ಕನ್ನಡದ ಹೆಸರಾಂತ ಲಹರಿ ಸಂಸ್ಥೆಯ ಲಹರಿ ಫಿಲ್ಮ್ಸ್ (Lahari Films) ಹಾಗೂ ಚಾಯ್ ಬಿಸ್ಕೆಟ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಾಣ ಮಾಡಿದ್ದ ತೆಲುಗಿನ (Telugu) ‘ಮೇಮ್ ಫೇಮಸ್’ (Meme Famous) ಸಿನಿಮಾ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಹುಬಲಿ ಖ್ಯಾತಿಯ ರಾಜಮೌಳಿ (Rajamouli), ಖ್ಯಾತನಟ ಮಹೇಶ್ ಬಾಬು, ರಾಜಮೌಳಿ ಪುತ್ರ ಎಸ್.ಎಸ್ ಕಾರ್ತೀಕೇಯ ಕೂಡ ಸಿನಿಮಾ ಮೆಚ್ಚಿ ಮಾತನಾಡಿದ್ದಾರೆ.
- Advertisement 2
‘ತುಂಬಾ ದಿನಗಳ ನಂತರ ಥಿಯೇಟರ್ ಹೋಗಿ ಸಿನಿಮಾವೊಂದನ್ನು ಎಂಜಾಯ್ ಮಾಡಿದೆ. ಪ್ರತಿಭಾವಂತ ಟೀಮ್ ಸೇರಿಕೊಂಡು ಮಾಡಿರುವ ಸಿನಿಮಾ ಮೇಮ್ ಫೇಮಸ್. ಸಹಜ ಅಭಿನಯ, ಹೊಸದಾದ ನಿರೂಪಣೆ. ಸಖತ್ ಮನರಂಜನೆಯನ್ನು ಈ ಸಿನಿಮಾ ನೀಡಿದೆ. ಈ ಸಿನಿಮಾದ ನಟ ಹಾಗೂ ನಿರ್ದೇಶಕರಿಗೆ ಉತ್ತಮ ಭವಿಷ್ಯವಿದೆ. ಅದರಲ್ಲೂ ಅಂಜಿ ಮಾಮಾ ತುಂಬಾ ಕಾಡುತ್ತಾನೆ’ ಎಂದು ರಾಜಮೌಳಿ ಟ್ವೀಟ್ ಮಾಡಿದೆ.
- Advertisement 3
- Advertisement 4
ಸ್ಟಾರ್ ನಟ ಮಹೇಶ್ ಬಾಬು (Mahesh Babu) ಕೂಡ ಸಿನಿಮಾ ಬಗ್ಗೆ ಮೆಚ್ಚಿ ಟ್ವೀಟ್ ಮಾಡಿದ್ದು, ‘ಈಗ ತಾನೆ ಮೇಮ್ ಫೇಮಸ್ ಸಿನಿಮಾ ನೋಡಿದೆ. ಪ್ರತಿಭಾವಂತ ಪಡೆಯೇ ಸಿನಿಮಾದಲ್ಲಿದೆ. ಬರಹಗಾರರು, ನಿರ್ದೇಶಕ, ನಟ ಎಲ್ಲರೂ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಹಿನ್ನೆಲೆ ಸಂಗೀತ, ದೃಶ್ಯ ಎಲ್ಲವೂ ಸಿನಿಮಾಗೆ ಮತ್ತಷ್ಟು ಶಕ್ತಿ ತುಂಬಿವೆ. ಪ್ರತಿಭಾವಂತರೇ ಈ ಸಿನಿಮಾಗಾಗಿ ಒಂದಾಗಿದ್ದಾರೆ’ ಎಂದು ಬರೆದಿದ್ದಾರೆ. ಇದನ್ನೂ ಓದಿ:ಸರಕಾರದ ಮುಂದೆ ಹಳೆ ಬೇಡಿಕೆ ಇಟ್ಟ ರಿಷಬ್ ಶೆಟ್ಟಿ
ಯೂಟ್ಯೂಬ್ ಮೂಲಕ ಮನೆಮಾತಾಗಿದ್ದ ಸುಮತ್ ಪ್ರಭಾಸ್ ನಟನೆಯ ಸಿನಿಮಾ ಇದಾಗಿದ್ದು, ಕನ್ನಡದ ಹೆಸರಾಂತ ಸಂಗೀತ ಸಂಸ್ಥೆ ಲಹರಿ ಸಂಸ್ಥೆಯ ಚಂದ್ರು ಮನೋಹರನ್ (Chandru Manoharan) ಹಾಗೂ ಚಾಯ್ ಬಿಸ್ಕೆಟ್ ಫಿಲ್ಮ್ಸ್ ಜೊತೆಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಲಹರಿ ಫಿಲ್ಮಸ್ ನಿಂದ ಮೂಡಿ ಬರುತ್ತಿರುವ ತೆಲುಗಿನ ಎರಡನೇ ಸಿನಿಮಾವಾಗಿದೆ. ಈ ಹಿಂದೆ ‘ರೈಟರ್ ಪದ್ಮಭೂಷಣ್’ ಸಿನಿಮಾವನ್ನು ಲಹರಿ ಸಂಸ್ಥೆ ತೆಲುಗಿನಲ್ಲಿ ನಿರ್ಮಾಣವಾಗಿತ್ತು. ಹತ್ತು ದಿನದಲ್ಲಿ ಈ ಸಿನಿಮಾ 10.1 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿತ್ತು.
ಮೂರು ದಿನಗಳ ಹಿಂದೆ ರಿಲೀಸ್ ಆಗಿರುವ ‘ಮೇಮ್ ಫೇಮಸ್’ ಸಿನಿಮಾ ಕೂಡ ತೆಲುಗು ಚಿತ್ರೋದ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೂರೇ ದಿನಕ್ಕೆ 3.1 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹಾಗಾಗಿ ತೆಲುಗು ಚಿತ್ರೋದ್ಯಮ ಅನೇಕರು ಸಿನಿಮಾ ಮೆಚ್ಚಿ ಮಾತನಾಡುತ್ತಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಚಿತ್ರತಂಡದ ಬಗ್ಗೆ ಅಭಿಮಾನದ ನುಡಿಗಳನ್ನು ಬರೆಯುತ್ತಿದ್ದಾರೆ.