ಬೆಂಗಳೂರು: ರಾಜ್ಯ ಸರ್ಕಾರ ಕೂಡಲೇ ಬರ ಅಂತ ಘೋಷಣೆ ಮಾಡಬೇಕು. ರೈತರ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಬೇಕು. 1 ಲಕ್ಷದವರೆಗೂ ರೈತರ ಸಾಲಮನ್ನಾ (Farmers Waive) ಮಾಡಬೇಕು ಅಂತ ವಿಪಕ್ಷ ನಾಯಕ ಆರ್. ಅಶೋಕ್ (R Ashok), ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬರದ ತಾಂಡವ ನಡೆಯುತ್ತಿದೆ. ಆದ್ರೆ ಕಾಂಗ್ರೆಸ್ ನಾಯಕರು, ಶಾಸಕರು ದೆಹಲಿಯಲ್ಲಿ (Delhi) ಜಾಲಿ ಜಾಲಿ ಅಂತ ಟ್ರಿಪ್ ಮಾಡಿದ್ದಾರೆ. ಕಾಂಗ್ರೆಸ್ ಬಂದ್ರೆ ಇದೇ ಹಣಬರಹ. ಕಾಂಗ್ರೆಸ್ ಬರ ಬಂದಾಗ ಯಾವುದೇ ಕ್ರಮ ತೆಗೆದುಕೊಳ್ಳಲ್ಲ. ಬಿಜೆಪಿ ನೋಡಿ ಕಾಂಗ್ರೆಸ್ ಕಲಿಯಬೇಕು. ಬಿಜೆಪಿ ಇದ್ದಾಗ ಮುಂಜಾಗ್ರತಾ ಕ್ರಮ, ಡಬಲ್ ಪರಿಹಾರ ಕೊಟ್ಟಿದ್ವಿ ಅಂತ ಕಿಡಿಕಾರಿದರು.
ಸಿಎಂ ಡಿಕೆಶಿ (DK Shivakumar) ಅವರು ಬೆಳೆ ಬೆಳೆಯಬೇಡಿ ಅಂತಾರೆ. ಬೆಳೆ ಬೆಳೆಯಬಾರದು ಅಂತ ರೈತರು ಏನು ಮಾಡಬೇಕು? ಹಾಗಾದ್ರೆ ರೈತರಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಿ ಬಿಡಿ ಅಂತ ಲೇವಡಿ ಮಾಡಿದ್ರು. ಜಿ ರಾಮ್ ಜೀ ಗೆ ಕಲ್ಲು ಹಾಕಿದ್ರಿ, ಕಾವೇರಿ ನೀರು ತಮಿಳುನಾಡಿಗೆ ಹರಿದು ಹೋಗ್ತಿದೆ. ಬೆಂಗಳೂರು ಬಿಟ್ಟು ಕಾವೇರಿ ನೀರು ಹೊರಗೆ ಹೋಗ್ತಿದೆ ಅಂತ ಅರೋಪ ಮಾಡಿದ್ರು.

80% ಕೃಷಿ ಕೆಲಸ ಸ್ಥಗಿತ
ರಾಜ್ಯದಲ್ಲಿ 80% ಕೃಷಿ ಕೆಲಸ ಸ್ಥಗಿತವಾಗಿದೆ. ಜಾನುವಾರುಗಳಿಗೆ ಒಣ ಮೇವು ಕಡಿಮೆ ಆಗ್ತಿದೆ. ರೈತರು ದನ-ಕರುಗಳನ್ನ ಕಟುಕರಿಗೆ ಮಾರಾಟ ಮಾಡ್ತಾ ಇದ್ದಾರೆ. ಹೊಸ ಕಂದಾಯ ಸಚಿವರು ಡಿಸಿಗಳಿಂದ 15 ದಿನದಲ್ಲಿ ವರದಿ ಪಡೆಯುತ್ತಾರೆ ಅಂತೆ. ಬರ ಬಂದು ತಿಂಗಳು ಕಳೆದಿದೆ. ಈಗ ವರದಿ ಕೇಳ್ತೀನಿ ಅಂತಾರೆ. ಅವರು ವರದಿ ಕೊಡೋದು ಯಾವಾಗ? ಕೇಂದ್ರಕ್ಕೆ ವರದಿ ಕೊಡೋದು ಯಾವಾಗಾ? ಅಂತ ಪ್ರಶ್ನೆ ಮಾಡಿದ್ರು. 42% ಜೂನ್ ನಲ್ಲಿ ಮಳೆ ಪರಿಣಾಮ ಕಡಿಮೆ ಇದೆ. NDRF ಪ್ರಕಾರ ಬರ ಅಂತ ಘೋಷಣೆ ಮಾಡಬೇಕು. ಆದ್ರೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬೆಳೆ ಬೆಳೆಯಬೇಡಿ ಅಂತೀರಾ. ನೀರಿಗೆ ಆಹಾಕಾರ ಇದೆ. 2 ತಿಂಗಳಲ್ಲಿ 31 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ 2,800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಆರೋಪ ಮಾಡಿದ್ರು.
