ವಾಷಿಂಗ್ಟನ್: ಇಂಡಿಯಾ ಆಟಗಾರ ಶಿಖರ್ ಧವನ್ ಅವರು ಬರೋಬ್ಬರಿ 2 ವರ್ಷಗಳ ನಂತರ ಮಗನನ್ನು ಭೇಟಿ ಮಾಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
Advertisement
2 ವರ್ಷಗಳ ಬಳಿಕ ನನ್ನ ಮಗನನ್ನು ಭೇಟಿ ಆಗುತ್ತಿದ್ದೇನೆ. ಅವನೊಂದಿಗೆ ಆಟವಾಡುವುದು, ತಬ್ಬಿಕೊಳ್ಳುವುದು, ಮಾತನಾಡುವುದು ಸೇರಿದಂತೆ ಸಾಕಷ್ಟು ಭಾವನಾತ್ಮಕ ಕ್ಷಣಗಳಿವೆ. ಇದು ಸದಾ ನೆನಪಿನಲ್ಲಿ ಉಳಿಯುವ ಕ್ಷಣಗಳು ಎಂದು ಬರೆದುಕೊಂಡು ಮಗನ ಜೊತೆಗೆ ಸಮಯ ಕಳೆಯುತ್ತಿರುವ ಸುಂದರ ಕ್ಷಣಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
Advertisement
View this post on Instagram
Advertisement
ಕಳೆದ ವರ್ಷ ಶಿಖರ್ ವೈವಾಹಿಕ ಜೀವನದಲ್ಲಿ ಬಿರುಗಾಳಿ ಬೀಸಿತ್ತು. ಆಯೇಷಾ ಮುಖರ್ಜಿ (ಶಿಖರ್ ಅವರ ಪತ್ನಿ), ಸೆಪ್ಟೆಂಬರ್‌ನಲ್ಲಿ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದರು. ಇದರೊಂದಿಗೆ ಒಂಬತ್ತು ವರ್ಷಗಳ ವೈವಾಹಿಕ ಜೀವನ ಮುರಿದು ಬಿದ್ದಿತ್ತು. ಶಿಖರ್ ಧವನ್ ಅಕ್ಟೋಬರ್ 2012ರಲ್ಲಿ ಆಯೇಷಾ ಮುಖರ್ಜಿ ಅವರನ್ನು ವಿವಾಹವಾದರು. ಎರಡು ವರ್ಷಗಳ ನಂತರ, 2014ರಲ್ಲಿ, ಜೋರಾವರ್ ಜನಿಸಿದರು. ಜೋರಾ ಈಗ ತನ್ನ ತಾಯಿಯೊಂದಿಗೆ ಮೆಲ್ಬೋರ್ನ್‍ನಲ್ಲಿ ವಾಸಿಸುತ್ತಿದ್ದಾರೆ. ಇದೀಗ ತಂದೆ, ಮಗನಿಗೆ ಭೇಟಿಯಾಗವ ಅವಕಾಶ ಸಿಕ್ಕಿದೆ.
Advertisement
ಧವನ್ ಪುತ್ರ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದು, ಕೊರೊನಾ ನಿರ್ಬಂಧದ ಹಾಗೂ ಬಿಡುವಿಲ್ಲದ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸಿದ್ದ ಕಾರಣ ಧವನ್ ತಮ್ಮ ಪುತ್ರನನ್ನು ಭೇಟಿಯಾಗಿರಲಿಲ್ಲ. ಇದೀಗ ತಮ್ಮ ಮಗನನ್ನು ಭೇಟಿಯಾಗಿ ಸಖತ್ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ.