ಬಿಗ್‌ಬಾಸ್ ಕನ್ನಡ ಸೀಸನ್ 13ರ ಮೊದಲ ವಾರದ ಎಲಿಮನೇಷನ್ ಪ್ರಕ್ರಿಯೆಯಲ್ಲಿ ಸ್ಪರ್ಧಿ ಪ್ರಥಮಾ ಪ್ರಸಾದ್ ಔಟ್ ಆಗಿದ್ದಾರೆ. ದುರಾದೃಷ್ಟವಶಾತ್ ಬಿಗ್‌ಬಾಸ್ ಮನೆಯನ್ನು ಪ್ರವೇಶಿಸದೇ ಫ್ಲೈಟ್ ಜರ್ನಿಯಲ್ಲೇ ಒಂದು ವಾರವಿದ್ದು ತಮ್ಮ ಬಿಗ್‌ಬಾಸ್ ಪ್ರಯಾಣ ಮುಗಿಸಿದ್ದಾರೆ.
ಖ್ಯಾತ ನಟಿ ವಿನಯ ಪ್ರಸಾದ್ ಪುತ್ರಿ, ನಟಿಯೂ ಆಗಿರುವ ಪ್ರಥಮ ಪ್ರಸಾದ್ ಈ ಬಾರಿ ನಾಲ್ಕನೇ ಪ್ಯಾಸೆಂಜರ್ ಆಗಿ ಪ್ರಯಾಣ ಪ್ರಾರಂಭಿಸಿದ್ದರು. ಆದರೆ ಬಿಗ್‌ಬಾಸ್ ಕನ್ನಡ ಇತಿಹಾಸದಲ್ಲಿ ಮನೆ ಪ್ರವೇಶಿಸದೆ ಹೊರಟ ಸ್ಪರ್ಧಿಯಾಗಿ ಅಚ್ಚರಿಗೆ ಕಾರಣವಾಗಿದೆ ಪ್ರಥಮ ಅವ್ರ ಎವಿಕ್ಷನ್ ಪ್ರಕ್ರಿಯೆ.
ಬಿಗ್‌ಬಾಸ್‌ಗೆ ತೆರಳಿದ ಮೊದಲ ದಿನವೇ ಸ್ಪರ್ಧಿ ಕಿರಣ್ ಶಾಸ್ತ್ರಿ ಜೊತೆ ಕಿತ್ತಾಡಿಕೊಂಡು ಸುದ್ದಿಯಾದ ಪ್ರಥಮ, ಬಳಿಕ ಈ ಸ್ಪರ್ಧಿ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲಿಲ್ಲ. ಅನೇಕ ಬಾರಿ ಪ್ರಥಮ ಗಟ್ಟಿಯಾಗಿ ಮಾತನಾಡಿರುವುದೂ ಇದೆ, ಶಾಂತತೆ ಕಾಪಾಡಿಕೊಂಡಿದ್ದೂ ಇದೆ. ಆದರೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಪ್ರಥಮ ಎಡವಿದಂತಿದೆ. ಬಿಬಿಕೆ13 ಮೊದಲ ವಾರದಲ್ಲೇ ಎಲಿಮನೇಟ್ ಆಗಿ ವಾಪಸ್ ಮನೆಗೆ ಹೋಗಬೇಕಾದ ಸ್ಥಿತಿ ಎದುರಾಗಿದೆ.
ಪ್ರಥಮಾರನ್ನು ದೊಡ್ಮನೆಗೆ ಕಳಿಸಿಕೊಡಲು ತಾಯಿ ವಿನಯ ಪ್ರಸಾದ್ ಕೂಡ ಬಂದಿದ್ದರು. ಮಗಳ ಭವಿಷ್ಯ ಇನ್ನಾದ್ರೂ ಉಜ್ವಲವಾಗಲಿ ಎಂದು ಬಯಸಿದ್ದರು. ಈ ಶೋ ಮೂಲಕ ಪ್ರಥಮಾ ಅತಿಹೆಚ್ಚು ಗುರುತಿಸಿಕೊಳ್ಳಲು ಇಷ್ಟಪಟ್ಟಿದ್ದರು. ಆದರೆ ಒಂದೇ ವಾರಕ್ಕೆ ಅದರಲ್ಲೂ ಬಿಗ್‌ಬಾಸ್ ಮನೆ ಪ್ರವೇಶಿಸದೆ ನಿರ್ಗಮಿಸಿದ್ದಾರೆ.

