ಹರಾರೆ: ಸೆಕ್ಸ್ ವೇಳೆ ಕಾಂಡೋಮ್ ಸ್ಫೋಟಗೊಂಡಿದಕ್ಕೆ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ವಿಚಿತ್ರ ಘಟನೆಯೊಂದು ಜಿಂಬಾಬ್ವೆ ದೇಶದ ಹೈಫೀಲ್ಡ್ ಪಟ್ಟಣದ ಮ್ಯಾಚಿಪಿಸಾ ಎಂಬಲ್ಲಿ ನಡೆದಿದೆ.
34 ವರ್ಷದ ಗಾಡ್ಫ್ರೆ ಮುಟ್ಸಾವ್ ಎಂಬ ಹೆಸರಿನ ವ್ಯಕ್ತಿಯೊಬ್ಬ ಜುಲೈ 30ರಂದು ಸೆಕ್ಸ್ ವರ್ಕರ್ ಮಹಿಳೆಯನ್ನು ಭೇಟಿ ಮಾಡಿದ್ದಾನೆ. ಈ ವೇಳೆ ಮಹಿಳೆಯನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಾನೆ. ಮಹಿಳೆ ಸಹ 10 ಡಾಲರ್ (700 ರೂ.) ನೀಡಿದ್ರೆ ಬರುತ್ತೇನೆ ಅಂತಾ ಹೇಳಿ ಎರಡು ಷರತ್ತು ವಿಧಿಸಿದ್ದಳು.
Advertisement
Advertisement
ಮ್ಯಾಚಿಪಿಸಾ ಪಟ್ಟಣದಲ್ಲಿಯೇ ಕೋಣೆಯನ್ನು ಬುಕ್ ಮಾಡಬೇಕು ಮತ್ತು ನಾನು ನೀಡುವ ಸುರಕ್ಷಿತ ಕಾಂಡೋಮ್ ಬಳಸಬೇಕೆಂದು ಎರಡು ಷರತ್ತು ವಿಧಿಸಿದ್ದಳು. ಮಹಿಳೆಯ ಷರತ್ತು ಒಪ್ಪಿದ ಮುಟ್ಸಾವ್ ಆಕೆಯನ್ನು ತನ್ನ ಕೋಣೆಗೆ ಕರೆದುಕೊಂಡು ಹೋಗಿದ್ದಾನೆ.
Advertisement
ಲೈಂಗಿಕ ಕ್ರಿಯೆ ವೇಳೆ ಎಚ್ಚೆತ್ತ ಮಹಿಳೆ ಕಾಂಡೋಮ್ ಹರಿದಿದೆ ಎಂದು ದೂರ ಸರಿದಿದ್ದಾಳೆ. ತಾನು ಸುರಕ್ಷಿತ ಲೈಂಗಿಕತೆ ಇಷ್ಟಪಡುತ್ತೇನೆ. ಆದ್ರೆ ನೀನು ಉದ್ದೇಶಪೂರ್ವಕವಾಗಿ ಕಾಂಡೋಮ್ ಹರಿದಿದ್ದೀಯಾ ಎಂದು ದೂರಿದ್ದಾಳೆ. ಕೊನೆಗೆ ಮುಟ್ಸಾವ್ ಒಪ್ಪಂದದಂತೆ 10 ಡಾಲರ್ ನೀಡದೇ 8 ಡಾಲರ್ ನೀಡಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಕಾರ್ ಬುಕ್ ಮಾಡಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ.
Advertisement
ಠಾಣೆಗೆ ಬಂದ ಮುಟ್ಸಾವ್, ನಾನು ಉದ್ದೇಶಪೂರ್ವಕವಾಗಿ ಕಾಂಡೋಮ್ ಕಟ್ ಮಾಡಿಲ್ಲ. ಸೆಕ್ಸ್ ವೇಳೆ ಆಕಸ್ಮಿಕವಾಗಿ ಕಾಂಡೋಮ್ ಸ್ಫೋಟಗೊಂಡಿದೆ. ಈ ಹಿಂದೆ ನಾನು ನೀಡಿದಂತೆ ಈ ಮಹಿಳೆ 8 ಡಾಲರ್ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾನೆ. ಪ್ರಕರಣದ ವಿಚಾರಣೆಯಲ್ಲಿಯೂ ಸಹ ಮುಟ್ಸಾವ್ ತನ್ನದೇನು ತಪ್ಪಿಲ್ಲ. ಇದೊಂದು ಆಕಸ್ಮಿಕ ಘಟನೆಯೊಂದು ವಾದಿಸಿದ್ದಾನೆ. ಸದ್ಯ ಅರ್ಜಿ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv