CoronaLatestMain PostNational

ಮಹಾರಾಷ್ಟ್ರದಲ್ಲಿ 7, ಜೈಪುರದಲ್ಲಿ 9 ಜನರಿಗೆ ಓಮಿಕ್ರಾನ್- 21ಕ್ಕೆ ಏರಿದ ಕೇಸ್

ಮುಂಬೈ: ದಕ್ಷಿಣ ಆಫ್ರಿಕಾದ ರೂಪಾಂತರಿ ಓಮಿಕ್ರಾನ್ ಭಾರತದಲ್ಲಿ ಅವಾಂತರ ಸೃಷ್ಟಿಸೋಕೆ ಸರ್ವರೀತಿಯಲ್ಲೂ ಸಜ್ಜಾಗಿದೆ. ದೇಶಾದ್ಯಂತ ಇವತ್ತು ಒಂದೇ ದಿನ 17 ಕೇಸ್ ದಾಖಲಾಗೋ ಮೂಲಕ ಓಮಿಕ್ರಾನ್ ಸೋಂಕಿತರ ಸಂಖ್ಯೆ ಒಟ್ಟು 21ಕ್ಕೆ ಏರಿಕೆಯಾಗಿದೆ.

ಆಫ್ರಿಕಾದ ನೈಜೀರಿಯಾದ ಲಾಗೋಸ್ ನಗರದಿಂದ 44 ವರ್ಷದ ಮಹಿಳೆ ತನ್ನ ಇಬ್ಬರು ಹೆಣ್ಣುಮಕ್ಕಳ ಜೊತೆ ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚ್ವಾಡ ದ ಅಣ್ಣನ ಮನೆಗೆ ನವೆಂಬರ್ 24ರಂದು ಆಗಮಿಸಿದ್ದರು. ಇವರಿಂದ 45 ವರ್ಷದ ಸಹೋದರ, ಆತನ ಎರಡೂವರೆ ವರ್ಷ ಮತ್ತು 7 ವರ್ಷದ ಮಕ್ಕಳಿಗೆ ಒಮ್ರಿಕಾನ್ ದೃಢವಾಗಿದೆ. ಇನ್ನುಳಿದಂತೆ ಫಿನ್ಲೆಂಡ್ ಟ್ರಾವೆಲ್ ಹಿಸ್ಟರಿ ಹೊಂದಿರುವ 47 ವರ್ಷದ ವ್ಯಕ್ತಿಯೊಬ್ಬರಿಗೂ ಒಮಿಕ್ರಾನ್ ದೃಢವಾಗಿದೆ. ಈ ಮೂಲಕ ಪುಣೆಯಲ್ಲಿ ಒಂದೇ ದಿನ 7 ಓಮಿಕ್ರಾನ್ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಇಂದು 330 ಜನರು ಡಿಸ್ಚಾರ್ಜ್ – 6 ಸಾವು

ರಾಜಸ್ಥಾನದ ಜೈಪುರದಲ್ಲಿ 9 ಕೇಸ್ ದಾಖಲಾಗಿದೆ. ಈ 9 ಜನರೂ ಒಂದೇ ಕುಟುಂಬದವರಾಗಿದ್ದು, ಜೈಪುರದ ಆದರ್ಶನಗರ ನಿವಾಸಿಗಳಾಗಿದ್ದಾರೆ. ತಕ್ಷಣವೇ ರಾಜಸ್ಥಾನ ಸರ್ಕಾರ ಜೈಪುರಕ್ಕೆ ಹೊಂದಿಕೊಂಡಿರುವ ರೊಹಿಸಾ, ನಗೌರ್ ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಿದೆ.

ವಯಸ್ಕ ನಾಲ್ವರಿಗೂ ವ್ಯಾಕ್ಸಿನ್ ಡಬಲ್ ಡೋಸ್ ಆಗಿದೆ. ಇದಕ್ಕೂ ಮುನ್ನ, ದೆಹಲಿಯಲ್ಲಿ ಮೊದಲನೇ ಕೇಸ್ ಪತ್ತೆಯಾಗಿತ್ತು. ಈ ಹಿನ್ನೆಲೆ ಎಲ್‍ಎನ್‍ಜೆಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗ್ತಿದೆ. ಈ ಸೋಂಕಿತನಿಗೆ ಗಂಟಲು ನೋವು, ಸುಸ್ತು, ಮೈಕೈ ನೋವು ಕಾಣಿಸಿಕೊಂಡಿತ್ತು. ಇವರಿಗೆ 2 ಡೋಸ್ ವ್ಯಾಕ್ಸಿನ್ ಆಗಿದ್ದ ಕಾರಣ ತೀವ್ರ ತೊಂದರೆ ಆಗಿಲ್ಲ ಎಂದು ವೈದ್ಯರು ತಿಳಿಸಿದರು.

ಸೋಂಕಿತರು ತಾಂಜಾನಿಯದಿಂದ ಬಂದಿದ್ದಾರೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಇನ್ನೂ 17 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದ್ದಾರೆ. ಇವರೆಲ್ಲರ ಸ್ಯಾಂಪಲ್ಸ್‍ಗಳನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಕಳಿಸಲಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದರು.

12ಕ್ಕೆ ಏರಿದ ಓಮಿಕ್ರಾನ್ ಕೇಸ್!
ಮಹಾರಾಷ್ಟ್ರ -8 ಕೇಸ್( ಪುಣೆ 7 + ಮುಂಬೈನ ಡೋಂಬಿವ್ಲಿ 1), ಕರ್ನಾಟಕ – 2 ಕೇಸ್ (ಬೆಂಗಳೂರು), ದೆಹಲಿ- 1 ಕೇಸ್(ದೆಹಲಿ), ಗುಜರಾತ್- 1 ಕೇಸ್(ಜಾಮ್‍ನಗರ), * ರಾಜಸ್ಥಾನ 9 ಕೇಸ್ (ಜೈಪುರದ ಆದರ್ಶನಗರ)

ಓಮಿಕ್ರಾನ್ ಸೋಂಕಿತ ದೇಶದಿಂದ ಬಿಹಾರಕ್ಕೆ ಬಂದಿರುವ ಐವರಲ್ಲಿ ಕೊರೊನಾ ಪಾಸಿಟಿವ್ ಆಗಿದ್ದು, ಜಿನೋಮಿಕ್ ಟೆಸ್ಟ್ ಗೆ ಕಳಿಸಲಾಗಿದೆ. ಇನ್ನು, ವಿಶ್ವಾದ್ಯಂತ ಈಗಾಗಲೇ 30ಕ್ಕೂ ಹೆಚ್ಚು ದೇಶಗಳಲ್ಲಿ ಹೆಮ್ಮಾರಿ ಓಮ್ರಿಕಾನ್ ಪತ್ತೆಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಪದೇ ಪದೇ ಮುನ್ನೆಚ್ಚರಿಕೆ ನೀಡ್ತಲೇ ಇದೆ. ಓಮಿಕ್ರಾನ್ ಸೋಂಕು ಅಷ್ಟೊಂದು ಮಾರಣಾಂತಿಕವಲ್ಲದೆ ಇದ್ದರೂ, 3ನೇ ಅಲೆ ಉಂಟು ಮಾಡುವಷ್ಟು ಪ್ರಸರಣ ಸಾಮಥ್ರ್ಯ ಹೊಂದಿದೆ. ಈ ಮಧ್ಯೆ, ಅಮೆರಿಕ ಮತ್ತು ಇಂಗ್ಲೆಂಡ್ ದೇಶಗಳು ತಮ್ಮ ದೇಶ ಪ್ರವೇಶಿಸುವ ಎಲ್ಲ ವಿದೇಶಿ ಪ್ರಜೆಗಳಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿವೆ.

Leave a Reply

Your email address will not be published.

Back to top button