ನಿನ್ನೆ ತಮ್ಮ 40ನೇ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ. ಈ ಬಾರಿ ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಜಪಾನ್ ಗೆ ತೆರಳಿದ್ದರು. ಹಾಗಾಗಿ ಅವರ ನಟನೆಯ ಹಾಗೂ ನಿರ್ಮಾಣದ ಯಾವುದೇ ಪೋಸ್ಟರ್ ರಿಲೀಸ್ ಆಗಿರಲಿಲ್ಲ. ಈ ಕಾರಣದಿಂದಾಗಿಯೇ ಅಭಿಮಾನಿಗಳಿಗೆ ಸಹಜವಾಗಿಯೇ ನಿರಾಸೆ ಆಗಿತ್ತು. ಆ ನಿರಾಸೆಯನ್ನು ಹೋಗಲಾಡಿಸಿದ್ದಾರೆ. ಖ್ಯಾತ ಯುವ ಚಿತ್ರಕಲಾವಿದ ಬಾದಲ್ ನಂಜುಂಡ ಸ್ವಾಮಿ.
Advertisement
ತಮ್ಮ ವಿಶೇಷ ಕಲಾಕೃತಿ ಮತ್ತು ಅದನ್ನು ಪ್ರಸೆಂಟ್ ಮಾಡುವ ರೀತಿಯಲ್ಲಿ ಯಾವಾಗಲೂ ವಿಶೇಷವನ್ನೇ ಕಾಯ್ದುಕೊಂಡು ಬಂದಿರುವ ಬಾದಲ್, ಈ ಬಾರಿ ರಮ್ಯಾ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿಸಿದ್ದಾರೆ. ಯಲಹಂಕ ಸಮೀಪದ ಗೋಡೆಯ ಮೇಲೆ 35 ಫೀಟ್ ರಮ್ಯಾ ಚಿತ್ರವನ್ನು ಬಿಡಿಸಿದ್ದಾರೆ. ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಟಿಯೊಬ್ಬರ ಚಿತ್ರವು ಈ ಪ್ರಮಾಣದಲ್ಲಿ ಮೂಡಿ ಬಂದಿದೆ ಎನ್ನುವುದು ಮತ್ತೊಂದು ವಿಶೇಷ. ಇದನ್ನೂ ಓದಿ: ಜಪಾನ್ ನಲ್ಲಿ ಕುತ್ಕೊಂಡು ತನಗೀಗ 40 ವರ್ಷ ಎಂದು ಘೋಷಿಸಿಕೊಂಡ ರಮ್ಯಾ
Advertisement
Advertisement
ಸದ್ಯ ರಮ್ಯಾ ಅವರು ಜಪಾನ್ ಗೆ ಹಾರಿದ್ದು, ಅಲ್ಲಿಂದಲೇ ಅಭಿಮಾನಿಗಳಿಗೆ ವಯಸ್ಸಿನ ಮೇಘ ಸಂದೇಶವನ್ನೂ ಕಳುಹಿಸಿದ್ದಾರೆ. ಇವತ್ತು ತಮಗೀಗ 40 ವರ್ಷ ತುಂಬಿದ್ದು, ನಲವತ್ತರ ಕ್ಲಬ್ ನ ಸದಸ್ಯೆಯಾಗಿ ಬಡ್ತಿ ಪಡೆದಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಸ್ವತಃ ರಮ್ಯಾ ಅವರೇ ಹಂಚಿಕೊಂಡಿದ್ದರಿಂದ ಒಂದು ರೀತಿಯಲ್ಲಿ ಅಚ್ಚರಿಯೂ ವ್ಯಕ್ತವಾಗಿತ್ತು.
Advertisement
ರಮ್ಯಾ ಅವರಿಗೆ ಡಾಲಿ ಧನಂಜಯ್, ನಿರ್ಮಾಪಕ ಕಾರ್ತಿಕ್ ಗೌಡ ಸೇರಿದಂತೆ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಶುಭಾಶಯ ಕೋರಿದ್ದಾರೆ. ಬಹುತೇಕ ಸಂದೇಶಗಳಿಗೆ ಅವರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಈ ಹುಟ್ಟು ಹಬ್ಬಕ್ಕೆ ರಮ್ಯಾ ಅವರಿಗೆ ಡಬಲ್ ಧಮಾಕಾ. ಒಂದು ಕಡೆ ಅವರ ನಿರ್ಮಾಣ ಸಂಸ್ಥೆಯಿಂದ ಬರುತ್ತಿರುವ ಸಿನಿಮಾ ಶೂಟಿಂಗ್ ಮುಗಿಸಿದೆ. ಮತ್ತೊಂದು ಕಡೆ ಇನ್ನಷ್ಟೇ ಅವರ ನಟನೆಯ ಉತ್ತರ ಕಾಂಡ ಚಿತ್ರ ಶೂಟಿಂಗ್ ಆಗಬೇಕಿದೆ. ಹಾಗಾಗಿ ರಮ್ಯಾ ಅವರಿಗೆ ಈ ಹುಟ್ಟು ಹಬ್ಬ ವಿಶೇಷವಾಗಿದೆ.