– ತಕ್ಷಣದಿಂದ ಜಾರಿಗೆ ಬರುವಂತೆ ದರ ಏರಿಕೆ
ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ (Gold) ಮತ್ತು ಬೆಳ್ಳಿಯ (Silver) ಬೆಲೆಗಳು ಮತ್ತಷ್ಟು ದುಬಾರಿಯಾಗಲಿವೆ. ಚಿನ್ನ ಖರೀದಿಯನ್ನು ಮುಂದೂಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈಗ ಚಿನ್ನ ಮತ್ತು ಬೆಳ್ಳಿ ಮೇಲಿನ ಒಟ್ಟು ಒಟ್ಟು ಆಮದು ಸುಂಕವನ್ನು (Import Duty) ತಕ್ಷಣದಿಂದ ಜಾರಿಗೆ ಬರುವಂ 15% ಕ್ಕೆ ಭಾರಿ ಏರಿಕೆ ಮಾಡಿದೆ.
ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು (Foreign Exchange Reserves) ರಕ್ಷಿಸಲು ಮತ್ತು ರೂಪಾಯಿ ಮೌಲ್ಯದ ಕುಸಿತವನ್ನು ತಡೆಯಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಹಿಂದೆ ಎಷ್ಟಿತ್ತು?
ಮೂಲ ಕಸ್ಟಮ್ಸ್ ಸುಂಕ (BCD) ಈ ಹಿಂದೆ 5% ಇತ್ತು. ಈಗ ಇದನ್ನು 10%ಗೆ ಏರಿಕೆ ಮಾಡಲಾಗಿದೆ. ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (AIDC) ಈ ಹಿಂದೆ 5% ಇತ್ತು. ಈ ಸೆಸ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಮೂಲ ಕಸ್ಟಮ್ಸ್ ಸುಂಕ 5% ಏರಿಕೆ ಮಾಡಿದ್ದರಿಂದ ಒಟ್ಟು ಆಮದು ಸುಂಕ 15% ಏರಿಕೆಯಾಗಿದೆ.
ಭಾರತದಲ್ಲಿ ಚಿನ್ನದ ಹೂಡಿಕೆ (Gold ETFs) ಮತ್ತು ಖರೀದಿ ತೀವ್ರವಾಗಿ ಹೆಚ್ಚಿದ್ದರಿಂದ ಆಮದು ಪ್ರಮಾಣ ಹೆಚ್ಚಾಗಿತ್ತು, ಇದನ್ನು ನಿಯಂತ್ರಿಸಲು ಸುಂಕ ಏರಿಸಲಾಗಿದೆ.
ಆಮದು ಸುಂಕ ಹೆಚ್ಚಾದ ಬೆನ್ನಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ತಕ್ಷಣವೇ ದುಬಾರಿಯಾಗಲಿವೆ. ಮುಂಬರುವ ಹಬ್ಬ ಹಾಗೂ ಮದುವೆ ಸೀಸನ್‌ಗಳಲ್ಲಿ ಆಭರಣ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಚಾರ್ಜ್ ಹಾಗೂ ಜಿಎಸ್‌ಟಿ ಜೊತೆಗೆ ಈ ಹೆಚ್ಚುವರಿ ಸುಂಕದ ಹೊರೆಯೂ ತಟ್ಟಲಿದೆ.
ಸಾರ್ವಜನಿಕರು ಕನಿಷ್ಠ ಒಂದು ವರ್ಷದವರೆಗೆ ಅನಗತ್ಯ ಚಿನ್ನದ ಖರೀದಿಯನ್ನು ಮುಂದೂಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇತ್ತೀಚೆಗೆ ಮನವಿ ಮಾಡಿದ್ದರು.
ದುಬಾರಿ ಹೇಗೆ?
ಆಮದಾಗುವ ಚಿನ್ನದ ಮೇಲೆ 15% ತೆರಿಗೆ ವಿಧಿಸಲಾಗಿದೆ. ಇದರ ಜೊತೆ ಇದರ ಜೊತೆಗೆ ಚಿನ್ನದ ಮೌಲ್ಯದ ಮೇಲೆ 3% ಜಿಎಸ್‌ಟಿ ಮೊದಲದೇ ವಿಧಿಸಲಾಗಿದೆ. ಹೀಗಾಗಿ ಚಿನ್ನದ ದರ ಮತ್ತಷ್ಟು ಏರಿಕೆಯಾಗಲಿದೆ.
ಏರಿಕೆ ಮಾಡಿದ್ದು ಯಾಕೆ?
ಭಾರತದ ಚಿನ್ನದ ಆಮದು ಬಿಲ್ 2025 ರಲ್ಲಿ ಸುಮಾರು 58.9 ಬಿಲಿಯನ್ ಡಾಲರ್‌ಗೆ(5.62 ಲಕ್ಷ ಕೋಟಿ ರೂ.) ತಲುಪಿತ್ತು, ಇದು ದೇಶದ ಒಟ್ಟು ವಿದೇಶಿ ವಿನಿಮಯ ಮೀಸಲು ನಿಧಿಯ (Forex Reserves) ಮೇಲೆ ಭಾರಿ ಒತ್ತಡ ಹೇರಿತು.
ಚಿನ್ನಕ್ಕಾಗಿ ಭಾರತೀಯ ರೂಪಾಯಿಗಳನ್ನು ನೀಡಿ ಡಾಲರ್ ಖರೀದಿಸುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿಯುತ್ತಿತ್ತು. ಇದನ್ನು ತಡೆಯಲು ಆಮದು ಪ್ರಮಾಣವನ್ನು ಕಡಿಮೆ ಮಾಡುವುದು ಅನಿವಾರ್ಯವಾಗಿತ್ತು.
ತೆರಿಗೆ ಇಳಿಸಿದ್ದ ಸರ್ಕಾರ
ವರ್ಷದಿಂದ ವರ್ಷಕ್ಕೆ ಚಿನ್ನದ ಸ್ಮಗ್ಲಿಂಗ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ 2024 ರ ಬಜೆಟ್‌ನಲ್ಲಿ ತೆರಿಗೆ ಇಳಿಸಿತ್ತು. ಚಿನ್ನ ಮತ್ತು ಬೆಳ್ಳಿಯ ಕಸ್ಟಮ್ಸ್ ಡ್ಯುಟಿ 15% ಇದ್ದರೆ ಅದನ್ನು 6% ಇಳಿಸಲಾಗಿತ್ತು. 6% ಹೇಗೆ ಅಂದರೆ ಅಮದು ಸುಂಕವನ್ನು 10% ರಿಂದ 5% ಇಳಿಕೆ ಮಾಡಿದ್ದರೆ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ 5% ನಿಂದ 1% ಕ್ಕೆ ಇಳಿಸಲಾಗಿತ್ತು. ಆದರೆ ಈಗ ಮತ್ತೆ ಆಮದು ಸುಂಕವನ್ನು 15%ಗೆ ಏರಿಕೆ ಮಾಡಿದೆ.

