Thursday, 22nd August 2019

ಕಾರಿನಲ್ಲಿ ಕೆಲಸ ಮುಗಿಸಿ ಪ್ಯಾಂಟ್ ಹಾಕಲು ಮರೆತ ರಕುಲ್- ಅಭಿಮಾನಿಯ ಟ್ವೀಟ್‍ಗೆ ನಟಿ ತಿರುಗೇಟು

ಹೈದರಾಬಾದ್: ಟಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಅವರು ಅಭಿಮಾನಿಯ ಟ್ವೀಟ್‍ಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ರಕುಲ್ ಶಾಟ್ಸ್ ಧರಿಸಿ ಕಾರಿನಿಂದ ಹೊರಗೆ ಬರುತ್ತಿದ್ದ ವೇಳೆ ಯಾರೋ ಅವರ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅದಕ್ಕೆ ಅಭಿಮಾನಿ ಒಬ್ಬ ಫೋಟೋ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡಿ ಟ್ರೋಲ್ ಮಾಡಿದ್ದಾನೆ. ಭಗತ್ ಎಂಬವನು ತನ್ನ ಟ್ವಿಟ್ಟರಿನಲ್ಲಿ ರಕುಲ್ ಕಾರಿನಿಂದ ಹೊರಗೆ ಬರುತ್ತಿರುವ ಫೋಟೋ ಹಾಕಿ ಅದಕ್ಕೆ, “ಕಾರಿನಲ್ಲಿ ಎಲ್ಲ ಮುಗಿದ ಮೇಲೆ ಆಕೆ ಪ್ಯಾಂಟ್ ಧರಿಸಲು ಮರೆತಿದ್ದಾಳೆ” ಎಂದು ಟ್ವೀಟ್ ಮಾಡಿದ್ದಾನೆ.

ಭಗತ್ ಟ್ವೀಟ್‍ಗೆ ರಕುಲ್ ಪ್ರತಿಕ್ರಿಯಿಸಿ, “ನಿನ್ನ ತಾಯಿ ಕೂಡ ಕಾರಿನಲ್ಲಿ ಎಲ್ಲ ಸೆಶನ್ ನಡೆಸಿದ್ದಾಳೆ ಎನಿಸುತ್ತಿದೆ. ಹಾಗಾಗಿ ನೀನು ಇಷ್ಟು ಎಕ್ಸ್ ಪರ್ಟ್ ಆಗಿದ್ದೀಯಾ. ನಿನ್ನ ತಾಯಿಗೆ ಈ ಸೆಶನ್ ಮಾಹಿತಿಗಳನ್ನು ಹೊರತುಪಡಿಸಿ ನಿನಗೆ ಸ್ವಲ್ಪ ಬುದ್ದಿ ಹೇಳಿಕೊಡು ಎಂದು ಕೇಳಿಕೊಳ್ಳುತ್ತೇನೆ. ನಿಮ್ಮಂತಹ ಜನರು ಇರುವವರೆಗೂ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಸಮಾನತೆ ಬಗ್ಗೆ ಚರ್ಚೆ ಮಾಡುವುದರಿಂದ ಮಹಿಳೆಯರಿಗೆ ರಕ್ಷಣೆ ಸಿಗುವುದಿಲ್ಲ” ಎಂದು ಖಡಕ್ ಆಗಿ ಟ್ವೀಟ್ ಮಾಡಿದ್ದಾರೆ.

ರಕುಲ್ ಅವರ ಈ ಟ್ವೀಟ್‍ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಆಕ್ರೋಶ ಹೊರ ಹಾಕಿದ್ದಾರೆ. ಕೆಲವರು ರಕುಲ್ ನೀವು ಆ ವ್ಯಕ್ತಿಗೆ ಒಳ್ಳೆಯ ಪ್ರತಿಕ್ರಿಯೆ ನೀಡಿದ್ದೀರಿ ಎಂದು ನಟಿಯ ಪರವಾಗಿ ಮಾತನಾಡಿದರೆ, ಮತ್ತೆ ಕೆಲವರು ಆತ ಮಾತನಾಡಿದ್ದು ತಪ್ಪು ಎಂದು ಒಪ್ಪಿಕೊಳ್ಳುತ್ತೇವೆ. ಆದರೆ ಆತ ಮಾಡಿದ ತಪ್ಪಿಗೆ ನೀವು ಆತನ ತಾಯಿಯ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ರಕುಲ್ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

 

View this post on Instagram

 

@rakulpreet snapped in Bandra today #instadaily #rakulpreet #spotted #papped #manavmanglani @manav.manglani

A post shared by Manav Manglani (@manav.manglani) on


ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *