ಹುಬ್ಬಳ್ಳಿ: ನೇಹಾ ಪ್ರಕರಣ (Neha Hiremath Murder Case) ಮಾಸುವ ಮುನ್ನವೇ ಅಪ್ರಾಪ್ತೆಯನ್ನು ಅನ್ಯಕೋಮಿನ ಯುವಕನೊಬ್ಬ ಗರ್ಭಿಣಿ (Minor Pregnant) ಮಾಡಿ ಅರೆಸ್ಟ್ ಆಗಿದ್ದಾನೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಗಳನ್ನು ಕಿಮ್ಸ್ ಆಸ್ಪತ್ರೆಗೆ (KIMS Hospital) ಕರೆದುಕೊಂಡು ಬಂದಾಗ ಪೋಷಕರು ಗರ್ಭಿಣಿಯಾದ ವಿಚಾರ ತಿಳಿದು ಶಾಕ್ ಆಗಿದ್ದಾರೆ. ಹುಬ್ಬಳ್ಳಿ ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಅಪ್ರಾಪ್ತೆಗೆ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ಆರೋಪಿ ಸದ್ದಾಂ ಹುಸೇನ್‌ನನ್ನು ಪೊಲೀಸರು ಈಗ ಬಂಧಿಸಿದ್ದಾರೆ. ಸಂತ್ರಸ್ತೆ ಸ್ನೇಹ ಬಳಸಿ ಸದ್ದಾಂ ಬಲವಂತವಾಗಿ ದೈಹಿಕ ಸಂಭೋಗ ಮಾಡಿದ್ದಾನೆ. ಜೊತೆಗೆ ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಡಿ ಆರೋಪಿಯನ್ನು ಬಂಧನ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಅಧಿಕೃತ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ನಕಲಿ ವೀಡಿಯೋ ಪ್ರಕರಣ – ಕಾಂಗ್ರೆಸ್ ಕಾರ್ಯಕರ್ತ ಅರೆಸ್ಟ್
Advertisement
Advertisement
ಹುಬ್ಬಳ್ಳಿಯ ನವನಗರ ಎಪಿಎಂಸಿ ಠಾಣೆಗೆ ಪೋಷಕರು ಮೊದಲು ದೂರು ನೀಡಿದ್ದರು. ಪ್ರಕರಣ ಬೆಳಕಿಗೆ ಬಂದು 24 ಗಂಟೆಯಾದರೂ ಎಫ್‌ಐಆರ್ (FIR) ದಾಖಲಾಗದ್ದಕ್ಕೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹಿಂದೂ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಲುಕ್‌ಔಟ್ ನೋಟಿಸ್
Advertisement
ಅಪ್ರಾಪ್ತೆ ಆಸ್ಪತ್ರೆಗೆ ಬಂದಿದ್ದುನ್ನು ಅರಿತು ಆಕೆಯ ಕುಟುಂಬಸ್ಥರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ. ಪೊಲೀಸ್ ಠಾಣೆಗೆ ದೂರು ನೀಡಿದರೆ ತಂದೆ-ತಾಯಿ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.