– ಚಿನ್ನಸ್ವಾಮಿಯಲ್ಲಿಂದು ಆರ್‌ಸಿಬಿಯ 100ನೇ ಪಂದ್ಯ
ಬೆಂಗಳೂರು: ಪ್ರತಿ ಐಪಿಎಲ್ (IPL) ಸೀಸನ್‌ನ ಒಂದು ಪಂದ್ಯದಲ್ಲಿ ಆರ್‌ಸಿಬಿ (RCB) ಹಸಿರು ಜೆರ್ಸಿಯಲ್ಲಿ ಆಡುವ ರೂಢಿಯಿದೆ. ಅಂದರಂತೆ ಇಂದು (ಏ.18) ಡೆಲ್ಲಿ (Delhi Capitals) ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ತಂಡ ಹಸಿರು ಜೆರ್ಸಿಯಲ್ಲಿ (Green Jersey) ಕಣಕ್ಕಿಳಿಯಲಿದೆ.
ಪ್ರತಿ ಆವೃತ್ತಿಯಲ್ಲಿಯೂ ಗ್ರೀನ್ ಜೆರ್ಸಿ ಧರಿಸುವ ಮೂಲಕ ಆರ್‌ಸಿಬಿ ತಂಡ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತದೆ. ಇದರ ಇನ್ನೊಂದು ವಿಶೇಷತೆಯೆಂದರೆ ಆಟಗಾರರು ಧರಿಸಿರುವ ಎಲ್ಲಾ ಜೆರ್ಸಿಗಳು ಮರುಬಳಕೆಯಾಗಬಲ್ಲ ವಸ್ತುಗಳಿಂದ ತಯಾರಿಸಲಾಗಿರುತ್ತದೆ. ಪರಿಸರದ ಬಗ್ಗೆ ಕಾಳಜಿ ಮೂಡಿಸಬೇಕೆನ್ನುವ ದೃಷ್ಟಿಯಿಂದ 2011ರಿಂದಲೂ ಆರ್‌ಸಿಬಿ ತಂಡ ಆವೃತ್ತಿಯ 1 ಪಂದ್ಯದಲ್ಲಿ ಹಸಿರು ಜೆರ್ಸಿ ಧರಿಸುವುದು ವಾಡಿಕೆ. ಇದನ್ನೂ ಓದಿ: ಸಿಎಸ್‌ಕೆ ಬಸ್ ಹತ್ತಿದ ಧೋನಿ – ಎಸ್‌ಆರ್‌ಹೆಚ್ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಳ್ತಾರಾ ತಲಾ?

One of our most special match days of this season is finally here. 🤩💚
Our boys are max excited to step into the Chinnaswamy for the 💯th time in #IPL.
Let’s keep our 𝐖 run going boys. 👊🔥✨
Catch all the updates – before, during, and after the match – only on @cricbuzz 📲… pic.twitter.com/ZNl8JXjPQl
— Royal Challengers Bengaluru (@RCBTweets) April 18, 2026
ಈ ಕುರಿತು ಆರ್‌ಸಿಬಿ ಕೂಡ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಆವೃತ್ತಿಯ ವಿಶೇಷ ದಿನವಿಂದು. ಆಟಗಾರರು ಹಸಿರು ಜೆರ್ಸಿಯಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಚಿನ್ನಸ್ವಾಮಿಯಲ್ಲಿ ಆಡುತ್ತಿರುವ 100ನೇ ಪಂದ್ಯ ಇದಾಗಿದೆ. ಸಂಪ್ರದಾಯಕ್ಕಿಂದ ಇದೊಂದು ಹೆಮ್ಮೆ ಎಂದು ತಿಳಿಸಿದೆ.
𝗜𝘁’𝘀 𝘁𝗵𝗮𝘁 𝘁𝗶𝗺𝗲 𝗼𝗳 𝘁𝗵𝗲 𝘆𝗲𝗮𝗿 𝗮𝗴𝗮𝗶𝗻 – 𝗹𝗲𝘁’𝘀 𝗚𝗼 𝗚𝗿𝗲𝗲𝗻! 😍💚
More than a tradition. A purpose we wear with pride. 🙌
Tomorrow, our boys take the field donning the Green Jersey against Delhi, to raise awareness by pledging to protect the… pic.twitter.com/UzvgUdXllf
— Royal Challengers Bengaluru (@RCBTweets) April 17, 2026
ಈವರೆಗೆ ಆರ್‌ಸಿಬಿ 5 ಪಂದ್ಯಗಳನ್ನಾಡಿದ್ದು, ಈ ಪೈಕಿ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದಿರಿಸಿಕೊಂಡಿದೆ.ಇದನ್ನೂ ಓದಿ:ತವರಿನಲ್ಲೇ ತಿಣುಕಾಡಿ ಗೆದ್ದ ಗುಜರಾತ್ – ಕೆಕೆಆರ್‌ಗೆ ಡಬಲ್ ಹ್ಯಾಟ್ರಿಕ್ ಸೋಲು

