ಮುಂಬೈ: ಮಹಿಳಾ ಕ್ರಿಕೆಟ್‍ನಲ್ಲಿ (Women’s Cricket) ಕಿರಿಯ ವಯಸ್ಸಿಗೆ ಟೀಂ ಇಂಡಿಯಾಗೆ (Team India) ಎಂಟ್ರಿಕೊಟ್ಟು ಅಬ್ಬರಿಸಿದ ಹುಡುಗಿ ಶಿಫಾಲಿ ವರ್ಮಾ (Shafali Verma) ಇದೀಗ ಅಂಡರ್-19 ಆಡಲು ಸಿದ್ಧರಾಗಿದ್ದಾರೆ.
Advertisement
ಸ್ಫೋಟಕ ಬ್ಯಾಟರ್ ಆಗಿ ಟೀಂ ಇಂಡಿಯಾ ಪರ ಹವಾ ಸೃಷ್ಟಿಸಿರುವ ಶಿಫಾಲಿ 18ರ ಪೋರಿ. ತನ್ನ ಹೊಡಿಬಡಿ ಆಟದ ಮೂಲಕ ಕಿರಿಯ ವಯಸ್ಸಿಗೆ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು. ಅಲ್ಲದೇ ಈಗಾಗಲೇ ಹಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು ಕೂಡ ಆಡಿದ್ದಾರೆ. ಈ ನಡುವೆ ಶಿಫಾಲಿ ಇದೀಗ ಮುಂದಿನ ಜನವರಿಯಲ್ಲಿ ನಡೆಯಲಿರುವ ಅಂಡರ್-19 (U19) ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಭಾರತ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಕ್ಯಾಚ್ ಕೈಚೆಲ್ಲಿದ ಸುಂದರ್‌ಗೆ ಕೆಟ್ಟದಾಗಿ ಬೈದ ರೋಹಿತ್ – ನೆಟ್ಟಿಗರ ಆಕ್ರೋಶ
Advertisement
Advertisement
ಹೌದು ಶಿಫಾಲಿಗೆ ಇದೀಗ 18 ವರ್ಷ ವಯಸ್ಸು ಹಾಗಾಗಿ ಮೊಟ್ಟ ಮೊದಲ ಬಾರಿಗೆ ಆರಂಭವಾಗುತ್ತಿರುವ ಮಹಿಳಾ ಅಂಡರ್-19 ಟಿ20 ವಿಶ್ವಕಪ್‍ನಲ್ಲಿ ಆಡಲು ಆಯ್ಕೆಯಾಗಿದ್ದಾರೆ. ಇದೀಗ ಶಿಫಾಲಿ ವರ್ಮಾ ನೇತೃತ್ವದಲ್ಲಿ ಅಂಡರ್-19 ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಇದನ್ನೂ ಓದಿ: ಕ್ರಿಕೆಟ್‌ನಲ್ಲೂ ಮೀಸಲಾತಿ ತರಬೇಕು – ನಟ ಚೇತನ್
Advertisement
ಚೊಚ್ಚಲ ಬಾರಿಗೆ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಆಯೋಜನೆ ಮಾಡಲಾಗಿದ್ದು, ಸೌತ್ ಆಫ್ರಿಕಾದಲ್ಲಿ ಟೂರ್ನಿ ನಡೆಯಲಿದೆ. ಒಟ್ಟು 16 ತಂಡಗಳು ಭಾಗವಹಿಸುತ್ತಿದ್ದು, 2023ರ ಜನವರಿ 14 ರಿಂದ 29ರ ವರೆಗೆ ನಡೆಯಲಿದೆ.
Here's India Women Under-19's #T20WorldCup squad ???? pic.twitter.com/5b0b5mLffs
— BCCI Women (@BCCIWomen) December 5, 2022
ಮಹಿಳಾ ತಂಡ:
ಶಫಾಲಿ ವರ್ಮಾ (ಕ್ಯಾಪ್ಟನ್), ಶ್ವೇತಾ ಸೆಹ್ರಾವತ್ (ಉಪನಾಯಕಿ), ರಿಚಾ ಘೋಷ್ (WK), ಜಿ ತ್ರಿಶಾ, ಸೌಮ್ಯ ತಿವಾರಿ, ಸೋನಿಯಾ ಮೆಹದಿಯಾ, ಹರ್ಲಿ ಗಾಲಾ, ಹೃಷಿತಾ ಬಸು (WK), ಸೋನಮ್ ಯಾದವ್, ಮನ್ನತ್ ಕಶ್ಯಪ್, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ, ಟಿಟಾಸ್ ಸಾಧು, ಫಲಕ್ ನಾಜ್, ಶಬ್ನಮ್ ಎಂ.ಡಿ.