ಕೋಲಾರ: ಕಳೆದ ರಾತ್ರಿ ಸುರಿದ ಮಳೆಗೆ ಕೋಲಾರ (Kolar) ನಗರದ ಕಾಲೇಜು ವೃತ್ತದಲ್ಲಿರುವ ಸರ್ವಜ್ಞ ಪಾರ್ಕ್ (Park) ಸಂಪೂರ್ಣ ಜಲಾವೃತವಾಗಿದೆ.
ಪಾರ್ಕ್ನೊಳಗೆ ಮಳೆ ನೀರು ತುಂಬಿಕೊಂಡಿದ್ದು, ವಾಯುವಿಹಾರಕ್ಕೆ ಬಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಪಾರ್ಕ್ ದುರಸ್ತಿ ಕಾಮಗಾರಿ ವೇಳೆ ಮಳೆ ನೀರು ಸರಾಗವಾಗಿ ಹೊರಹೋಗಲು ಅಗತ್ಯ ವ್ಯವಸ್ಥೆ ಮಾಡದಿರುವುದೇ ಈ ಅವಾಂತರಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಸೋಮನಾಥ ದೇವಸ್ಥಾನ, ಬಿಜೆಪಿ ಕಚೇರಿಗೆ ಬಾಂಬ್ ಬೆದರಿಕೆ; ಭದ್ರತೆ ಹೆಚ್ಚಳ
ಮುಂಜಾನೆ ವಾಯುವಿಹಾರಕ್ಕೆ ಆಗಮಿಸಿದ ಜನರು ಪಾರ್ಕ್ನಲ್ಲಿ ನೀರು ತುಂಬಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ. ಪಾರ್ಕ್ ದುರಸ್ತಿ ಕಾಮಗಾರಿ ನಡೆಸಿದರೂ ನೀರು ಹೊರಹೋಗಲು ಸೂಕ್ತ ವ್ಯವಸ್ಥೆ ಮಾಡದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆ ಬಂದಾಗಲೆಲ್ಲಾ ಇದೇ ರೀತಿಯ ಸಮಸ್ಯೆ ಎದುರಾಗದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ವಾಯು ದಾಳಿಗೆ 28 ಉಗ್ರರು ಬಲಿ: ಪಾಕಿಸ್ತಾನ

