-ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಗ್ಗೆ ಕೇಂದ್ರ ನಾಯಕರಿಂದ ನಿರ್ಧಾರ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Modi) ಅವರ ಬಗ್ಗೆ ಮಾತಾಡೋ ಯೋಗ್ಯತೆ ಕಾಂಗ್ರೆಸ್ (Congress) ಅವರಿಗೆ ಇಲ್ಲ ಅಂತ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಕಾಂಗ್ರೆಸ್ ನಾಯಕರ ವಿರುದ್ದ ಕಿಡಿಕಾರಿದರು.
ದೆಹಲಿಯಲ್ಲಿ ಪ್ರಧಾನಿ ಮೋದಿ ನಿವಾಸದ ಮುಂದೆ ರಾಹುಲ್ ಗಾಂಧಿ ಪ್ರತಿಭಟನೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೋದಿ ಬಗ್ಗೆ ಮಾತಾಡುವ ಯೋಗ್ಯತೆ ಕಾಂಗ್ರೆಸ್‌ಗೆ ಇಲ್ಲ. ಹುಬ್ಬಳ್ಳಿ-ಧಾರವಾಡ ಲಾಠಿ ಚಾರ್ಜ್ಗೆ ಉತ್ತರ ಕೊಡಿ. ಮೋದಿ ಮನೆ ಮುಂದೆ ಪ್ರತಿಭಟನೆ ಮಾಡಿರೋದು ಒಳ್ಳೆಯ ಸಂಪ್ರದಾಯ ಅಲ್ಲ. ಮೋದಿ ಬಂದ ಮೇಲೆ ಎಂಬಿಬಿಎಸ್ ಸೀಟು ಹೆಚ್ಚಳ ಮಾಡಿದ್ರು. ಪಿಜಿ ಸೀಟು ಜಾಸ್ತಿ ಮಾಡಿದ್ರು. ಕಾಲೇಜುಗಳು ಜಾಸ್ತಿ ಮಾಡಿದ್ರು.ನೀಟ್ ವಿಚಾರದಲ್ಲಿ ಮೋದಿ ಜನರ ಪರ ಕೆಲಸ ಮಾಡಿದ್ದಾರೆ. ಹೊಟ್ಟೆ ಉರಿಯಿಂದ ಕಾಂಗ್ರೆಸ್ ರಾಜಕೀಯ ಮಾಡ್ತಿದೆ ಅಂತ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಬರ ತಾಂಡವ; ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ 2,800 ರೈತರ ಆತ್ಮಹತ್ಯೆ: ಆರ್. ಅಶೋಕ್
ಕಾಂಗ್ರೆಸ್ ದೇಶದ್ರೋಹಿಗಳಿಗೆ ಅಮೆರಿಕ, ಚೀನಾದಿಂದ ಹಣ ಪಡೆದವರಿಗೆ ಬೆಂಬಲ ಕೊಡ್ತಾ ಇದ್ದಾರೆ. ರಾಹುಲ್‌ಗೆ ಸಂಸತ್‌ನಲ್ಲಿ ಮಾತಾಡೋ ಯೋಗ್ಯತೆ ಇಲ್ಲ. ಬೀದಿಯಲ್ಲಿ ನಾಟಕ ಆಡೋ ಯೋಗ್ಯತೆ ಇದೆ. ಆಮ್ ಆದ್ಮಿ, ಕಾಂಗ್ರೆಸ್ ಎಣ್ಣೆ ಸಿಗೇಕಾಯಿ ತರ ಇದ್ದರು. ಈಗ ಒಂದಾಗಿದ್ದಾರೆ. ಬಂಗಾಳ, ತಮಿಳುನಾಡು ಸೇರಿ ಹಲವು ಕಡೆ ಸೋತ ಮೇಲೆ ಮೂಲೆ ಗುಂಪಾಗಿದ್ರು. ಅದರಿಂದ ಹೊರಗೆ ಬರೋಕೆ ನಾಟಕ ಇದು. ಹುಬ್ಬಳ್ಳಿ, ಧಾರವಾಡದಲ್ಲಿ ಲಾಠಿಚಾರ್ಜ್ ಮಾಡಿದ್ರಿ? ಈಗ ಖಂಡನೆ ಮಾಡ್ತೀರಾ ಎಂದು ಆಕ್ರೋಶ ಹೊರಹಾಕಿದರು.
