Connect with us

Cinema

ಬದುಕಿದ್ದಾಗಲೇ ಸತ್ತಿದ್ದಾರೆ ಅಂದ ಯೂಟ್ಯೂಬ್ ಚಾನೆಲ್ – ನಟ ಸಿದ್ಧಾರ್ಥ್ ಗರಂ

Published

on

Share this

ಚೆನ್ನೈ: ಕಾಲಿವುಡ್‍ನ ಖ್ಯಾತ ನಟ ಸಿದ್ಧಾರ್ಥ್ ನಿಧನರಾಗಿದ್ದಾರೆ ಎಂದು ಇತ್ತೀಚೆಗಷ್ಟೆ ಯೂಟ್ಯೂಬ್ ಚಾನೆಲ್‍ವೊಂದು ವರದಿಮಾಡಿತ್ತು. ಈ ಕುರಿತಂತೆ ಇದೀಗ ಸಿದ್ಧಾರ್ಥ್‍ರವರು ಪ್ರತಿಕ್ರಿಯೆ ನೀಡಿದ್ದಾರೆ.

ಚಿಕ್ಕವಯಸ್ಸಿನಲ್ಲಿಯೇ ಮೃತಪಟ್ಟ ದಕ್ಷಿಣ ಭಾರತದ ಖ್ಯಾತ ನಟ, ನಟಿಯರ ಸಾಲಿನಲ್ಲಿ ಸಿದ್ದಾರ್ಥ್ ಫೋಟೋವನ್ನು ಕೂಡ ಸೇರಿಸಿ ಯೂಟ್ಯೂಬ್ ಸುದ್ದಿಯೊಂದನ್ನು ಪ್ರಕಟಿಸಿತ್ತು. ಅಲ್ಲದೇ ಸಿದ್ದಾರ್ಥ್ ನಿಧನರಾಗಿದ್ದಾರೆ ಎಂಬ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಗಾಬರಿಯಾಗಿದ್ದರು.

ಈ ವಿಚಾರ ತಿಳಿದು ಸಿದ್ಧಾರ್ಥ್‍ರವರು ಯೂಟ್ಯೂಬ್‍ಗೆ ರಿಪೋರ್ಟ್ ಮಾಡಿರುವ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಲವು ವರ್ಷಗಳ ಹಿಂದೆಯೇ ನಾನು ಈ ವೀಡಿಯೋ ಬಗ್ಗೆ ಯೂಟ್ಯೂಬ್‍ಗೆ ರಿಪೋರ್ಟ್ ಮಾಡಿದ್ದೆ. ಆದರೆ ಯೂಟ್ಯೂಬ್ ತಂಡ ಕ್ಷಮಿಸಿ ಈ ವೀಡಿಯೋದಲ್ಲಿ ನಮಗೆ ಯಾವುದೇ ಸಮಸ್ಯೆ ಕಾಣಿಸುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಇದನ್ನು ಕಂಡು ನಾನು ಎಲಾ ಇವರಾ.. ಎಂದು ಕೊಂಡಿದ್ದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

ತೆಲುಗಿನ ಬೊಮ್ಮರಿಲ್ಲು, ನೂವು ವಸ್ತಾನಂಟೆ ನೇನೊದ್ದಾಂಟಾನಾ, ಆಟ ಹಾಗೂ ತಮಿಳಿನ ಜಿಗರ್ ತಾಂಡ, ಬಾಯ್ಸ್, ಓ ಮೈ ಫ್ರೆಂಡ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಬಾಲಿವುಡ್ ನಟ ಅಮೀರ್ ಖಾನ್ ಜೊತೆ ‘ರಂಗ್ ದೇ ಬಸಂತಿ’ ಸಿನಿಮಾದಲ್ಲಿ ಕೂಡ ಸ್ಕ್ರೀನ್ ಶೇರ್ ಮಾಡಿದ್ದರು. ಈ ಸಿನಿಮಾ ಬಾಲಿವುಡ್‍ನಲ್ಲಿ ಸಖತ್ ಸದ್ದು ಮಾಡಿತ್ತು. ಇದನ್ನೂ ಓದಿ: ಪ್ರಿಯಾಂಕಾಗೆ ಅಶ್ಲೀಲ ಸನ್ನೆ – ಚಕ್ರವರ್ತಿ ವಿರುದ್ಧ ವೀಕ್ಷಕರು ಗರಂ

Click to comment

Leave a Reply

Your email address will not be published. Required fields are marked *

Advertisement