ಕನ್ನಡದ ಖ್ಯಾತ ನಟಿ ಚೈತ್ರಾ ಆಚಾರ್ (Chaitra Achar) ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಸಭ್ಯವಾಗಿ ಕಾಮೆಂಟ್ ಮಾಡಿ ಪೊಲೀಸ್ ಅಧಿಕಾರಿಯೊಬ್ಬರು ಕಿರುಕುಳ ನೀಡಿದ್ದಾರೆ. ಈ ವಿಷಯವನ್ನು ನಟಿ ಸ್ವತಃ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯ ಮೂಲಕ ಹಂಚಿಕೊಂಡಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಸಿನಿ ಪ್ರೇಕ್ಷಕರ ಮನಗೆದ್ದಿರುವ ಚೈತ್ರಾ ಆಚಾರ್ ಅವರ ಬೋಲ್ಡ್ ಲುಕ್‌ನ ಫೋಟೋಗಳಿಗೆ ಮಹೇಶ್ ಹೊಸಮನಿ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಿಂದ ಅಸಭ್ಯ ಕಾಮೆಂಟ್ ಮಾಡಲಾಗಿದೆ. ಇದನ್ನೂ ಓದಿ: ದರ್ಶನ್‌ಗೆ ಭಾರೀ ಹಿನ್ನಡೆ| ಇನ್ನೂ 1 ವರ್ಷ ಜೈಲು ಫಿಕ್ಸ್ – ಕೋರ್ಟ್ ಆದೇಶದಲ್ಲಿ ಏನಿದೆ?
ನಟಿ ಚೈತ್ರಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅವರ ಫೋಟೋಗಳಿಗೆ ಪೊಲೀಸ್ ಸಮವಸ್ತ್ರದಲ್ಲಿರುವ ವ್ಯಕ್ತಿಯೊಬ್ಬರು ಈ ರೀತಿಯ ಪದ ಬಳಕೆ ಮಾಡಿರುವುದಕ್ಕೆ ನಟಿ ಗರಂ ಆಗಿದ್ದಾರೆ. ಚೈತ್ರಾ ಆಚಾರ್ ಆ ವ್ಯಕ್ತಿಯ ಮೆಸೇಜ್‌ಗಳನ್ನು ಸ್ಕ್ರೀನ್‌ಶಾಟ್ ತೆಗೆದು ಬೆಂಗಳೂರು ಸಿಟಿ ಪೊಲೀಸ್ ಅವರನ್ನು ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮಹೇಶ್ ಹೊಸಮನಿ ನಟಿಗೆ ಕ್ಷಮೆಯಾಚಿದ್ದಾರೆ. ಸಾರಿ ಮೇಡಂ, ತಪ್ಪಾಗಿದೆ. ನಿಮ್ಮ ಮೇಲಿನ ಕಾಳಜಿಯಿಂದಲೇ ಮೆಸೇಜ್ ಹಾಕಿದ್ದೆ. ದಯವಿಟ್ಟು ಪೋಸ್ಟ್ ತೆಗೆದುಹಾಕಿ. ಇದು ನನ್ನ ಕರಿಯರ್‌ಗೆ ಸಮಸ್ಯೆಯಾಗುತ್ತದೆ ಎಂದು ಅವರು ಮನವಿ ಮಾಡಿರುವ ಸ್ಕ್ರೀನ್‌ಶಾಟ್‌ನನ್ನೂ ನಟಿ ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಜಮೀನು ವ್ಯಾಜ್ಯ; ನಿರ್ದೇಶಕ ಟಿ.ಎನ್.ಸೀತಾರಾಮ್ ಪ್ರಕರಣಕ್ಕೆ ಹೈಕೋರ್ಟ್ ತಡೆ

