BollywoodCinemaLatestMain Post

ಸೆಕ್ಸಿ ಲುಕ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬೋಲ್ಡ್ ಆಗಿ ಪೋಸ್ ಕೊಟ್ಟ ರಶ್ಮಿಕಾ ಮಂದಣ್ಣ

ನ್ನಡತಿ ರಶ್ಮಿಕಾ ಮಂದಣ್ಣ ಈಗ ಸೌತ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಮಿರ ಮಿರ ಅಂತಾ ಮಿಂಚುತ್ತಿದ್ದಾರೆ. ಸದ್ಯ ಬಾಲಿವುಡ್‌ನ ತಮ್ಮ ಡೆಬ್ಯೂ ಚಿತ್ರ `ಗುಡ್ ಬೈ’ ಚಿತ್ರದ ಟ್ರೈಲರ್ ಲಾಂಚ್‌ನಲ್ಲಿ ಸಖತ್ ಹಾಟ್ ಆ್ಯಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ.

ಕನ್ನಡ ಚಿತ್ರರಂಗ ಮತ್ತು ದಕ್ಷಿಣದ ಸಿನಿಮಾಗಳಲ್ಲಿ ಮಿಂಚಿದ ನಂತರ ಬಿಟೌನ್‌ನಲ್ಲಿ ಮಿಂಚಲು ಶ್ರೀವಲ್ಲಿ ಸಜ್ಜಾಗಿದ್ದಾರೆ. ಸದ್ಯ ಅಮಿತಾಭ್ ಬಚ್ಚನ್ ಮತ್ತು ರಶ್ಮಿಕಾ ನಟನೆಯ `ಗುಡ್ ಬೈ’ ಚಿತ್ರದ ಮೂಲಕ ಬಿಟೌನ್‌ನಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡ್ತಿದ್ದಾರೆ. ಇನ್ನೂ ಈ ಚಿತ್ರದ ಟ್ರೈಲರ್ ಲಾಂಚ್‌ನಲ್ಲಿ ಸಖತ್ ಬೋಲ್ಡ್ ಬ್ಯೂಟಿಫುಲ್ ಆಗಿ, ರಶ್ಮಿಕಾ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.‌ ಇದನ್ನೂ ಓದಿ:ನಟ ಧನಂಜಯ್ ಮತ್ತು ಅದಿತಿ ಪ್ರಭುದೇವ್ ರಿಯಲ್ ಆಗಿ ಮದುವೆ ಆಗ್ಬೇಕಿತ್ತು: ಆದರೆ ತಪ್ಪಿಸಿದವರು ಯಾರು?

ಇನ್ನೂ `ಗುಡ್ ಬೈ’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ರಶ್ಮಿಕಾ, ಬಿಗ್ ಬಿ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂದೂ ಮಾಡಿರದ ಭಿನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ.

 

View this post on Instagram

 

A post shared by Viral Bhayani (@viralbhayani)

ಬೋಲ್ಡ್ ಪಾತ್ರಗಳಲ್ಲಿ ಮಿಂಚುತ್ತಿದ್ದ ರಶ್ಮಿಕಾ, ಈ ಚಿತ್ರದಲ್ಲಿ ಮಧ್ಯಮ ವರ್ಗದ ಹುಡುಗಿಯಾಗಿ ಸಿಂಪಲ್ ಲುಕ್‌ನಲ್ಲಿ ಮಿಂಚಿದ್ದಾರೆ. ನಟನೆಗೆ ಹೆಚ್ಚು ಸ್ಕೋಪ್ ಇರುವ ರೋಲ್‌ನಲ್ಲಿ ರಶ್ಮಿಕಾ ನಟಿಸಿದ್ದಾರೆ. `ಗುಡ್ ಬೈ’ ಚಿತ್ರ ಅಕ್ಟೋಬರ್ 7ಕ್ಕೆ ತೆರೆಗೆ ಬರಲು ಸಜ್ಜಾಗಿದೆ.

Live Tv

Leave a Reply

Your email address will not be published.

Back to top button