ಪಾಕ್, ಬಾಂಗ್ಲಾ ಜೊತೆಗೆ ದೀಪ್ಕೆ ಸಂಪರ್ಕ
ಮನೆ ಬಾಗಿಲಿಗೆ ಆತ್ಮಹತ್ಯೆ ತಂದ ಸರ್ಕಾರ ಇದು. ರಾಹುಲ್ ಗಾಂಧಿ ಜಿರಳೆ ಅಂತ ಪ್ರತಿಭಟನೆ ಅಂತಾರೆ. ಅದೊಂದು ದೇಶ ದ್ರೋಹ ಸಂಘಟನೆ. ಪಾಕಿಸ್ತಾನ, ಬಾಂಗ್ಲಾದೇಶದ ಜೊತೆ ಅವನು ಸಂಪರ್ಕ ಇಟ್ಟುಕೊಂಡಿದ್ದಾನೆ. ಅವರ ಜೊತೆ ರಾಹುಲ್ ಹೋಗ್ತಾರೆ ಇಲ್ಲಿ ಸಮಸ್ಯೆ ಕೇಳೊಲ್ಲ. ಕೃಷಿ ಸಚಿವರು ಇಲ್ಲ. ತೋಟಗಾರಿಕೆ ಸಚಿವರು ಇಲ್ಲ. ಸಮೀಕ್ಷೆ ಮಾಡೋರು ಯಾರು? ಅಂತ ಪ್ರಶ್ನೆ ಮಾಡಿದ್ರು.ರಾಷ್ಟ್ರೀಯ ವಿಪತ್ತು ಅಂತ ಘೋಷಣೆ ಮಾಡಬೇಕು ಅಂತಾರೆ. ಯಾವ ಮನೆ ಹಾಳ ಈ ಐಡಿಯಾ ಕೊಟ್ಟ ಗೊತ್ತಿಲ್ಲ. ರಾಜ್ಯ ಸರ್ಕಾರವೇ ಇನ್ನು ವಿಪತ್ತು ಅಂತ ಘೋಷಣೆ ಮಾಡಿಲ್ಲ. ಕೇಂದ್ರ ಹೇಗೆ ಮಾಡುತ್ತದೆ? ರೋಮ್ ಹೊತ್ತಿ ಉರಿದರೆ ಅದ್ಯಾವನೋ ಪಿಟೀಲು ಬಾರಿಸುತ್ತಿದ್ದ ಅಂತ ಸಿಎಂ ದೆಹಲಿಯಲ್ಲಿ ಕೂತಿದ್ದಾರೆ. ಎಲ್ಲರಿಗೂ ಈಗ ದೆಹಲಿ ಬೇಕಾಗಿದೆ. ಪ್ರಿಯಾಂಕ್ ಖರ್ಗೆ ಮಾತೆತ್ತಿದ್ದರೆ RSS ಲೆಕ್ಕ ಕೊಡಿ ಅಂತಾರೆ. ಪ್ರಿಯಾಂಕ್ ಖರ್ಗೆಗೆ ಕೇಳ್ತೀನಿ ಕಲಬುರ್ಗಿ ಯಿಂದ ಗುಳೆ ಹೋಗ್ತಾ ಇದ್ದಾರೆ. ಅದರ ಲೆಕ್ಕ ಕೊಡಪ್ಪ. ಜನರು ಗುಳೆ ಹೋಗ್ತಾ ಇದ್ದಾರೆ. ಅದರ ಲೆಕ್ಕ ಕೊಡಿ ಪ್ರಿಯಾಂಕ್.ತಾಂಡಾಗಳು ಖಾಲಿ ಆಗ್ತಾ ಇವೆ.ಎಲ್ಲರು ಗುಳೆ ಹೋಗ್ತಾ ಇದ್ದಾರೆ ಅಂತ ಪ್ರಿಯಾಂಕ್ ಖರ್ಗೆ ವಿರುದ್ದ ಕಿಡಿಕಾರಿದರು.
ಸರ್ಕಾರದ ಖಜಾನೆ ಖಾಲಿ ಆಗಿದೆ, ಜಲಾಶಯ ಖಾಲಿ ಆಗಿಲ್ಲ. ಇವರ ಖಜಾನೆ ಖಾಲಿ ಆಗಿದೆ. ಬರೀ ಲೂಟಿ. ಕಸದ ಲೂಟಿ, ಆನೇಕಲ್ ಲೂಟಿ, ಬಿಡದಿ ಲೂಟಿ ಅಷ್ಟೇ ಇವರದ್ದು ಅಂತ ವಾಗ್ದಾಳಿ ನಡೆಸಿದರು.
ಪರಮೇಶ್ವರ್ ಅವರನ್ನು ಪರಮೇಶ್ವರ ಕಾಪಾಡಬೇಕು. ವರದಿ ಬರೋದು ಯಾವಾಗ? ವರದಿ ಕೇಂದ್ರಕ್ಕೆ ಹೋಗೋದು ಯಾವಾಗ? ನಮ್ಮ ಸರ್ಕಾರ ನೋಡಿ ಕಲಿಬೇಕಿತ್ತು.ಸರ್ಕಾರ ಕೂಡಲೇ ಬರ ಅಂತ ಘೋಷಣೆ ಮಾಡಬೇಕು.ಪ್ರತಿ ತಾಲೂಕಿಗೆ ಬರಕ್ಕಾಗಿ 20 ಕೋಟಿ ಹಣ ಬಿಡುಗಡೆ ಮಾಡಬೇಕು.ಒಂದು ಕೋಟಿ ಅಂತ ಘೋಷಣೆ ಮಾಡಿದ್ರು. ಅದು ಇನ್ನು ಬಿಡುಗಡೆ ಆಗಿಲ್ಲ.ಶಾಸಕರ ನೇತೃತ್ವದಲ್ಲಿ ಸಮಿತಿ ಮಾಡಬೇಕು.. ಟಾಸ್ಕ್ ಫೋರ್ಸ್ ಮೀಟಿಂಗ್ ಆಗಬೇಕು. ರೈತರ ಬೆಳೆಗೆ ನಷ್ಟಕ್ಕೆ ಪ್ರತಿ ಎಕರೆ ಗೆ 50 ಸಾವಿರ ಪರಿಹಾರ ಕೊಡಬೇಕು. ಬೇರೆ ರಾಜ್ಯಕ್ಕೆ ನೀರು ಬಿಡಬಾರದು. ನಮ್ಮ ಮೇವು ಬೇರೆ ರಾಜ್ಯಕ್ಕೆ ಹೋಗ್ತಿದೆ. ಅದನ್ನ ಕೂಡಲೇ ತಡ ಮಾಡಬೇಕು. ಸಾಲಮನ್ನಾ ಮಾಡೋದಾಗಿ ಸಿಎಂ ಹೇಳಿದ್ದಾರೆ. ಸಾಲ ಮನ್ನಾ ಬೇಗ 1 ಲಕ್ಷದವರೆಗೆ ರೈತರ ಸಾಲಮನ್ನಾ ಘೋಷಣೆ ಮಾಡಬೇಕು ಅಂತ ಆಗ್ರಹ ಮಾಡಿದ್ರು.
