Cinema
ವೀಡಿಯೋ: ಪವರ್ ಸ್ಟಾರ್ಗೆ ಕಲಬುರಗಿಯಲ್ಲಿ ಸಿಕ್ತು ಭರ್ಜರಿ ಸ್ವಾಗತ

ಕಲಬುರಗಿ: ಸ್ಯಾಂಡಲ್ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಂದು ಕಲಬುರಗಿಗೆ ಆಗಮಿಸಿದ್ದಾರೆ.
ಕನ್ನಡದ ಬಹುನಿರೀಕ್ಷಿತ ಚಿತ್ರ ‘ಯುವರತ್ನ’ ಸಿನಿಮಾದ ಪ್ರಚಾರಕ್ಕಾಗಿ ತಮ್ಮ ಚಿತ್ರತಂಡದೊಂದಿಗೆ ನಟ ಕಲಬುರಗಿಗೆ ಆಗಮಿಸಿದ್ದಾರೆ. ಪುನೀತ್ ಅವರು ಧನಂಜಯ್, ರವಿಶಂಕರ್ ಹಾಗೂ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ಜೊತೆ ಪ್ರಸಿದ್ಧ ಶರಣಬಸವೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.
ನಟ ದೇವಸ್ಥಾನದ ಆವರಣಕ್ಕೆ ಎಂಟ್ರಿಯಾಗುತ್ತಿದ್ದಂತೆಯೇ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಜೆಸಿಬಿ ಮೂಲಕ ಪುಷ್ಪವೃಷ್ಟಿ ಮಾಡಿ ತಮ್ಮ ನೆಚ್ಚಿನ ನಟನನ್ನು ನಗರದ ಜನತೆ ಬರಮಾಡಿಕೊಂಡಿದ್ದಾರೆ. ಅಲ್ಲದೆ ಅಪ್ಪು ಅಪ್ಪು ಎಂದು ಜೋರಾಗಿ ಕೂಗುತ್ತಾ ಜೈಕಾರ ಹಾಕಿದ್ದಾರೆ.
