ವಿಜಯಪುರ: ಇತ್ತೀಚಿಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ವೇಳೆ ವಿಜಯಪುರದ (Vijayapura) ಸಚಿವ ಎಂ.ಬಿ ಪಾಟೀಲ್ ಹಾಗೂ ಶಾಸಕ ಯಶವಂತರಾಯಗೌಡ ಪಾಟೀಲ್ ಮಧ್ಯೆ ಇರುವ ಗುದ್ದಾಟ ಬಯಲಾಗಿತ್ತು. ಇದೀಗ ಬರ ವೀಕ್ಷಣೆಗೆ ಬಾರದಿರುವುದು ಮುನಿಸು ಶಮನವಾಗದಿರುವುದು ಮುನ್ನೆಲೆಗೆ ಬಂದಿದೆ.
ಮುನಿಸಿಕೊಂಡಿದ್ದ ಯಶವಂತರಾಯ ಗೌಡ ಪಾಟೀಲ್ ಅವರು ರಾಜೀನಾಮೆ ಕೊಟ್ಟಿದ್ದರು. ತದನಂತರ ಸಿಎಂ ಡಿಕೆಶಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಯಶವಂತರಾಯಗೌಡ ಪಾಟೀಲ್ ಮನವಲಿಸುವಲ್ಲಿ ಯಶಸ್ವಿಯಾಗಿದ್ದರು. ಆದ್ರೆ ಸಚಿವ ಎಂ.ಬಿ ಪಾಟೀಲ್ ಹಾಗೂ ಯಶವಂತರಾಯಗೌಡ ಪಾಟೀಲ್ ಮುನಿಸು ಮಾತ್ರ ಇನ್ನು ಶಮನವಾಗಿಲ್ಲ. ಇದನ್ನೂ ಓದಿ: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ: ಮುಖ್ಯಮಂತ್ರಿ ಚಂದ್ರುಗೆ ಜೀವಮಾನ ಸಾಧನೆ ಗೌರವ
ನೂತನ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಪ್ರತಿ ಮತಕ್ಷೇತ್ರದಲ್ಲಿ ಬರ ವೀಕ್ಷಣೆ ಮಾಡಿ, ವರದಿ ನೀಡಲು ಸಿಎಂ ಡಿಕೆಶಿ ಸೂಚಿಸಿದ್ದಾರೆ. ಅದರಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಇಂಡಿ ಮತಕ್ಷೇತ್ರದಲ್ಲಿ ಬರ ವೀಕ್ಷಣೆ ಮಾಡಿದರು. ಆದ್ರೆ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಮಾತ್ರ ಗೈರಾಗಿದ್ದರು. ಗೈರಾಗುವ ಮೂಲಕ ಸಚಿವ ಎಂ.ಬಿ ಪಾಟೀಲ್‌ಗೆ ಟಾಂಗ್ ನೀಡಿದರು. ಅಸಮಧಾನ ಮುಗಿದಿಲ್ಲ ಎಂಬುದನ್ನ ಬಹಿರಂಗಪಡಿಸಿದರು.
ರಾಜ್ಯದ ಮೊದಲ ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಜಯಪುರ ಜಿಲ್ಲೆಯ ಎಂ.ಬಿ ಪಾಟೀಲ್‌ಗೆ ಮಾತ್ರ ಸಚಿವ ಸ್ಥಾನ ಒಲಿದು ಬಂದಿತ್ತು. ಎರಡನೇ ಬಾರಿಯ ಸಚಿವ ಸಂಪುಟ ವಿಸ್ತರಣೆ ವೇಳೆ ಜಿಲ್ಲೆಯ ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಹಾಗೂ ಮುದ್ದೇಬಿಹಾಳ ಮತ ಕ್ಷೇತ್ರದ ಶಾಸಕ ಸಿ.ಎಸ್ ನಾಡಗೌಡ ಅವರು ಸಚಿವ ಸ್ಥಾನಕ್ಕಾಗಿ ಭಾರಿ ಲಾಬಿ ನಡೆಸಿದ್ದರು. ಆದ್ರೆ ಇಬ್ಬರಿಗೂ ಸಚಿವ ಸ್ಥಾನ ಕೊನೆಯ ಕ್ಷಣದಲ್ಲಿ ಕೈತಪ್ಪಿತು. ಆಗ ಸಚಿವ ಸ್ಥಾನ ಕೈತಪ್ಪಲು ಸಚಿವ ಎಂ.ಬಿ ಪಾಟೀಲ್ ನೇರ ಕಾರಣ ಅಂತ ಶಾಸಕ ಯಶವಂತರಾಯ ಗೌಡ ಪಾಟೀಲ್ ಬಹಿರಂಗವಾಗಿಯೇ ಆರೋಪ ಮಾಡಿದ್ದರು. ಅಲ್ಲದೇ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆಗ ಸುರ್ಜೆವಾಲಾ, ಸಿಎಂ ಡಿಕೆಶಿ ಸೇರಿ ಹಲವಾರು ಕಾಂಗ್ರೆಸ್ ನಾಯಕರು ಯಶವಂತರಾಯಗೌಡ ಮನವಲಿಸಿ ಅಸಮಧಾನವನ್ನು ತಣ್ಣಗಾಗಿಸಿದ್ದರು. ಆದ್ರೆ ಈ ಅಸಮಧಾನ ಈಗಲೂ ಜಿಲ್ಲೆಯಲ್ಲಿ ಮುಂದುವರೆದಿದೆ.
ರಾಜ್ಯದ ಮಟ್ಟಿಗೆ ಸಚಿವ ಎಂ.ಬಿ ಪಾಟೀಲ್ ವಿರುದ್ದ ಯಶವಂತರಾಯಗೌಡ ಪಾಟೀಲ್ ಮುನಿಸು ಮುಗಿದಿದ್ದರು. ಜಿಲ್ಲೆಯಲ್ಲಿ ಇವರ ಮುನಿಸು ಮುಂದುವರೆದಿದೆ. ಈ ಮುನಿಸು, ಅಸಮಧಾನ ಮುಂದಿನ 2028ರ ವಿಧಾನಸಭೆ ಚುನಾವಣೆ ಮೇಲೆ ಭಾರಿ ಪರಿಣಾಮ ಬೀಳುವುದು ನಿಶ್ಚಿತ.ಇದನ್ನೂ ಓದಿ: PUBLiC TV Exclusive | ಅನ್ನಭಾಗ್ಯ ಅಕ್ಕಿ ಅಕ್ರಮ ಅಡ್ಡೆ ಮೇಲೆ ದಾಳಿ – ಆಹಾರ ಇಲಾಖೆ ಭರ್ಜರಿ ಕಾರ್ಯಾಚರಣೆ

