ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಇದೀಗ ಅಯೋಧ್ಯೆಯಲ್ಲಿ (Ayodhya) ಕೋಟಿ ಮೌಲ್ಯದ ಭೂಮಿ ಖರೀದಿಸಿರುವ ಸುದ್ದಿ ಸಿನಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ರಾಮಾಯಣ ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿರುವ ರಣಬೀರ್ ಕಪೂರ್, ಇದೀಗ ಅಯೋಧ್ಯೆಯಲ್ಲೇ ಭೂಮಿ ಖರೀದಿಸಿರುವುದು ವಿಶೇಷ ಗಮನ ಸೆಳೆದಿದೆ. ಇದನ್ನೂ ಓದಿ: ಚೈತ್ರಾ ಆಚಾರ್ ಪೋಸ್ಟ್‌ಗೆ ಅಸಭ್ಯ ಕಾಮೆಂಟ್ – ಪೊಲೀಸ್ ಪೇದೆ ವಿರುದ್ಧ ನಟಿ ಕೆಂಡಾಮಂಡಲ
ಅಯೋಧ್ಯೆಯ ಸರಯೂ ನದಿಯ ದಡದಲ್ಲಿರುವ ದಿ ಸರಯೂ ಎಂಬ ಪ್ರೀಮಿಯಂ ಪ್ರಾಜೆಕ್ಟ್‌ನಲ್ಲಿ ರಣಬೀರ್ ಕಪೂರ್ ಸುಮಾರು 3.31 ಕೋಟಿ ರೂ. ಮೌಲ್ಯದ ಭೂಮಿಯನ್ನು ಖರೀದಿಸಿದ್ದಾರೆ ಎಂದು ರಿಯಲ್ ಎಸ್ಟೇಟ್ ಸಂಸ್ಥೆ ತಿಳಿಸಿದೆ. ಸುಮಾರು 2,134 ಚದರ ಅಡಿ ವಿಸ್ತೀರ್ಣದ ಈ ಜಾಗವು 75 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಐಷಾರಾಮಿ ಯೋಜನೆಯ ಭಾಗವಾಗಿದೆ.
ಈ ಪ್ರಾಜೆಕ್ಟ್‌ನಲ್ಲಿ ಕ್ಲಬ್‌ಹೌಸ್, ಲೈಫ್‌ಸ್ಟೈಲ್ ಸೌಲಭ್ಯಗಳು ಹಾಗೂ ‘ದಿ ಲೀಲಾ’ ನಿರ್ವಹಣೆಯ ಐಷಾರಾಮಿ ಹೋಟೆಲ್ ಕೂಡ ಇರಲಿದೆ ಎಂದು ಹೇಳಲಾಗಿದೆ. ಅಯೋಧ್ಯೆ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಹಿನ್ನೆಲೆ ರಣಬೀರ್ ಅವರ ಈ ಭೂಮಿ ಮೇಲಿನ ಹೂಡಿಕೆ ಎಲ್ಲರ ಗಮನ ಸೆಳೆದಿದೆ.ಇದನ್ನೂ ಓದಿ: ಒಪ್ಪಿಕೊಂಡೇ ದೂರವಾಗುತ್ತಿದ್ದೇವೆ – ಡಿವೋರ್ಸ್ ಬಗ್ಗೆ ಕೊನೆಗೂ ಮೌನಮುರಿದ ಮೌನಿ ರಾಯ್, ಸೂರಜ್ ನಂಬಿಯಾರ್
ಭೂಮಿ ಖರೀದಿ ಬಗ್ಗೆ ಮಾತನಾಡಿದ ರಣಬೀರ್ ಕಪೂರ್, ಅಯೋಧ್ಯೆಯೇ ನನ್ನನ್ನು ಆಯ್ಕೆ ಮಾಡಿಕೊಂಡಂತೆ ಅನ್ನಿಸುತ್ತದೆ. ಇದು ಕೇವಲ ಹೂಡಿಕೆ ಅಲ್ಲ, ನನ್ನ ಕುಟುಂಬದ ಪರಂಪರೆಯ ಭಾಗವಾಗಲಿದೆ ಎಂದು ಹೇಳಿದ್ದಾರೆ. ಅಯೋಧ್ಯೆ ಭಾರತೀಯ ಸಂಸ್ಕೃತಿ ಮತ್ತು ಇತಿಹಾಸದ ಮಹತ್ವದ ಭಾಗವಾಗಿದ್ದು, ಇಲ್ಲಿ ಮನೆ ಹೊಂದುವುದು ವಿಶೇಷ ಅನುಭವ ಎಂದು ಅವರು ತಿಳಿಸಿದ್ದಾರೆ.
ಇದೀಗ ರಣಬೀರ್ ನಟಿಸುತ್ತಿರುವ ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಕಾರಣಕ್ಕೂ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಮನ ಪಾತ್ರ ಮಾಡುತ್ತಿರುವ ಸಮಯದಲ್ಲೇ ಅಯೋಧ್ಯೆಯಲ್ಲಿ ಭೂಮಿ ಖರೀದಿಸಿರುವುದು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಇನ್ನೊಂದೆಡೆ, ಅಯೋಧ್ಯೆ ದೇಶದ ಪ್ರಮುಖ ಆಧ್ಯಾತ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿದೆ. ರಾಮ ಮಂದಿರ ನಿರ್ಮಾಣದ ಬಳಿಕ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರು ಅಯೋಧ್ಯೆಗೆ ಭೇಟಿ ನೀಡುತ್ತಿದ್ದು, ಇದರಿಂದ ಅಲ್ಲಿನ ರಿಯಲ್ ಎಸ್ಟೇಟ್ ಕ್ಷೇತ್ರವೂ ಭಾರೀ ಬೆಳವಣಿಗೆ ಕಾಣುತ್ತಿದೆ.ಇದನ್ನೂ ಓದಿ: ಸಿಎಂ ವಿಜಯ್ ವಿಶೇಷ ಅನುಮತಿ ನಡುವೆಯೂ ಕೊನೆ ಕ್ಷಣದಲ್ಲಿ ತ್ರಿಶಾ ಸಿನೆಮಾ ‘ಕರುಪ್ಪ್’ ಶೋ ರದ್ದು

