ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿರುವ ಭಾರತದ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ (Anant Ambani) ನಾಳೆ ಅದ್ದೂರಿಯಾಗಿ ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಜಾಮ್ ನಗರದಲ್ಲಿ ಇವರ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಬಾಲಿವುಡ್ ನ ಅನೇಕ ತಾರೆಯರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಹುಟ್ಟು ಹಬ್ಬವನ್ನು ಆಚರಿಸುವುದಕ್ಕಾಗಿ ಈಗಾಗಲೇ ಜಾಮ್ ನಗರಕ್ಕೆ ಬಾಲಿವುಡ್ ನಟರಾದ ಸಲ್ಮಾನ್ ಖಾನ್ (Salman Khan), ಜಾನ್ವಿ ಕಪೂರ್, ಓರಿ ಸೇರಿದಂತೆ ಹಲವರು ಜಾಮ್ ನಗರದ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ.
ಈ ಹಿಂದೆ ಅನಂತ್ ಅವರ ಪ್ರಿವೆಡ್ಡಿಂಗ್ ಕಾರ್ಯಕ್ರಮಕ್ಕೆ ಅನೇಕ ಸಿನಿಮಾ ತಾರೆಯರು, ಕ್ರಿಕೆಟ್ ಆಟಗಾರರು, ಮಾಡೆಲಿಂಗ್ ಕ್ಷೇತ್ರದವರು ಹಾಗೂ ಸಂಗೀತ ಕ್ಷೇತ್ರದ ಅನೇಕರು ಭಾಗಿಯಾಗಿ ಶುಭ ಹಾರೈಸಿದ್ದರು. ಈಗ ಹುಟ್ಟು ಹಬ್ಬಕ್ಕೂ ಆಯಾ ಕ್ಷೇತ್ರ ಸೆಲೆಬ್ರಿಟಿಗಳು ಸಾಕ್ಷಿಯಾಗಲು ಬರುತ್ತಿದ್ದಾರೆ.