ಮುಂದಿನ ವರ್ಷ ಪುಣ್ಯಕೋಟಿಯಾಗಲಿದ್ದಾರೆ ರಕ್ಷಿತ್ ಶೆಟ್ಟಿ!

1 Min Read

ಬೆಂಗಳೂರು: ಈಗೊಂದಷ್ಟು ದಿನಗಳಿಂದ ಬರೀ ಬ್ರೇಕಪ್ ವಿಚಾರದಲ್ಲಿಯೇ ಸುದ್ದಿ ಕೇಂದ್ರದಲ್ಲಿದ್ದವರು ರಕ್ಷಿತ್ ಶೆಟ್ಟಿ. ರಶ್ಮಿಕಾ ಮಂದಣ್ಣ ಜೊತೆ ಮುರಿದು ಬಿದ್ದ ಸಂಬಂಧದಿಂದ ಮನುಷ್ಯ ಸಹಜ ವ್ಯಾಕುಲಕ್ಕೊಳಗಾಗಿದ್ದ ರಕ್ಷಿತ್ ಇದೀಗ ಮತ್ತದೇ ಹುರುಪಿನಿಂದ ಮೈ ಕೊಡವಿಕೊಂಡು ಮೇಲೆದ್ದಿದ್ದಾರೆ. ಅವರು ಮತ್ತೆ ನಿರ್ದೇಶನಕ್ಕಿಳಿಯುವ ಸೂಚನೆಯನ್ನೂ ನೀಡಿದ್ದಾರೆ!

ರಕ್ಷಿತ್ ಶೆಟ್ಟಿ ಮತ್ತೆ ನಿರ್ದೇಶನದತ್ತ ಮುಖ ಮಾಡಲಿರೋದು ಪಕ್ಕಾ. ಆ ಚಿತ್ರಕ್ಕೆ ಪುಣ್ಯಕೋಟಿ ಎಂದೂ ನಾಮಕರಣ ಮಾಡಲಾಗಿದೆ. ಪುಣ್ಯಕೋಟಿ ಕಥೆಯ ಸಾರ ಹೊತ್ತ ಈ ಚಿತ್ರ ಮುಂದಿನ ವರ್ಷದ ಅಕ್ಟೋಬರ್ ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದೂ ರಕ್ಷಿತ್ ಸುಳಿವು ನೀಡಿದ್ದಾರೆ.

ರಕ್ಷಿತ್ ಶೆಟ್ಟಿ ತಮ್ಮೊಳಗೊಬ್ಬ ಭಿನ್ನ ದೃಷ್ಟಿಯ ನಿರ್ದೇಶಕನಿದ್ದಾನೆಂಬುದನ್ನು ಉಳಿದವರು ಕಂಡಂತೆ ಚಿತ್ರದ ಮೂಲಕವೇ ಸಾಬೀತುಗೊಳಿಸಿದ್ದರು. ಆದರೆ ಆ ನಂತರದಲ್ಲಿ ನಟನೆಯಲ್ಲಿ ಬ್ಯುಸಿಯಾಗಿದ್ದ ಅವರು ಇದೀಗ ಬಹಳ ಕಾಲದ ನಂತರ ಮತ್ತೆ ನಿರ್ದೇಶನದತ್ತ ಮರಳೋ ಮನಸು ಮಾಡಿದ್ದಾರೆ.

ಈಗವರು ಅವನೇ ಶ್ರೀಮನ್ನಾರಾಯಣ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅದಾದ ನಂತರ ಚಾರ್ಲಿ 777 ಚಿತ್ರ ಮುಕ್ತಾಯಗೊಳಿಸಬೇಕಾಗಿದೆ. ಅದಾದ ಬಳಿಕ ಪುಣ್ಯಕೋಟಿಗೆ ಚಾಲನೆ ಸಿಗಲಿದೆ. ಸದ್ಯ ಸಿಕ್ಕ ಚೂರು ಪಾರು ಬಿಡುವಿನಲ್ಲಿಯೇ ಅವರು ಸ್ಕ್ರಿಪ್ಟ್ ರೆಡಿ ಮಾಡಿಕೊಳ್ಳುತ್ತಿದ್ದಾರಂತೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *