ಚಿಕ್ಕೋಡಿ: ಅಣ್ಣ ತಮ್ಮಂದಿರೂ ಎಲ್ಲರೂ ಒಂದೇ ಎಂಬ ಮನಸ್ಥಿತಿಯಿಂದ ಹೊರಗೆ ಬರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಜನರಲ್ಲಿ ಮನವಿ ಮಾಡಿದರು.
Advertisement
ರಾಯಭಾಗದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ನನ್ನನ್ನು ಅಣ್ಣ-ತಮ್ಮಂದಿರು ಸೋಲಿಸಿದ್ದಾರೆ. ಅದಕ್ಕೆ ಎಲ್ಲರೂ ಅಣ್ಣ-ತಮ್ಮಂದಿರೂ ಒಂದೇ ಎಂಬ ಭಾವನೆಯಿಂದ ಹೊರ ಬನ್ನಿ ಎಂದು ಕೇಳಿಕೊಂಡರು. ರಮೇಶ್ ಮತ್ತು ಲಖನ್ ಜಾರಕಿಹೊಳಿ ಅವರನ್ನು ಗೆಲ್ಲಿಸುವುದು ನನ್ನ ಕನಸಿನಲ್ಲಿಯೂ ಸಹ ಇಲ್ಲ ಎಂದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 7, ಜೈಪುರದಲ್ಲಿ 9 ಜನರಿಗೆ ಓಮಿಕ್ರಾನ್- 21ಕ್ಕೆ ಏರಿದ ಕೇಸ್
Advertisement
Advertisement
ಪಕ್ಷೇತರ ಅಭ್ಯರ್ಥಿಯ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಂತೆ ಲಖನ್ ಜಾರಕಿಹೊಳಿ ಜಾಗದಲ್ಲಿ ವಿವೇಕರಾವ್ ಪಾಟೀಲ್ ಸ್ಪರ್ಧೆ ಮಾಡಿದ್ದರೆ ಈ ಗೊಂದಲವೇ ಇರುತ್ತಿರಲಿಲ್ಲ. ಸಚಿವ ಗೋವಿಂದ ಕಾರಜೋಳ ಅವರು ಜನವರಿ 10ಕ್ಕೆ ಚುನಾವಣೆ ಎಂದು ತಿಳಿದುಕೊಂಡಿರಬೇಕು. ಇನ್ನು ಕೂಡ ಅವರು ಎಲ್ಲೂ ಸಹ ಪತ್ತೆಯಾಗಿಲ್ಲ. ಉಮೇಶ್ ಕತ್ತಿ, ಸವದಿ ಬೆಂಗಳೂರಿನಲ್ಲಿದ್ದಾರೆ. ಬಿಜೆಪಿಯಿಂದ ಇಬ್ಬರು ಸ್ಪರ್ಧೆ ಮಾಡಿದ್ದಾರೆ. ಒಬ್ಬರು ಎ ಟೀಮ್ ಇನ್ನೊಬ್ಬರು ಬಿ ಟೀಮ್. ಸದ್ಯ ಗೊಂದಲ ಮಾಡೋರೆಲ್ಲರೂ ಈಗ ಬಿಜೆಪಿಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.
Advertisement
ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಹೀನಾಯವಾಗಿ ಸೋಲಿಸುವಲ್ಲಿ ಅವರು ಯಶಸ್ವಿಯಾದರು. ಆದರೆ ಈ ಚುನಾವಣೆಯಲ್ಲಿ ನಾಲ್ಕು ಸಾವಿರ ಮತಗಳಿಂದ ನಾವು ಗೆಲುವು ಸಾಧಿಸುತ್ತೇವೆ. ಅಣ್ಣ ತಮ್ಮಂದಿರೂ ಎಲ್ಲರೂ ಒಂದೇ ಎಂಬ ಮನಸ್ಥಿತಿಯಿಂದ ಹೊರಗೆ ಬರಬೇಕು. ಕಳೆದ ಬಾರಿ ನನ್ನ ಅವರು ಸೋಲಿಸಿದ್ದಾರೆ. ಅದನ್ನು ಈಗ ನಾವು ಪಡೆದುಕೊಳ್ಳಬೇಕಾಗಿದೆ ಎಂದು ಪ್ರಚೋದಿಸಿದರು. ಇದನ್ನೂ ಓದಿ: ಜರತಾರಿ ಸೀರೆ, ಆಭರಣ ಧರಿಸಿ ರೈಲ್ವೇ ನಿಲ್ದಾಣದಲ್ಲಿ ಊಟ ಹಂಚಿದ ಮಹಿಳೆ
ಗೋಕಾಕದಲ್ಲಿ ನಾನೇ ಏಜೆಂಟ್ ಆಗುತ್ತಿದ್ದೇನೆ. ಏಜೆಂಟ್ ಆಗದಿದ್ದರೆ ನೂರಕ್ಕೆ ನೂರು ವೋಟ್ ಲಖನ್ ಅವರಿಗೆ ಬೀಳುತ್ತವೆ. ಹೀಗಾಗಿ ನಾನು ಏಜೆಂಟ್ ಆಗುತ್ತಿದ್ದೇನೆ. ನನ್ನ ಮಕ್ಕಳು ಸಹ ಬೂತ್ ಏಜೆಂಟ್ ಗಳು ಆಗುತ್ತಿದ್ದಾರೆ. ಅಣ್ಣ-ತಮ್ಮಂದಿರೂ ಒಂದೇ ಎಂಬ ಮನಸ್ಥಿತಿಯಿಂದ ನೀವು ಹೊರ ಬನ್ನಿ. ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.