ಮುಂಬೈ: ಬಾಲಿವುಡ್ನ ಸ್ಟಾರ್ ನಟ ಸೈಫ್ ಅಲಿ ಖಾನ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ವೇಳೆ ಅವರ 2ನೇ ಮಗನ ಮುದ್ದಾದ ಫೋಟೋ ವೈರಲ್ ಆಗಿದೆ.
ಸೈಫ್ ಅಲಿ ಖಾನ್ ಅವರ ಮೊದಲ ಪತ್ನಿಯ ಮಗಳು ಸಾರಾ ಆಲಿ ಖಾನ್ ತಂದೆಯ ಜನ್ಮದಿನಕ್ಕೆ ಶುಭಕೋರಿ ಕೆಲವು ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಜಹಾಂಗೀರ್ ಅಲಿ ಖಾನ್ ಪೋಸ್ ಗಮನ ಸೆಳೆಯುತ್ತಿದೆ. ಕರೀನಾ ತಮ್ಮ ಮುದ್ದು ಮಗನ ಫೋಟೋವನ್ನು ಇಲ್ಲಿವರೆಗೂ ಎಲ್ಲೂ ಶೇರ್ ಮಾಡಿಕೊಂಡಿಲ್ಲ. ಆದರೆ ಕೆಲವು ಬಾರಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾನೆ. ಇದನ್ನೂ ಓದಿ: ಅಫ್ಘಾನಿಸ್ತಾನದ ಸ್ಥಿತಿ ಘನಘೋರ – ವಿಮಾನದಿಂದ ಬಿದ್ದು ಮೂವರು ಸಾವು
View this post on Instagram
ಹುಟ್ಟುಹಬ್ಬದ ಶುಭಾಶಯಗಳು ಅಪ್ಪ. ನನ್ನ ಪಾಲಿನ ಸೂಪರ್ ಹೀರೋ ಆಗಿರುವುದಕ್ಕೆ ನಿಮಗೆ ಧನ್ಯವಾದಗಳು. ಬುದ್ಧಿವಂತ ಸ್ನೇಹಿತ, ಒಳ್ಳೆಯ ಮಾತುಗಾರ ಮತ್ತು ನನಗೆ ದೊಡ್ಡ ಸಪೋರ್ಟ್ರ್ ಆಗಿದ್ದೀರಿ. ಲವ್ ಯೂ ಎಂಬ ಕ್ಯಾಪ್ಷನ್ನೊಂದಿಗೆ ಸಾರಾ ಆಲಿ ಖಾನ್ ಈ ಫೋಟೋ ಶೇರ್ ಮಾಡಿದ್ದಾರೆ. ಜಹಾಂಗೀರ್ ತುಂಬಾ ಮುದ್ದಾಗಿದ್ದಾನೆ ಎಂದು ಜನರೆಲ್ಲರೂ ಕಮೆಂಟ್ ಮಾಡುತ್ತಿದ್ದಾರೆ. ಸೈಫ್ ಅವರ ಇನ್ನೋರ್ವ ಪುತ್ರ ತೈಮೂರ್ ಅಲಿ ಖಾನ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದಾನೆ. ಇದನ್ನೂ ಓದಿ: ಶಾಲೆ ಆರಂಭಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ
View this post on Instagram
ಅಭಿಮಾನಿಗಳು ಸ್ನೇಹಿತರು ಮತ್ತು ಸೆಲೆಬ್ರಿಟಿಗಳಿಂದ ಸೋಶಿಯಲ್ ಮೀಡಿಯಾ ಮೂಲಕ ಸೈಫ್ಗೆ ಶುಭಾಶಕೊರುತ್ತಿದ್ದಾರೆ. ಹಾಗೂ ಜಹಾಂಗೀರ್ ಅಲಿ ಖಾನ್ ಅನ್ನು ನೀಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.