Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಡಿಕೆಶಿಯಿಂದ ಕುರ್ಚಿ ಉಳಿಸಿಕೊಳ್ಳೋಕೆ ಸಿಎಂ ಐದೈದು ದಿನ ಉಪಚುನಾವಣೆ ಪ್ರಚಾರ ಮಾಡ್ತಿದ್ದಾರೆ – ಅಶೋಕ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಡಿಕೆಶಿಯಿಂದ ಕುರ್ಚಿ ಉಳಿಸಿಕೊಳ್ಳೋಕೆ ಸಿಎಂ ಐದೈದು ದಿನ ಉಪಚುನಾವಣೆ ಪ್ರಚಾರ ಮಾಡ್ತಿದ್ದಾರೆ – ಅಶೋಕ್

Bengaluru City

ಡಿಕೆಶಿಯಿಂದ ಕುರ್ಚಿ ಉಳಿಸಿಕೊಳ್ಳೋಕೆ ಸಿಎಂ ಐದೈದು ದಿನ ಉಪಚುನಾವಣೆ ಪ್ರಚಾರ ಮಾಡ್ತಿದ್ದಾರೆ – ಅಶೋಕ್

Public TV
Last updated: March 30, 2026 7:30 pm
Public TV
Share
3 Min Read
R Ashok 1
SHARE

-ಪ್ರಧಾನಿ ಮೋದಿ ಮೇಲಿನ ಸಿಟ್ಟಿನಿಂದಲೇ ತೃತೀಯ ಭಾಷೆ ಹಿಂದಿಯನ್ನು ತೆಗೆದಿದ್ದಾರೆ

ಬೆಂಗಳೂರು: ಡಿಕೆಶಿಯಿಂದ ಕುರ್ಚಿ ಉಳಿಸಿಕೊಳ್ಳೋಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಐದೈದು ದಿನ ಉಪಚುನಾವಣೆ ಪ್ರಚಾರ ಮಾಡ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಅವರು ಲೇವಡಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಕೆಶಿಯಿಂದ (DK Shivakumar) ಕುರ್ಚಿ ಉಳಿಸೊಕೊಳ್ಳಲು ಸಿಎಂ ಅವರು ಐದೈದು ದಿನ ಉಪಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಎಲ್ಲಿ ಡಿಕೆಶಿ ತಮ್ಮ ಕುರ್ಚಿ ಕಿತ್ತಿಕೊಳ್ಳುತ್ತಾರೆ ಎಂಬ ಆತಂಕದಲ್ಲಿ ಐದೈದು ದಿನ ಪ್ರಚಾರ ಮಾಡ್ತಿದ್ದಾರೆ. ಎರಡೂ ಕಡೆಯೂ ಕಾಂಗ್ರೆಸ್ ಸೋತರೆ ಡಿಕೆಶಿಗೆ ಚಾನ್ಸ್ ಸಿಗುತ್ತೆ. ಅದಕ್ಕೆ ಡಿಕೆಶಿ ಕೂಡಾ ಉಪ್ಪು ಖಾರ ಹಾಕ್ತಿದ್ದಾರೆ. ಇನ್ನೊಂದು ಕಡೆ ಜಮೀರ್ ಮುನಿಸಿಕೊಂಡು ಕಾಣದಂತೆ ಕೇರಳದಲ್ಲಿ ಮಾಯವಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಗೋಗರೆದಿದ್ದ ಶಾಸಕರಿಗೆ ಸಿಗುತ್ತೆ 3 ಟಿಕೆಟ್‌ – ಚಿನ್ನಸ್ವಾಮಿಯಲ್ಲಿ 55 ಸಾವಿರ ಸೀಟ್‌ ಸಾಧ್ಯವಾಗುತ್ತಾ?

