ಬಾಲಿವುಡ್ ನಟಿ ಮೌನಿ ರಾಯ್(Mouni Roy) ತಮ್ಮ ಪತಿ ಸೂರಜ್ ನಂಬಿಯಾರ್(Suraj Nambiar) ಪರಸ್ಪರ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಈ ಸಡನ್ ಬದಲಾವಣೆಯಿಂದ ಈ ಜೋಡಿ ಬೇರಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈ ವಿಷಯದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಹಿಂದಿ ಭಾಷೆಯಲ್ಲಿ ನಾಗಿಣಿ ಧಾರಾವಾಹಿ ಮೂಲಕ ಖ್ಯಾತಿ ಪಡೆದು ಬಾಲಿವುಡ್(Bollywood) ರಂಗದಲ್ಲಿ ಮಿಂಚುತ್ತಿರುವ ನಟಿ ಮೌನಿ ರಾಯ್ ಭಾರತೀಯ ಸಿನಿಪ್ರೇಮಿಗಳಿಗೆ ಚಿರಪರಿಚಿತ. ಈ ಜೋಡಿ ಅಗಾಗ ಜೊತೆಗಿದ್ದ ಪೋಟೋ ಮತ್ತು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಿದ್ದರು. ಆದರೆ ಈ ಜೋಡಿ ಈಗ ಜೊತೆಯಾಗಿಲ್ಲ, ಇವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ.
ಅಷ್ಟಕ್ಕೂ ಈ ರೀತಿ ಫ್ಯಾನ್ಸ್ ಮಾತನಾಡೋದಕ್ಕೂ ಒಂದು ಕಾರಣ ಇದೆ. ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಪರಸ್ಪರ ಇನ್ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಆದರೆ ಈ ಜೋಡಿ ಜೊತೆಯಿದ್ದ ಹಳೆಯ ಫೋಟೋಗಳು ಹಾಗೆಯೇ ಇವೆ. ಏಕಾಏಕಿ ಮೌನಿ ಹೀಗೇಕೆ ಮಾಡಿದ್ದಾರೆ? ಇವರಿಬ್ಬರು ಡಿವೋರ್ಸ್ ತೆಗೆದುಕೊಳ್ಳುತ್ತಿದ್ದಾರಾ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತದಲ್ಲಿ ತೆಲುಗು ನಟ ದುರ್ಮರಣ

ಈ ವಿಷಯದ ಸಂಬಂಧ ಪ್ರತಿಕ್ರಿಯಿಸಿದ ಅಭಿಮಾನಿಗಳು, ನೀವಿಬ್ಬರು ಶಿವ-ಪಾರ್ವತಿಯಂತೆ ಕಾಣುತ್ತೀರಾ ಬೇರಾಗಬೇಡಿ. ಏನೇ ಸಮಸ್ಯೆ ಇದ್ದರೂ ಸರಿಪಡಿಸಿಕೊಂಡು ಮತ್ತೇ ಒಂದಾಗಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು, ನೀವು ಡಿವೋರ್ಸ್ ತೆಗೆದುಕೊಳ್ಳುತ್ತಿದ್ದೀರಾ ಎಂದು ಪ್ರಸ್ನಿಸುತ್ತಿದ್ದಾರೆ.
ಜನವರಿ 2022 ರಲ್ಲಿ ಗೋವಾದಲ್ಲಿರುವ ಕ್ಯಾಂಡೋಲಿಮ್‌ನ ಹಿಲ್ಟನ್ ರೆಸಾರ್ಟ್ ಮಲೆಯಾಳಿ ಮತ್ತು ಬಂಗಾಳಿ ಸಂಪ್ರದಾಯದ ಪ್ರಕಾರ ಇವರಿಬ್ಬರು ಮದುವೆಯಾಗಿದ್ದರು.

