ನವದೆಹಲಿ: ಅಭಿಷೇಕ್ ಶರ್ಮಾ(Abhishek Sharma) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನದ(Afghanistan) ವಿರುದ್ಧ ಮೊದಲ ಪಂದ್ಯದಲ್ಲಿ ಭಾರತ(Team India) 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಶುಭಾರಂಭ ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಅಫ್ಘಾನಿಸ್ತಾನ 8 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ 13.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 157 ರನ್ ಹೊಡೆದು ಜಯಗಳಿಸಿತು.
ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ 10 ರನ್‌ಗಳಿಸಿ ಔಟಾದರೂ ಅಭಿಷೇಕ್ ಶರ್ಮಾ ತಮ್ಮ ಎಂದಿನ ಸ್ಪೋಟಕ ಬ್ಯಾಟ್ ಬೀಸಿ ಚೆಂಡನ್ನು ಮೈದಾನದ ಮೂಲೆ ಮೂಲೆಗೂ ಅಟ್ಟಿದರು.
𝐓𝐇𝐈𝐒 𝐊𝐈𝐍𝐃 𝐎𝐅 𝐇𝐈𝐓𝐓𝐈𝐍𝐆. 🤌💥
When Abhishek Sharma gets going, the bat does the talking. 🔥
Watch #AFGvIND 1st T20I, LIVE NOW on Sony Sports Ten 5 & Sony MAX.#SonySportsNetwork #SonyMAX #ExtraaaInnings pic.twitter.com/aLu13MB9JF
— Sony Sports Network (@SonySportsNetwk) September 13, 2026
22 ಎಸೆತಗಳಲ್ಲಿ ಅರ್ಧಶತಕ ಹೊಡೆದ ಶರ್ಮಾ ಅಂತಿಮವಾಗಿ 82 ರನ್(32 ಎಸೆತ, 7 ಬೌಂಡರಿ, 7 ಸಿಕ್ಸ್) ಹೊಡೆದು ಔಟಾದರು. ಅಭಿಷೇಕ್ ಶರ್ಮಾ ಮತ್ತು ಇಶನ್ ಕಿಶನ್ ಎರಡನೇ ವಿಕೆಟಿಗೆ 53 ಎಸೆತಗಳಲ್ಲಿ 121 ರನ್ ಜೊತೆಯಾಟವಾಡಿದರು. ಇಶನ್ ಕಿಶನ್ 42 ರನ್(33 ಎಸೆತ, 5 ಬೌಂಡರಿ, 1 ಸಿಕ್ಸ್) ಹೊಡೆದು ಔಟಾದರು.
ಕೊನೆಯಲ್ಲಿ ಶ್ರೇಯಸ್ ಅಯ್ಯರ್ ಔಟಾಗದೇ 8 ರನ್, ತಿಲಕ್ ವರ್ಮಾ ಔಟಾಗದೇ 3 ರನ್ ಹೊಡೆಯುವ ಮೂಲಕ ಭಾರತಕ್ಕೆ ಜಯವನ್ನು ತಂದುಕೊಟ್ಟರು.
𝐓𝐇𝐀𝐓 𝐎𝐍𝐄 𝐖𝐄𝐍𝐓 𝐔𝐏! 🚀
Ishan Kishan absolutely smokes one into the second tier! 😮💨💣
Watch #AFGvIND 1st T20I, LIVE NOW on Sony Sports Ten 5 & Sony MAX.#SonySportsNetwork #SonyMAX pic.twitter.com/Nv98ZhPl1O
— Sony Sports Network (@SonySportsNetwk) September 13, 2026
ಆರಭದಲ್ಲಿ ಕುಸಿತ, ಮತ್ತೆ ಚೇತರಿಕೆ:
ಹಾಗೆ ನೋಡಿದರೆ ಅಫ್ಘಾನಿಸ್ತಾನ 6.6 ಓವರ್‌ಗಳಲ್ಲಿ 43 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ಅಜ್ಮತುಲ್ಲಾ ಒಮರ್ಜಾಯ್ ಮತ್ತು ಮೊಹಮ್ಮದ್ ನಬಿ 58 ಎಸೆತಗಳಲ್ಲಿ 83 ರನ್ ಜೊತೆಯಾಟವಾಡಿದರು.
ಅಜ್ಮತುಲ್ಲಾ 64 ರನ್(44 ಎಸೆತ, 4 ಬೌಂಡರಿ, 4 ಸಿಕ್ಸ್) ಚಚ್ಚಿದರೆ ಮೊಹಮ್ಮದ್ ನಬಿ 33 ರನ್(27 ಎಸೆತ, 2 ಬೌಂಡರಿ, 2 ಸಿಕ್ಸ್) ಹೊಡೆದು ಔಟಾದರು. ಭಾರತ 21 ರನ್‌ಗಳನ್ನು ಇತರೇ ರೂಪ( ಬೈ 1, ಲೆಗ್‌ಬೈ 8, ನೋಬಾಲ್ 2, ವೈಡ್ 10) ಎಸೆದ ಪರಿಣಾಮ ಅಫ್ಘಾನಿಸ್ತಾನ 150 ರನ್‌ಗಳ ಗಡಿಯನ್ನು ದಾಟಿತ್ತು.
ಆರ್ಶದೀಪ್ 3 ವಿಕೆಟ್ ಪಡೆದರೆ ಬುಮ್ರಾ ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಕಿತ್ತರು.

