BollywoodCinemaLatestMain Post

ಬಾಲಿವುಡ್‌ಗೆ ಎಂಟ್ರಿ ಕೊಟ್ಟ `ಮಾಸ್ಟರ್ ಪೀಸ್’ ನಟಿ ಶಾನ್ವಿ ಶ್ರೀವಾಸ್ತವ್

`ಚಂದ್ರಲೇಖಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ಶಾನ್ವಿ ಇದೀಗ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ರೊಮ್ಯಾಂಟಿಕ್ ಆಲ್ಬಂ ಸಾಂಗ್ ಮೂಲಕ ಬಿಟೌನ್ ಅಡ್ಡಾಗೆ ʻಮಾಸ್ಟರ್ ಪೀಸ್ʼ ಬ್ಯೂಟಿ ಶಾನ್ವಿ ಎಂಟ್ರಿ ಕೊಟ್ಟಿದ್ದಾರೆ.

`ಮಾಸ್ಟರ್ ಪೀಸ್’, `ತಾರಕ್’ `ಮಫ್ತಿ’, `ಭಲೇ ಜೋಡಿ’, ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡಿರುವ ನಟಿ ಶಾನ್ವಿ ಶ್ರೀವಾಸ್ತವ್ ಈಗ ಬಾಲಿವುಡ್‌ಗೆ ಹಿಂದಿ ಆಲ್ಬಂ ಸಾಂಗ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ತೆಲುಗು, ಕನ್ನಡ, ಮಾಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡ ಬಳಿಕ ಹಿಂದಿ ಆಲ್ಬಂ ಸಾಂಗ್‌ನಲ್ಲಿ ಶಾನ್ವಿ ಮಿಂಚಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯ ಕೊನೆಯ ಕ್ಯಾಪ್ಟನ್ ಆಗಿ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ

ಮಾಸ್ಟರ್ ಪೀಸ್ ಸುಂದರಿ ಸೈಲೆಂಟ್ ಆಗಿ ಬಿಟೌನ್ ಸ್ಟಾರ್ ಸಿಂಗರ್ ಜುಬಿನ್ ನಾತಿಯಲ್ ಜತೆ ಆಲ್ಬಂ ಸಾಂಗ್‌ನಲ್ಲಿ ಶಾನ್ವಿ ಕಾಣಿಸಿಕೊಂಡಿದ್ದಾರೆ. ಗ್ಲಾಮರಸ್ ಲುಕ್‌ನಲ್ಲಿ ಸಖತ್ ಕಲರ್‌ಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಾಂಗ್ ಮಿಲಿಯನ್‌ಗಟ್ಟಲೇ ವಿವ್ಸ್ ಗಿಟ್ಟಿಸಿಕೊಂಡಿದ್ದು, ಸಾಂಗ್ ಟ್ರೆಂಡಿಂಗ್‌ನಲ್ಲಿದೆ.

 

View this post on Instagram

 

A post shared by Shanvi sri (@shanvisri)


ಶಾನ್ವಿ ಶ್ರೀವಾಸ್ತವ್ ಹೊಸ ಲುಕ್ ಮತ್ತು ಆಲ್ಬಂ ಸಾಂಗ್ ನೋಡಿ, ಫ್ಯಾನ್ಸ್ ಫಿದಾ ಆಗಿದ್ದಾರೆ. ನೆಚ್ಚಿನ ನಟಿಯ ಮುಂಬರುವ ಚಿತ್ರಕ್ಕಾಗಿ ಕಾಯ್ತಿದ್ದಾರೆ.

Live Tv

Leave a Reply

Your email address will not be published.

Back to top button