ದಾವಣಗೆರೆ (Davanagere) ದಕ್ಷಿಣ, ಬಾಗಲಕೋಟೆ (Bagalkote) ಕ್ಷೇತ್ರಗಳಲ್ಲಿ ಬಿಜೆಪಿ (BJP) ಗೆಲ್ಲಲಿದೆ. ಎರಡೂ ಚುನಾವಣೆಗಳನ್ನೂ ನಾವು ಸವಾಲಾಗಿ ಸ್ವೀಕರಿಸಿದ್ದೀವಿ. ಕಾಂಗ್ರೆಸ್‌ನಲ್ಲಿ ಒಡಕಿದೆ, ಅವ್ರು ಗೆಲ್ಲಲ್ಲ. ನಮಗೆ ಎರಡೂ ಕಡೆಯೂ ಗೆಲ್ಲುವ ವಿಶ್ವಾಸ ಇದೆ. ನಾಳೆಯಿಂದ ನಾನು ಎರಡೂ ಕಡೆಯೂ ಪ್ರಚಾರಕ್ಕೆ ಹೋಗ್ತೇನೆ. ಎರಡೂ ಕಡೆಯೂ ನಮಗೆ ಪೂರಕ ವಾತಾವರಣ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಹಿಂದಿ ಭಾಷೆ ವಿಚಾರವಾಗಿ ಮಾತನಾಡಿ, ಪ್ರ‍್ರಧಾನಿ ಮೋದಿಯವರ ಮೇಲಿನ ಸಿಟ್ಟಿನಿಂದ ಹಿಂದಿ ಮೂರನೇ ಭಾಷೆ ತೆಗೆಯಲಾಗಿದೆ. ಈ ಸರ್ಕಾರಕ್ಕೆ ಕಾಮನ್ ಸೆನ್ಸ್ ಇಲ್ಲ. ವರ್ಷಪೂರ್ತಿ ಮಕ್ಕಳು ಹಿಂದಿ ವಿಷಯ ಓದಿದ್ದಾರೆ. ಏಕಾಏಕಿ ಈಗ ತುಘಲಕ್ ನಿರ್ಧಾರ ತಗೊಂಡಿದ್ದಾರೆ. ಕಾಂಗ್ರೆಸ್‌ನವರಿಗೆ ಮಾನ ಮರ್ಯಾದೆ ಏನಾದರೂ ಇದೆಯಾ? ಹಿಂದಿ ತೆಗೆಯೋದಿದ್ರೆ ಮೊದಲೇ ತೆಗಿಬೇಕಿತ್ತು. ಮಕ್ಕಳು ವರ್ಷಪೂರ್ತಿ ಓದಿದ ಮೇಲೆ ತೆಗೆಯೋದು ಸರಿಯಲ್ಲ. ಪರೀಕ್ಷೆ ಸಮಯದಲ್ಲಿ ಈ ರೀತಿ ನಿರ್ಧಾರ ಮಕ್ಕಳ ಮಾನಸಿಕತೆ ಮೇಲೆ ಪರಿಣಾಮ ಬೀರಬಹುದು. ಸರ್ಕಾರ ಮಕ್ಕಳ ವಿಚಾರದಲ್ಲಿ ಯಾಕೆ ರಾಜಕಾರಣ ಮಾಡ್ತಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಮಾತು ಬಾರದ ವೃದ್ಧೆ ಜೊತೆ ಕೈ ಸನ್ನೆಯಲ್ಲೇ ಸಂಭಾಷಣೆ ನಡೆಸಿದ ವಿನಯ್‌ ಕುಲಕರ್ಣಿ -‌ ವೀಡಿಯೋ ವೈರಲ್

ನೆಹರೂ ಅವರು ತ್ರಿಭಾಷಾ ಸೂತ್ರ ತಂದಿದ್ದು, ಮೋದಿ ತಂದಿಲ್ಲ. ಇಂದಿರಾ ಗಾಂಧಿಯವರಂತೂ ಇನ್ನೂ ತೀವ್ರಗೊಳಿಸಿದರು. ನಮ ಕನ್ನಡಿಗರು ಐಎಎಸ್ ಆಗಿ ಉತ್ತರ ಭಾರತದ ರಾಜ್ಯಕ್ಕೆ ಕೆಲಸಕ್ಕೆ ಹೋದಾಗ ಯಾವ ಭಾಷೆ ಮಾತಾಡಬೇಕು? ಇವೆಲ್ಲವನ್ನೂ ಪರಿಗಣಿಸಿಯೇ ತ್ರಿಭಾಷಾ ಸೂತ್ರ ಮಾಡಿದ್ದಾರೆ. ಕಾಂಗ್ರೆಸ್‌ನವ್ರಿಗೆ ಮೋದಿಯವರ ಮೇಲೆ ಸಿಟ್ಟು, ಮೋದಿ ಹಿಂದಿ ಕಡ್ಡಾಯ ಮಾಡಿದ್ರು ಅಂತ ಅನ್ಕೊಂಡಿದ್ದಾರೆ. ಕಾಂಗ್ರೆಸ್‌ನವ್ರದ್ದು ಹುಚ್ಚುತನ, ರಾಜಕಾರಣ. ಮುಸ್ಲಿಮರು ತಮಿಳುನಾಡಲ್ಲಿ ತಮಿಳು, ಕೇರಳದಲ್ಲಿ ಮಲಯಾಳಂ ಭಾಷೆ ಕಡ್ಡಾಯ ಮಾತಾಡಲೇಬೇಕು. ಕರ್ನಾಟಕದಲ್ಲಿ ಯಾಕೆ ಮುಸ್ಲಿಮರು ಕನ್ನಡ ಕಡ್ಡಾಯ ಮಾತಾಡಲ್ಲ. ಇನ್ನೂ ನಮ್ಮಲ್ಲಿ ಮುಸ್ಲಿಮರು ನಮ್ದಿಕ್ಕೆ, ನಿಮ್ದಿಕ್ಕೆ ಅಂತ ಕನ್ನಡ ಮಾತಾಡ್ತಾರೆ. ಯಾಕೆ ಅವರ ವಿಚಾರದಲ್ಲಿ ಕಾಂಗ್ರೆಸ್ ಮೌನ, ಇದೇ ಓಲೈಕೆ ಅಂತ ವಾಗ್ದಾಳಿ ನಡೆಸಿದ್ದಾರೆ.

ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿ ಶಾರೀಖ್ ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಸ್ಪಷ್ಟನೆ ಕೊಡಬೇಕು. ಉಗ್ರ ಶಾರೀಖ್ ದೇವಸ್ಥಾನಗಳಿಗೆ ಬಾಂಬ್ ಇಡುವ ಸಂಚು ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಯಾರೇ ಏನೇ ಹೇಳಲಿ, ಡಿಕೆಶಿ ನನಗೆ ಬ್ರದರ್ ಅಂದಿದ್ದಾರೆ ಅಂತನೂ ಶಾರೀಕ್ ಹೇಳಿದ್ದಾನೆ. ಡಿಕೆಶಿ ಈಗ ಉತ್ತರ ಕೊಡಬೇಕು. ಈತ ಡಿಕೆಶಿಗೆ ಯಾವ ಬ್ರದರ್ ಅಂತ ಹೇಳಬೇಕು. ಈ ಉಗ್ರನ ಟಾರ್ಗೆಟ್ ಶಿವ. ಕಾಂಗ್ರೆಸ್‌ಗೂ ಈಶ್ವರನ ಕಂಡರೇ ಆಗಲ್ಲ, ಮಂಜುನಾಥನ ಕಂಡ್ರೆ ಆಗಲ್ಲ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವನೂ ತನ್ನ ತಪ್ಪು ಒಪ್ಪಿಕೊಳ್ಳಲಿ. ಕಾಂಗ್ರೆಸ್‌ನವ್ರು ಉಗ್ರರನ್ನು ಬ್ರದರ್ಸ್ ಅಂತಾರೆ. ಅವರಿಗೆ ದೇಶಕ್ಕೆ ಏನಾದರೂ ಪರವಾಗಿಲ್ಲ. ಇಷ್ಟಾದರೂ ಕಾಂಗ್ರೆಸ್‌ನವ್ರಿಗೆ ಬುದ್ಧಿ ಬಂದಿಲ್ಲ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಗ್ಯಾಸ್ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ, ಪೆಟ್ರೋಲಿಯಂ ಸಚಿವರು ಮಾತಾಡಲಿ: ಮುನಿಯಪ್ಪ

TAGGED:bengalurubjpcm siddaramaiahDK Shivakumarr ashokಆರ್‌.ಅಶೋಕ್‌ಕಾಂಗ್ರೆಸ್ಡಿಕೆ ಶಿವಕುಮಾರ್ಬಿಜೆಪಿಬೆಂಗಳೂರುಸಿಎಂ ಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Ravindra Jadeja
Cricket

ಜಡೇಜಾ ಜಾದೂ – ತವರಲ್ಲೇ ಜೈಂಟ್ಸ್‌ ಕೆಡವಿ ಆರ್‌ಸಿಬಿ ಹಿಂದಿಕ್ಕಿದ ರಾಯಲ್ಸ್‌

Public TV
By Public TV
5 hours ago
Shivaraj Tangadagi
Districts

ಕುಡಿವ ನೀರಿಗಾಗಿ ಸಚಿವ ತಂಗಡಗಿ ಕಾರಿಗೆ ಗ್ರಾಮಸ್ಥರ ಮುತ್ತಿಗೆ 

Public TV
By Public TV
6 hours ago
BYRaghavendra
Districts

ಮೆಗ್ಗಾನ್ ಆಸ್ಪತ್ರೆಯಲ್ಲಿ ಎನ್ಐಸಿಯು ಘಟಕ ಸ್ಥಾಪನೆಗೆ ಕೇಂದ್ರದಿಂದ 5 ಕೋಟಿ ಅನುದಾನ: ಬಿವೈಆರ್

Public TV
By Public TV
6 hours ago
gas tanker overturns near kalghatagi traffic halted on national highway 63
Districts

ಕಲಘಟಗಿ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ – ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಂಚಾರ ಸ್ಥಗಿತ, ಮಾರ್ಗ ಬದಲಾವಣೆ

Public TV
By Public TV
7 hours ago
Davanagere By Election Our leaders have been cornered Ulemas slams Karnataka Congress govt
Bengaluru City

ನಮ್ಮ ನಾಯಕರನ್ನು ಮೂಲೆಗೆ ಸೇರಿಸಿದ್ದಾರೆ: ಕಾಂಗ್ರೆಸ್‌ ವಿರುದ್ಧ ಉಲೇಮಾಗಳು ಕಿಡಿ

Public TV
By Public TV
7 hours ago
DOVE
Bengaluru City

ಪಾರಿವಾಳದ ವಿಚಾರಕ್ಕೆ ಗಲಾಟೆ – ಚಾಕು ಇರಿದು ಯುವಕನ ಹತ್ಯೆ

Public TV
By Public TV
7 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?