11 ಜನ ಅಮಾಯಕರು ಆರ್‌ಸಿಬಿ ವಿಜಯೋತ್ಸವ ಮಾಡುವಾಗ ಸತ್ತು ಹೋದ್ರು. ಅವರಿಗೆ ಕಾಳಜಿ ಇಲ್ಲವಾ? ನೀವು ಕ್ಲೀನ್ ಚಿಟ್ ಕೊಟ್ರಿ. ಮೋದಿ ನೀಟ್ ತಪ್ಪು ಮಾಡಿದವರನ್ನ ಜೈಲಿಗೆ ಹಾಕಿದ್ರು. ಇವರು ಕ್ಲೀನ್ ಚಿಟ್ ಕೊಟ್ಟರು. ಚಿನ್ನಸ್ವಾಮಿ ಘಟನೆಗೆ ಫೋಟೋ ಶೂಟ್ ಮಾಡಿದವರು ಕಾರಣನಾ? ಯಾರು ಕಾರಣ ಹೇಳಿ ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಕಾಂಗ್ರೆಸ್‌ನಿಂದ ಗೂಂಡಾಗಿರಿ – ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ ಬಿಜೆಪಿ ನಿಯೋಗ
ಪ್ರಧಾನಿ ಮೋದಿ ಈಗಾಗಲೇ ನೀಟ್ ಬಗ್ಗೆ ಮಾತಾಡಿದ್ದಾರೆ. ಕ್ರಮ ಆಗುತ್ತದೆ ಅಂತ ಹೇಳಿದ್ದಾರೆ. ರಾಜ್ಯದಲ್ಲಿ ಕೆಪಿಎಸ್‌ಸಿ ಪೇಪರ್ ಲೀಕ್ ಆಗಿಲ್ಲವಾ? ನಾನೇ ಸದನದಲ್ಲಿ ಮಾತಾಡಿದ್ದೆ. ಕೆಪಿಎಸ್‌ಸಿ ಅಧ್ಯಕ್ಷರು ತಪ್ಪು ಮಾಡಿದ್ರೆ ಕ್ರಮ ಮಾಡಿ. ಜೀವಾವಧಿ ಶಿಕ್ಷೆ ಕೊಡಿ. ನಾನೇ ಒತ್ತಾಯ ಮಾಡ್ತೀನಿ. ಶಿಕ್ಷಣ ವ್ಯವಸ್ಥೆ ಬದಲಾವಣೆ ನಿರಂತರ ಪ್ರಕ್ರಿಯೆ. ಆಗಾಗ ಇದು ಆಗುತ್ತದೆ. ದೇಶದ ಸಮಗ್ರತೆಗೆ ಧಕ್ಕೆಯಾಗದ ಯಾವುದೇ ನೀತಿ ಬಿಜೆಪಿ ಒಪ್ಪುತ್ತದೆ ಎಂದರು.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಗ್ಗೆ ಸಂಸತ್‌ನಲ್ಲಿ ಕಾಂಗ್ರೆಸ್ ಡಿಬೇಟ್ ಮಾಡಲಿ. ಅದಕ್ಕೆ ನಮ್ಮ ನಾಯಕರು ಉತ್ತರ ನೀಡ್ತಾರೆ. ಕೆಪಿಎಸ್‌ಸಿ ಅಕ್ರಮ ಆದಾಗ ನಾನು ಅಧ್ಯಕ್ಷರ ರಾಜೀನಾಮೆ ಕೇಳಿದ್ದೆ. ಅವರು ಕೊಟ್ಟಿದ್ರಾ? ಅವರು ರಾಜೀನಾಮೆ ಕೊಟ್ಟಿರಲಿಲ್ಲ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಗ್ಗೆ ನಮ್ಮ ಕೇಂದ್ರದ ನಾಯಕರು ಸೂಕ್ತ ನಿರ್ಧಾರ ಮಾಡ್ತಾರೆ ಎಂದು ಹೇಳಿದರು.ಇದನ್ನೂ ಓದಿ: ಪ್ರತಿ ಎಕ್ರೆಗೆ 50 ಸಾವಿರ ಪರಿಹಾರ ಕೊಡಬೇಕು, 1 ಲಕ್ಷದವರೆಗೆ ರೈತರ ಸಾಲಮನ್ನಾ ಮಾಡಬೇಕು: ಆರ್. ಅಶೋಕ್ ಆಗ್ರಹ
