂವಿಧಾನ, ಕಾನೂನು ಒಂದೇ. ಸಮನ್ಸ್ ಕೊಟ್ಟಿದ್ದಾರೆ ಹೋಗ್ತೀನಿ. ನಾನು ಹೋಗ್ತೀನಿ ಯಾವುದಕ್ಕೂ ಹೆದರಲ್ಲ ಎಂದರು.
